ಉತ್ತರ ಕರ್ನಾಟಕ-ಕರಾವಳಿ ಸಂಪರ್ಕಿಸುವ ರೈಲು ಸೇವೆ ವಿಸ್ತರಣೆ
ಮಂಗಳೂರು, ಸೆಪ್ಟೆಂಬರ್ 04: ನೈಋತ್ಯ ರೈಲ್ವೆ ಉತ್ತರ ಕರ್ನಾಟಕ ಮತ್ತು ಕರಾವಳಿ ಸಂಪರ್ಕಿಸುವ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈಗಿರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಈ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಆದರೆ ಈ ರೈಲು ಸೇವೆಯನ್ನು ಖಾಯಂಗೊಳಿಸಬೇಕು ಎಂಬ ಪ್ರಯಾಣಿಕರ ಬೇಡಿಕೆ ಈ ಬಾರಿಯೂ ಈಡೇರಿಲ್ಲ.
ವಿಜಯಪುರ- ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚಾರ ನಡೆಸುವ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶವನ್ನು ಹೊರಡಿಸಿದೆ. ಪ್ರಯಾಣಿಕರಿಂದ ಉತ್ತಮ ಬೇಡಿಕೆ ಇರುವ ರೈಲು ಇದಾಗಿದ್ದು, ಇದನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆ ಹಾಗಯೇ ಉಳಿದಿದೆ.

ರೈಲು ಸೇವೆ ವಿಸ್ತರಣೆ: ನೈಋತ್ಯ ರೈಲ್ವೆ ರೈಲು ಸಂಖ್ಯೆ 07377/ 07378 ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಆದರೆ ರೈಲಿನ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದೇಶದ ಪ್ರಕಾರ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು 01.10.2024 ರಿಂದ 31.12.2024 ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು 30.09.2024ರವರೆಗೆ ಓಡಿಸಲು ಮೊದಲು ತಿಳಿಸಲಾಗಿತ್ತು.
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು 02.10.2024 ರಿಂದ 01.01.2025 ರವರೆಗೆ ವಿಸ್ತರಿಸಲಾಗುತ್ತಿದೆ. ಇದನ್ನು 01.10.2024 ರವರೆಗೆ ಓಡಿಸಲು ಮೊದಲು ಆದೇಶಿಸಲಾಗಿತ್ತು.
ಈ ಮೊದಲು ರೈಲು ವಿಜಯಪುರ-ಮಂಗಳೂರು ಜಂಕ್ಷನ್ ತನಕ ಸಂಚಾರವನ್ನು ನಡೆಸುತ್ತಿತ್ತು. ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿತ್ತು.
ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸುವ ಈ ಪ್ರತಿದಿನದ ರೈಲು ಸೇವೆಯಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ತೆರಳುವ ಭಕ್ತರಿಗೆ, ವ್ಯಾಸಂಗಕ್ಕಾಗಿ, ಆರೋಗ್ಯ ಸೇವೆಗಾಗಿ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಪ್ರಯಾಣಿಕರ ಬೇಡಿಕೆಯಂತೆ ವಿಜಯಪುರ-ಮಂಗಳೂರು ನಡುವಿನ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿತ್ತು.
ವಿಜಯಪುರ-ಮಂಗಳೂರು ರೈಲು ತತ್ಕಾಲ್ ಮಾದರಿಯಲ್ಲಿಯೇ ಸಂಚಾರವನ್ನು ನಡೆಸುತ್ತಿದೆ. ಆದ್ದರಿಂದ ರೈಲಿನ ದರ ಹೆಚ್ಚಿದೆ. ಈ ರೈಲನ್ನು ಖಾಯಂಗೊಳಿಸಿದರೆ ಸಾಮಾನ್ಯ ರೈಲಿನ ದರವನ್ನು ನಿಗದಿ ಮಾಡಲಾಗುತ್ತದೆ. ಆಗ ಹೆಚ್ಚು ಜನರು ಸಂಚಾರ ನಡೆಸಲು ಸಹಾಯಕವಾಗುತ್ತದೆ. ರೈಲನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆ ಈಡೇರಿಲ್ಲ.
ಈ ಬಾರಿಯೂ ಸಹ ನೈಋತ್ಯ ರೈಲ್ವೆ ರೈಲು ಸಂಖ್ಯೆ 07377/ 07378 ಸೇವೆಯನ್ನು ಖಾಯಂಗೊಳಿಸಿಲ್ಲ. ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು 31.12.2024 ರವರೆಗೆ. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು01.01.2025 ರವರೆಗೆ ವಿಸ್ತರಿಸಲಾಗುತ್ತಿದೆ. ರೈಲು ಸೇವೆ ವಿಸ್ತರಣೆಗೆ ದಿನಾಂಕ ಅಂತ್ಯವಾಗುತ್ತಿದ್ದಂತೆಯೇ ಮತ್ತೆ ಸೇವೆಯನ್ನು ವಿಸ್ತರಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications