Thailand Tour Package: ಕೇವಲ 43,800 ರೂಪಾಯಿನಲ್ಲಿ ಥೈಲ್ಯಾಂಡ್ ಪ್ರವಾಸ ಕೈಗೊಳ್ಳಿ, ದಿನಾಂಕಗಳ ವಿವರ ಇಲ್ಲಿದೆ
ನವದೆಹಲಿ, ಜೂನ್, 07: ಥೈಲ್ಯಾಂಡ್‌ನಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಬೇಕು ಎನ್ನುವುದು ಎಷ್ಟೋ ಜನರ ಕನಸಾಗಿರುತ್ತದೆ. ಆದರೆ ಕೆಲವರು ಹಣದ ಕೊರತೆಯಿಂದ ಈ ಪ್ರವಾಸದಿಂದ ಹಿಂದೆ ಸರಿಯುತ್ತಿದ್ದಾರೆ. ಇದೀಗ ಐಆರ್‌ಸಿಟಿಸಿ ಕೈಗೆಟುಕುವ ದರದಲ್ಲಿ ಥೈಲ್ಯಾಂಡ್ ಟ್ರಿಪ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಯಾಕೆ ತಡ ಪ್ರವಾಸ ಟಿಕೆಟ್ ಬುಕ್ ಮಾಡಿ ಹೊರಡಿ ಥೈಲ್ಯಾಂಡ್‌ಗೆ..
ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಯು (IRCTC) ಮೊದಲಿನಿಂದಲೂ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಇದೀಗ ಮತ್ತೇ ಕಡಿಮೆ ದರದ ಥೈಲ್ಯಾಂಡ್ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್ ದರಗಳು ಮತ್ತು ದಿನಾಂಕದ ವಿವರವನ್ನು ಇಲ್ಲಿ ತಿಳಿಯಿರಿ.

ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಘೋಷಣೆ
ಭಾರತೀಯ ರೈಲ್ವೆಯ IRCTCಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರಿಗೆ ಕೈಗೆಟುಕುವ ದರದಲ್ಲಿ ಆಕರ್ಷಕ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹೀಗೆ ಜಗತ್ತಿನಾದ್ಯಂತ ಹಲವಾರು ಹೆಸರಾಂತ ಪ್ರವಾಸಿ ತಾಣಗಳನ್ನು ಪರಿಚಯಿಸುವಲ್ಲಿ ಈಗಾಗಲೇ ಭಾರತೀಯ ರೈಲ್ವೇಯ ವಿಭಾಗವಾದ IRCTC ಪ್ರಖ್ಯಾತಿ ಪಡೆದಿದೆ. ಅಲ್ಲದೆ ದಿನಿದಿಂದ ದಿನಕ್ಕೆ ಹೆಚ್ಚಿನ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಲೇ ಇದೆ.
ಪ್ರವಾಸ ಆರಂಭ ಯಾವಾಗ?
ಹಾಗೆಯೆ ಸ್ಪೆಷಲ್ ಥ್ರಿಲ್ಲಿಂಗ್ ಕೊಡುವ ಥೈಲ್ಯಾಂಡ್ ಪ್ರವಾಸ ಪ್ಯಾಕೇಜ್ ಅನ್ನು ಇದೀಗ ಐಆರ್‌ಸಿಟಿಸಿ ಘೋಷಿಸಿದೆ. ಈ ಪ್ರವಾಸವು ಆಗಸ್ಟ್ 11ರಂದು ಆರಂಭ ಆಗುತ್ತದೆ. 6 ಹಗಲು ಮತ್ತು 5 ರಾತ್ರಿಗಳ ಪ್ರವಾಸ ಇದಾಗಿದ್ದು, ನೀವು ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿಯೇ ಆಚರಣೆ ಮಾಡಲು ಅವಕಾಶವನ್ನು ಸಹ ಕಲ್ಪಿಸಲಾಗಿದೆ. ನೀವು ಪ್ರವಾದ ಕೈಗೊಳ್ಳುವ ವಿಮಾನವು ಕೋಲ್ಕತ್ತಾದಿಂದ ಹೊರಟು ಥೈಲ್ಯಾಂಡ್‌ನಲ್ಲಿ ಲ್ಯಾಂಡ್ ಆಗಲಿದೆ ಎನ್ನುವ ಮಾಹಿತಿಯನ್ನು ಐಆರ್‌ಸಿಟಿಸಿ ನೀಡಿದೆ.
