ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ದರ 3 ಪಟ್ಟು ಹೆಚ್ಚಳ.!, ಬೆಂಗ್ಳೂರಿಂದ ನಿಮ್ಮೂರಿಗೆ ಚಾರ್ಜ್‌ ಎಷ್ಟು?, ಇಲ್ಲಿದೆ ವಿವರ

ಬೆಂಗಳೂರು, ಅಕ್ಟೋಬರ್‌, 15: ಹಬ್ಬಗಳು ಹತ್ತಿರ ಬಂದ್ವಂದ್ರೆ ಸಾಕು ಖಾಸಗಿ ಬಸ್‌ಗಳ ದರ್ಬಾರ್‌ ಹೆಚ್ಚಾಗಿಬಿಡುತ್ತದೆ. ತಮಗಿಷ್ಟ ಬಂದಂತೆ ಟಿಕೆಟ್‌ಗಳ ದರವನ್ನು ಹೆಚ್ಚಿಸಿ ಪ್ರಯಾಣಿಕರ ಹೊಟ್ಟೆ ಮೇರೆ ಬರೆ ಎಳೆದುಬಿಡ್ತಾರೆ. ಈ ಬಗ್ಗೆ ಸಾರಿಗೆ ಇಲಾಖೆ ಎಷ್ಟೇ ಬಾರಿ ಎಚ್ಚರಿಸಿದರೂ ಕೂಡ ಎಚ್ಚೆತ್ತುಕೊಳ್ಳದೆ ತಾವು ಆಡಿದ್ದೇ ಆಟ ಎಂಬಂತೆ ಪ್ರಯಾಣಿಕರ ಬಳಿ ಖಾಸಗಿ ಬಸ್‌ಗಳಲ್ಲಿ ಬೇಕಾಬಿಟ್ಟಿ ಹಣ ಪೀಕುತ್ತಿದ್ದಾರೆ. ಹಾಗಾದರೆ ಬೆಂಗಳೂರಿನಿಂದ ಯಾವ್ಯಾವ ಮಾರ್ಗಗಳಿಗೆ ಎಷ್ಟು ದರ ನಿಗದಿ ಮಾಡಿದ್ದಾರೆಂದು ಇಲ್ಲಿ ತಿಳಿಯಿರಿ.

ರಾಜ್ಯದಲ್ಲಿ ಖಾಸಗಿ ಬಸ್‌ಗಳ ಆಟಾಟೋಪ ಹೆಚ್ಚುತ್ತಿದೆ ಅನ್ನೋದು ಪ್ರಯಾಣಿಕರ ದೂರಾಗಿದೆ. ಪ್ರತಿ ಹಬ್ಬ ಹರಿದಿನಗಳಲ್ಲಿಯೂ ಹಗಲು ದರೋಡೆ ಮಾಡ್ತಿದ್ದಾರೆ ಖಾಸಗಿ ಬಸ್ ಮಾಲೀಕರು ಅಂತ ಜನ ಹೇಳುತ್ತಲೇ ಇರುತ್ತಾರೆ. ದುಪ್ಪಟ್ಟು ದರ ವಸೂಲಿ ಮಾಡಿದರೆ ಪರ್ಮೀಟ್ ರದ್ದು ಎಚ್ಚರಿಕೆ ಸಾರಿಗೆ ಇಲಾಖೆ ಕೊಡುತ್ತಲೇ ಬಂದರೂ ಕ್ಯಾರೆ ಎನ್ನದ ಬಸ್ ಮಾಲೀಕರು ಈಗ ದಸರಾಗೆ ಕೂಡ ದರ ಏರಿಕೆ ಮಾಡಿದ್ದು, ಇವರಿಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗಾಗಿದೆ.

Ticket price Increase in private buses, know details

ಸಾಲು ಸಾಲು ರಜೆ ಅಂತಾ ಬಸ್ ಟಿಕೆಟ್ ಬುಕ್ಕಿಂಗ್‌ಗೆ ಮುಂದಾವರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಟಿಕೆಟ್ ದರ ಎರಡ್ಮೂರು ಪಟ್ಟು ದರ ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿಗೆ ಹಾಕಿದ್ದಾರೆ. ಒಂದು ಕಡೆ KSRTC ಹೆಚ್ಚುವರಿ ಬಸ್ ರಸ್ತೆಗಳಿಸಿದ್ದು ಮಾತ್ರವಲ್ಲದೆ 5 ರಿಂದ 10% ರಿಯಾಯಿತಿಯನ್ನೂ ಕೊಟ್ಟಿದೆ.

