Best Summer Destinations: ಬೇಸಿಗೆಯಲ್ಲಿ ಕೂಲ್ ಆಗಿರಲು ಈ 5 ಹಿಲ್‌ ಸ್ಟೇಷನ್‌ಗಳಿಗೆ ಭೇಟಿ ನೀಡಿ

ಭಾರತದಲ್ಲಿ ಬೇಸಿಗೆಕಾಲ ಪ್ರಾರಂಭವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂಪಾದ ವಾತಾವರಣದ ಹುಡುಕಾಟದಲ್ಲಿ ಅನೇಕರು ಗಿರಿಧಾಮ ಅಥವಾ ಪರ್ವತ ಪ್ರದೇಶಗಳತ್ತ ಮುಖ ಮಾಡುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ಪ್ರಕೃತಿ ಸೌಂದರ್ಯ ಮತ್ತು ತಂಪಾದ ಹವಾಮಾನ ಹೊಂದಿರುವ ಹಲವಾರು ಪ್ರವಾಸಿ ತಾಣಗಳಿವೆ ಆದರೆ ಬೇಸಿಗೆಯ ಬಿಸಿಲಿನಿಂದ ಪರಿಹಾರ ಪಡೆಯಲು ಸೂಕ್ತ ಆಯ್ಕೆಗಳು ಇಲ್ಲಿವೆ.

ಬೇಸಿಗೆಯಲ್ಲಿ ಭೇಟಿ ನೀಡಲು ಸೂಕ್ತವಾದ 5 ಪ್ರಸಿದ್ಧ ಸ್ಥಳಗಳು

1. ಮನಾಲಿ (ಹಿಮಾಚಲ ಪ್ರದೇಶ)

ಹಿಮಾಲಯ ಪರ್ವತ ಶ್ರೇಣಿಗಳ ಮಧ್ಯೆ ಇರುವ ಮನಾಲಿ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ ಇರುವ ಹಿಮಾಚ್ಛಾದಿತ ಪರ್ವತಗಳು ಮತ್ತು ತಂಪಾದ ಗಾಳಿ ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಸೋಲಾಂಗ್ ವ್ಯಾಲಿಯಲ್ಲಿ ಸ್ಕೀಯಿಂಗ್ ಮತ್ತು ರೋಹ್ತಾಂಗ್ ಪಾಸ್ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.

Best Summer Destinations

2. ಶಿಮ್ಲಾ (ಹಿಮಾಚಲ ಪ್ರದೇಶ)

ಒಮ್ಮೆ ಬ್ರಿಟಿಷರ ಕಾಲದಲ್ಲಿ ಬೇಸಿಗೆ ರಾಜಧಾನಿಯಾಗಿದ್ದ ಶಿಮ್ಲಾ, ತನ್ನ ಸುಂದರವಾದ ಹಿಮಪರ್ವತಗಳು, ಹಚ್ಚ ಹಸಿರಿನ ಪರಿಸರ ಮತ್ತು ತಂಪಾದ ವಾತಾವರಣವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಯ ಮಾಲ್ ರಸ್ತೆ ಪ್ರವಾಸಿಗರಿಗೆ ಅತ್ಯಂತ ಜನಪ್ರಿಯವಾಗಿದೆ ಮತ್ತು ಹಿಲ್ಸ್‌ ಮೂಲಕ ಸಾಗುವ ರೈಲು ಪ್ರಯಾಣ ಪ್ರವಾಸದ ಅನುಭವವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ.

Best Summer Destinations

3. ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ)

ಚಹಾ ತೋಟಗಳು ಮತ್ತು ಕಾಂಚನಜುಂಗಾ ಪರ್ವತದ ಅದ್ಭುತ ನೋಟದಿಂದ ಡಾರ್ಜಿಲಿಂಗ್ ಹೆಸರುವಾಸಿಯಾಗಿದೆ. ಇಲ್ಲಿ ಇರುವ ತಂಪಾದ ಗಾಳಿ, ಟಾಯ್ ಟ್ರೇನ್ ಮತ್ತು ಶಾಂತ ವಾತಾವರಣ ವಿಶ್ರಾಂತಿಗೆ ಸೂಕ್ತವಾಗಿದೆ.

4. ಊಟಿ (ತಮಿಳುನಾಡು)

ಭಾರತದಲ್ಲಿ ಹಿಲ್‌ ಸ್ಟೇಷನ್‌ಗಳ ರಾಣಿ ಎಂದೇ ಕರೆಯಲ್ಪಡುವ ಊಟಿ, ಇದು ಹಸಿರು ಪರಿಸರ ಮತ್ತು ತಂಪಾದ ಹವಾಮಾನದಿಂದ ಪ್ರಸಿದ್ಧವಾಗಿದೆ. ಊಟಿ ಸರೋವರದಲ್ಲಿ ಬೋಟಿಂಗ್, ಬೋಟಾನಿಕಲ್ ಗಾರ್ಡನ್‌ಗಳು ಮತ್ತು ಸ್ಥಳೀಯ ಚಾಕೊಲೇಟ್ಗಳು ಪ್ರವಾಸಿಗರನ್ನು ಸೆಳೆಯುತ್ತವೆ.

Best Summer Destinations

5. ಲೇಹ್-ಲಡಾಖ್ (ಜಮ್ಮು ಮತ್ತು ಕಾಶ್ಮೀರ)

ಅಡ್ವೆಂಚರ್ ಪ್ರೀಯರಿಗೆ ಲೇಹ್ ಲಡಾಖ್ ಇದೊಂದು ಅತ್ಯುತ್ತಮವಾದ ಪ್ರದೇಶ ಆಗಿದೆ. ಇಲ್ಲಿ ಕಂಡುಬರುವ ಪ್ರಕೃತಿಯ ವಿಶಿಷ್ಟ ದೃಶ್ಯಗಳು, ನೀಲಿ ಆಕಾಶ ಮತ್ತು ಪರ್ವತಗಳಿಂದ ವಿಭಿನ್ನ ಅನುಭವವನ್ನು ನೀಡುತ್ತದೆ.

ಈ ತಾಣಗಳು ಬೇಸಿಗೆಯ ಸುಡುವ ಬಿಸಿಲಿನಿಂದ ತಂಪು ನೀಡುವುದಲ್ಲದೆ, ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಪೂರಕವಾಗಿವೆ. ನೀವು ಕುಟುಂಬದೊಂದಿಗೆ, ಗೆಳೆಯರೊಂದಿ ಅಥವಾ ಒಂಟಿ ಪಯಣಿಗರಾಗಿರಲಿ, ಇವು ನಿಮ್ಮ ಪಟ್ಟಿಯಲ್ಲಿರಲೇಬೇಕಾದ ಅತ್ಯುತ್ತಮ ಆಯ್ಕೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+