ಹಾಗೆಯೆ ಪ್ರವಾಸದ ಸಮಯದಲ್ಲಿ ರುಚಿಕರವಾದ ಉಪಹಾರ, ಊಟ ಮತ್ತು ರಾತ್ರಿಯ ಊಟವನ್ನು ನೀಡಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ನೀವು ಪಟ್ಟಾಯದ ಕೋರಲ್ ಬೀಚ್ ಮತ್ತು ಬ್ಯಾಂಕಾಕ್‌ನಲ್ಲಿ ಅದ್ಭುತ ಸಫಾರಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಪ್ಯಾಕೇಜ್‌ನ ದರಗಳ ವಿವರ
ಈ ಪ್ಯಾಕೇಜ್ ರೌಂಡ್-ಟ್ರಿಪ್ ಫ್ಲೈಟ್ ವ್ಯವಸ್ಥೆ, ಆರಾಮದಾಯಕ ಹೋಟೆಲ್, ವಸತಿಗಳು, ಬಸ್‌ಗಳು, ಕ್ಯಾಬ್‌ಗಳಂತಹ ಅನುಕೂಲಕರ ಸಾರಿಗೆ ಆಯ್ಕೆಗಳು, ರುಚಿಕರವಾದ ಊಟ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ. ಈ ರೋಮಾಂಚನಕಾರಿ ಪ್ಯಾಕೇಜ್ ಪಡೆಯಲು ಒಬ್ಬರಿಗೆ 51,100 ರೂಪಾಯಿ ಆಗಿದ್ದರೆ, ಜೊತೆಗೆ ಇಬ್ಬರು ಪ್ರಯಾಣ ಮಾಡಲು ಬಯಸಿದರೆ ಆಗ ಪ್ರತಿ ವ್ಯಕ್ತಿಗೆ 43,800 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ರೀತಿ ಮೂವರು ಪ್ರಯಾಣ ಮಾಡಲು ಬಯಸಿದರೆ ಪ್ರತಿ ವ್ಯಕ್ತಿಗೆ 43,800 ರೂಪಾಯಿ ವೆಚ್ಚ ಆಗುತ್ತದೆ.
ಐಆರ್‌ಸಿಟಿಸಿಯ ಈ ಸ್ಪೆಷಲ್ ಥ್ರಿಲ್ಲಿಂಗ್ ಥೈಲ್ಯಾಂಡ್ ಪ್ರವಾಸವು ಮರೆಯಲಾಗದ ನೆನಪುಗಳನ್ನು ಕಟ್ಟಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಥೈಲ್ಯಾಂಡ್‌ನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಿದ್ಧರಾಗಿ. ಹೀಗೆ ಐಆರ್‌ಸಿಟಿಸಿಯು ಮೊದಲಿನಿಂದಲೂ ಸಹ ಪ್ರವಾಸಿಗರಿಗೆ ಹೊರೆಯಾಗದಂತಹ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಲೇ ಬಂದಿದೆ. ಜನರು ಕೂಡ ಈ ಪ್ಯಾಕೇಜ್‌ಗಳನ್ನು ಸದುಪಯೋಗಪಡಿಸಿಕೊಂಡು ವಿದೇಶಗಳ ಪ್ರವಾಸವನ್ನು ಕೈಗೊಳ್ಳುತ್ತಲೇ ಇದ್ದಾರೆ. ಹೀಗೆ ಐಆರ್‌ಟಿಸಿಟಿಯು ಹೊಸ ಹೊಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವ ಮೂಲಕ ಜನಮನ್ನಣೆಯನ್ನು ಪಡೆಯುತ್ತಲೇ ಬಂದಿದೆ.












Click it and Unblock the Notifications