ಆದರೆ ಖಾಸಗಿ ಸಾರಿಗೆಯಲ್ಲಿ ಓಡಾಡೋದು ಬಲು ದುಬಾರಿಯಾಗಲಿದೆ. ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಮಾಡಲಾಗಿದೆ. ಎಸಿ ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

1. ಬೆಂಗಳೂರು-ಶಿವಮೊಗ್ಗ

* ಅಕ್ಟೋಬರ್ 16 - ₹450-₹650
* ಅಕ್ಟೋಬರ್ 20 - ₹1150-₹1400

2. ಬೆಂಗಳೂರು - ಹುಬ್ಬಳ್ಳಿ

* ಅಕ್ಟೋಬರ್ 16 - ₹600-₹850
* ಅಕ್ಟೋಬರ್ 20- ₹1600-₹2000

3. ಬೆಂಗಳೂರು-ಮಂಗಳೂರು

* ಅಕ್ಟೋಬರ್ 16 - ₹650-₹900
* ಅಕ್ಟೋಬರ್ 20 - ₹1600-₹2000

4. ಬೆಂಗಳೂರು - ಉಡುಪಿ

* ಅಕ್ಟೋಬರ್ 16 - ₹700-₹850
* ಅಕ್ಟೋಬರ್ 20 - ₹1600-₹1900

5. ಬೆಂಗಳೂರು-ಧಾರವಾಡ

* ಅಕ್ಟೋಬರ್ 16 - ₹650-₹850
* ಅಕ್ಟೋಬರ್ 20 - ₹1500-₹2100

6. ಬೆಂಗಳೂರು-ಬೆಳಗಾವಿ

* ಅಕ್ಟೋಬರ್ 16 - ₹700-₹900
* ಅಕ್ಟೋಬರ್ 20 - ₹1500-₹2100

7. ಬೆಂಗಳೂರು - ದಾವಣಗೆರೆ

* ಅಕ್ಟೋಬರ್ 16 - ₹450-₹650
* ಅಕ್ಟೋಬರ್ 20 - ₹1300-₹1650

8. ಬೆಂಗಳೂರು - ಚಿಕ್ಕಮಗಳೂರು

ಅಕ್ಟೋಬರ್ 16 - ₹600-₹650
ಅಕ್ಟೋಬರ್ 20 - ₹1250-₹1500

9. ಬೆಂಗಳೂರು - ಹಾಸನ

* ಅಕ್ಟೋಬರ್ 16 - ₹650-₹850
* ಅಕ್ಟೋಬರ್ 20 - ₹1600-₹1850

ಬೆಂಗಳೂರಿನಿಂದ ಹೊರರಾಜ್ಯಕ್ಕೆ

1. ಬೆಂಗಳೂರು-ಚೆನ್ನೈ

* ಅಕ್ಟೋಬರ್ 16 -₹620-₹850
* ಅಕ್ಟೋಬರ್ 20 - ₹1800-₹2100

2. ಬೆಂಗಳೂರು- ಹೈದರಾಬಾದ್

* ಅಕ್ಟೋಬರ್ 16 - ₹1300-₹1900
* ಅಕ್ಟೋಬರ್ 20 - ₹2800-₹3300

3. ಬೆಂಗಳೂರು-ಕೊಯಮತ್ತೂರು

* ಅಕ್ಟೋಬರ್ 16 - ₹700-₹1100
* ಅಕ್ಟೋಬರ್ 20 - ₹2300-₹2800

4. ಬೆಂಗಳೂರು - ಮುಂಬೈ

* ಅಕ್ಟೋಬರ್ 16 - ₹1300-₹1600
* ಅಕ್ಟೋಬರ್ 20 - ₹2300-₹2700

5. ಬೆಂಗಳೂರು-ಗೋವಾ

* ಅಕ್ಟೋಬರ್ 16 - ₹1000-₹1300
* ಅಕ್ಟೋಬರ್ 20 - ₹2800-₹3100

ಅಕ್ಟೋಬರ್ 21ರಿಂದ 24ರ ಸಾಲು ಸಾಲು ರಜೆಯಿದೆ. ಹೀಗಾಗಿ ಅಕ್ಟೋಬರ್‌ 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಯಾವಾಗ ಅಕ್ಟೋಬರ್‌ 20ಕ್ಕೆ ಬುಕ್ಕಿಂಗ್ ಮಾಡಲು ಜನ ಮುಂದಾದರೋ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ. ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ಅಕ್ಟೋಬರ್‌ 20ರ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.

ಯಾವುದೇ ಹಬ್ಬ ಬರ್ಲಿ ಕೆಲ ಖಾಸಗಿ ಬಸ್ ಅವ್ರಿಗೆ ಮಾತ್ರ ದರ ಏರಿಕೆ ಮಾಡದೇ ಇದ್ರೆ ಆ ಹಬ್ಬ ಕಂಪ್ಲೀಟ್ ಆಗೋದೇ ಇಲ್ಲ ಅನ್ನೋದು ಕೆಲವರ ಅಭಿಪ್ರಾಯ. ಇನ್ನೊಂದು ಕಡೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದ್ದ ಸಾರಿಗೆ ಇಲಾಖೆ ಮಾತ್ರ ಕಡಿವಾಣ ಹಾಕ್ತೇವೆ ಅಂತಾ ಸಬೂಬು ಕೊಟ್ಟುಕೊಂಡು ಕೈ ಕಟ್ಟಿ ಕುಳಿತಿರುವುದು ಇಷ್ಟಕ್ಕೆಲ್ಲಾ ಕಾರಣ ಅಂತ ಹೇಳ್ತಾ ಇದ್ದಾರೆ. ಆದರೆ ಕಾರಣ ಏನೇ ಇರಲಿ ಪರದಾಟ ಮಾತ್ರ ಸಾರ್ವಜನಿಕರ ಪಾಲಿಗೆ ಫ್ರೀ ಗಿಫ್ಟ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+