ರೈಲಿನಲ್ಲಿ ಟಿಕೆಟ್‌ರಹಿತ ಪ್ರಯಾಣ: ₹1 ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಮೊದಲ ಮಹಿಳಾ ಟಿಸಿ
ನವದೆಹಲಿ, ಮಾರ್ಚ್, 24: ಭಾರತೀಯ ರೈಲ್ವೆಯು ಒಂದಲ್ಲ ಒಂದು ರೀತಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಅದು ಧನಾತ್ಮಕತೆಯುಳ್ಳ ಸುದ್ದಿಯಾಗಿರುತ್ತದೆ. ಇದೀಗ ದಕ್ಷಿಣ ರೈಲ್ವೇ ಮುಖ್ಯ ಟಿಕೆಟ್ ಪರಿವೀಕ್ಷಕಿ ರೋಸಲಿನ್ ಅರೋಕಿಯಾ ಮೇರಿ ಅವರು ಇತ್ತೀಚೆಗಷ್ಟೇ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ 1.03 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿ ಸಾಧನೆ ಮಾಡಿದ್ದಾರೆ. ಮೇರಿ ಅವರ ಈ ಸಾಧನೆಯು ರೈಲ್ವೇ ಸಚಿವಾಲಯದ ಪ್ರಶಂಸೆಗೂ ಪಾತ್ರವಾಗಿದೆ.
1.03 ಕೋಟಿ ರೂ. ದಂಡ ಸಂಗ್ರಹ
ರೈಲ್ವೆ ಸಚಿವಾಲಯವು ಅಧಿಕೃತ ಟ್ವಿಟರ್‌ನಲ್ಲಿ ಮೇರಿ ಅವರ ಸಾಧನೆಯನ್ನು ಕೊಂಡಾಡಿದೆ. ರೈಲ್ವೆಯ ಟಿಕೆಟ್ ಪರಿವೀಕ್ಷಕಿ ಆಗಿರುವ ರೋಸಲಿನ್ "ತಮ್ಮ ಕರ್ತವ್ಯಕ್ಕೆ ಬದ್ಧತೆಯನ್ನು ತೋರಿಸುತ್ತಾ ಬಂದಿದ್ದಾರೆ. ಟಿಕೆಟ್ ತಪಾಸಣೆ ವೇಳೆ ಟಿಕೆಟ್‌ರಹಿತವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಬಳಿ 1.03 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಅವರು ಇಷ್ಟು ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿದ ಭಾರತೀಯ ರೈಲ್ವೆಯ ಮೊದಲ ಮಹಿಳೆ ಸಿಬ್ಬಂದಿ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಂಡ ಸಂಗ್ರಹಿಸುವ ಮೇರಿ ಫೋಟೋ ವೈರಲ್
ಹಾಗೆಯೇ ದಂಡ ಸಂಗ್ರಹಿಸುವ ಮೇರಿ ಅವರ ಫೋಟೋಗಳನ್ನು ಕೂಡ ಇಲಾಖೆ ತನ್ನ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ ನೋಡುವ ಹಾಗೆ ಮೇರಿ ತನ್ನ ಕೆಲಸದಲ್ಲಿ ಮಗ್ನಳಾಗಿ ದಂಡವನ್ನು ಸಂಗ್ರಹಿಸುತ್ತಿರುವುದು, ಮತ್ತು ಪ್ಲಾಟ್‌ಫಾರ್ಮ್‌ಗಳು, ರೈಲುಗಳಲ್ಲಿ ಪ್ರಯಾಣಿಕರಿಂದ ಟಿಕೆಟ್‌ಗಳನ್ನು ಪರಿಶೀಲಿಸುವುದು ಕಂಡುಬಂದಿದೆ. ಇದೀಗ ಇದೇ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Showing resolute commitment to her duties, Smt.Rosaline Arokia Mary, CTI (Chief Ticket Inspector) of @GMSRailway, becomes the first woman on the ticket-checking staff of Indian Railways to collect fines of Rs. 1.03 crore from irregular/non-ticketed travellers. pic.twitter.com/VxGJcjL9t5
— Ministry of Railways (@RailMinIndia) March 22, 2023
ಮೇರಿಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಇದುವರೆಗೂ ಟಿಕೆಟ್ ಪರಿಶೀಲನೆ ವೇಳೆ ರೈಲ್ವೆ ಸಿಬ್ಬಂದಿ ಇಷ್ಟೊಂದು ದಂಡವನ್ನು ಸಂಗ್ರಹಿಸಿರಲಿಲ್ಲ. ಇದೀಗ ಮೇರಿ ಇಷ್ಟು ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ಟ್ವಿಟರ್‌ನಲ್ಲಿ ಆಕೆಯ ಕಠಿಣ ಪರಿಶ್ರಮಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಟ್ವಿಟರ್ ಬಳಕೆದಾರರೊಬ್ಬರು "ನಮ್ಮ ಭಾರತವನ್ನು ಸೂಪರ್ ಪವರ್ ಮಾಡಲು ಇಂತಹ ದೃಢ ಸಂಕಲ್ಪವುಳ್ಳ ಮಹಿಳೆಯರ ಅಗತ್ಯವಿದೆ. ಅಭಿನಂದನೆಗಳು ರೊಸಾಲಿನ್. ನಿಮ್ಮ ಕೆಲಸವನ್ನು ಆತ್ಮವಿಶ್ವಾಸದಿಂದ ಮುಂದುವರೆಸಿ," ಎಂದಿದ್ದಾರೆ.
ಮತ್ತೊಬ್ಬರು ರೋಸಲಿನ್, ನಾನು ನಿಮ್ಮ ಸ್ನೇಹಿತೆ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಿಮ್ಮ ಸಾಧನೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಸಾಧನೆ ನಿಮ್ಮ ದೃಢ ಸಂಕಲ್ಪ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಎತ್ತಿಹಿಡಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಮಹಿಳೆ ಇಂತಹ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ ಎಂದು ವರ್ಣಿಸಿದ್ದಾರೆ.
ಇದುವರೆಗಿನ ದಂಡ ಸಂಗ್ರಹದ ಮಾಹಿತಿ
ಇನ್ನು ಮೂವರು ಟಿಕೆಟ್ ಪರಿಶೀಲಿಸುವ ಸಿಬ್ಬಂದಿ ಏಪ್ರಿಲ್ 2022ರಿಂದ ಮಾರ್ಚ್ 2023ರವರೆಗೆ 1 ಕೋಟಿ ರಾಪಾಯಿಗೂ ಅಧಿಕ ದಂಡವನ್ನು ಸಂಗ್ರಹಿಸುವ ಮೂಲಕ ದಾಖಲೆಗಳನ್ನು ಮಾಡಿದ್ದರು ಎಂದು ದಕ್ಷಿಣ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಚೆನ್ನೈ ವಿಭಾಗದ ಉಪ ಮುಖ್ಯ ಟಿಕೆಟ್ ಪರಿವೀಕ್ಷಕ ಎಸ್.ನಂದ ಕುಮಾರ್ ಅವರು 1.55 ಕೋಟಿ ರೂಪಾಯಿ, ಹಿರಿಯ ಟಿಕೆಟ್ ಪರೀಕ್ಷಕ ಶಕ್ತಿವೇಲ್ ಅವರು 1.10 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆ ಹಂಚಿಕೊಂಡಿದೆ.
ಅಲ್ಲದೇ ಅತೀ ಹೆಚ್ಚು ದಂಡ ಸಂಗ್ರಹ ಮಾಡುವ ಮೂಲಕ ಭಾರತೀಯ ರೈಲ್ವೆ ಹಲವಾರು ಭಾರಿ ದಾಖಲೆ ನಿರ್ಮಿಸಿದೆ. ಟಿಕೆಟ್ ರಹಿತವಾಗಿ ಪ್ರಯಾಣ ಮಾಡಿದ ಪ್ರಣಿಕರಿಗೆ ದಂಡ ಹಾಕುವ ಮೂಲಕ ವರ್ಷಕ್ಕೊಮ್ಮೆ ಇಂತಹ ಸಾಧನೆಯನ್ನು ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಈ ಭಾರಿ ಮೊದಲ ಸಲ ಒಬ್ಬರೇ ಒಬ್ಬರು ಮಹಿಳಾ ಸಿಬ್ಬಂದಿ ಟಿಕೆಟ್‌ರಹಿತ ಪ್ರಯಾಣಿಕರಿಂದ 1 ಕೋಟಿ ದಂಡ ಸಂಗ್ರಹ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಮಹಿಳೆಯರು ಏನು ಕಡಿಮೆಯಿಲ್ಲವೆಂಬಂತೆ ಸಾಧನೆ ಮಾಡಿದ್ದರೆ.












Click it and Unblock the Notifications