ಬೆಂಗಳೂರು ಸಮೀಪ ಈ ನಿಲ್ದಾಣದಲ್ಲಿ ರೈಲು ನಿಲುಗಡೆ; ವಿವರ

ಬೆಂಗಳೂರು, ಜನವರಿ 23: ಪ್ರಯಾಣಿಕರ ಬೇಡಿಕೆಗೆ ನೈಋತ್ಯ ರೈಲ್ವೆ ವಲಯ ಮನ್ನಣೆ ನೀಡಿದೆ. ಬೆಂಗಳೂರು ನಗರದ ಸಮೀಪದ ಎರಡು ನಿಲ್ದಾಣದಲ್ಲಿ 6 ತಿಂಗಳ ಅವಧಿಗೆ ಹಲವು ರೈಲುಗಳಿಗೆ ತಾತ್ಕಾಲಿಕ ನಿಲುಗಡೆಯನ್ನು ನೀಡುವ ಕುರಿತು ಆದೇಶ ಹೊರಡಿಸಿದೆ.

ಬೆಟ್ಟಹಲ್ಸೂರು ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ರೈಲುಗಳ ತಾತ್ಕಾಲಿಕ ನಿಲುಗಡೆ ಬಗ್ಗೆ ಆದೇಶ ಹೊರಡಿಸಲಾಗಿದೆ. ದಿನಾಂಕ 25/01/2024 ರಿಂದ 25/07/2024ರವರೆಗೆ ರೈಲುಗಳ ತಾತ್ಕಾಲಿಕ ನಿಲುಗಡೆ ನೀಡಲಾಗುತ್ತದೆ.

Temporary Stop For Trains At Bettahalsoor Dodjala Station

ಪ್ರಯಾಣಿಕರ ಬೇಡಿಕೆಯಂತೆ 6 ತಿಂಗಳ ಅವಧಿಯವರೆಗೆ ಹಲವು ರೈಲುಗಳಿಗೆ 1 ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಇಲಾಖೆ ಹೇಳಿದ್ದು, ರೈಲುಗಳ ವಿವರಗಳನ್ನು ಸಹ ನೀಡಿದೆ.

ರೈಲುಗಳ ವಿವರ

* ರೈಲು ಸಂಖ್ಯೆ 06593 ಯಶವಂತಪುರ-ಚಿಕ್ಕಬಳ್ಳಾಪುರ ಮೆಮು ರೈಲು ಬೆಳಗ್ಗೆ 10.41 ಬೆಟ್ಟಹಲಸೂರು ನಿಲ್ದಾಣಕ್ಕೆ ತಲುಪಿ 10.42ಕ್ಕೆ ಹೊರಡುತ್ತದೆ ಮತ್ತು 10.47ಕ್ಕೆ ದೊಡ್ಡಜಾಲ ನಿಲ್ದಾಣಕ್ಕೆ ತಲುಪಿ 10.48ಕ್ಕೆ ಹೊರಡಲಿದೆ.

* ರೈಲು ಸಂಖ್ಯೆ 06594 ಚಿಕ್ಕಬಳ್ಳಾಪುರ-ಯಶವಂತಪುರ ಮೆಮು ದೊಡ್ಡಜಾಲ ನಿಲ್ದಾಣಕ್ಕೆ ಮಧ್ಯಾಹ್ನ 01.44ಕ್ಕೆ ಆಗಮಿಸಿ 01.45ಕ್ಕೆ ಹೊರಡಲಿದೆ. ಮತ್ತು ಬೆಟ್ಟಹಲಸೂರು ನಿಲ್ದಾಣಕ್ಕೆ ಮಧ್ಯಾಹ್ನ 01.51ಕ್ಕೆ ಆಗಮಿಸಿ 01.52ಕ್ಕೆ ಹೊರಡಲಿದೆ.

* ರೈಲು ಸಂಖ್ಯೆ 06531 ಬೆಂಗಳೂರು ಕ್ಯಾಂಟ್ - ದೇವನಹಳ್ಳಿ ಮೆಮು ಬೆಳಗ್ಗೆ 05.55ಕ್ಕೆ ಬೆಟ್ಟ ಹಲಸೂರು ನಿಲ್ದಾಣಕ್ಕೆ ಆಗಮಿಸಿ 05.56ಕ್ಕೆ ಹೊರಟು ಮತ್ತು 06.03ಗೆ ದೊಡ್ಡಜಾಲ ನಿಲ್ದಾಣಕ್ಕೆ ಆಗಮಿಸಿ 06.04ಕ್ಕೆ ಹೊರಡಲಿದೆ.

* ರೈಲು ಸಂಖ್ಯೆ 06532 ದೇವನಹಳ್ಳಿ-ಬೆಂಗಳೂರು ಕ್ಯಾಂಟ್ ಮೆಮು ದೊಡ್ಡಜಾಲ ನಿಲ್ದಾಣಕ್ಕೆ ರಾತ್ರಿ 07.18ಕ್ಕೆ ಬಂದು 07.19ಗೆ ಹೊರಟು ಮತ್ತು ರಾತ್ರಿ 07.25ಕ್ಕೆ ಬೆಟ್ಟಹಲಸೂರು ನಿಲ್ದಾಣಕ್ಕೆ ಆಗಮಿಸಿ 07.26ಗೆ ಹೊರಡಲಿದೆ.

* ರೈಲು ಸಂಖ್ಯೆ 06535 ಚಿಕ್ಕಬಳ್ಳಾಪುರ-ಬೆಂಗಳೂರು ಕ್ಯಾಂಟ್ ಮೆಮು 09.04 am ದೊಡ್ಡಜಾಲ ನಿಲ್ದಾಣಕ್ಕೆ ಆಗಮಿಸಿ 09.05 am ಹೊರಟು ಮತ್ತು 09.10 am ಬೆಟ್ಟಹಲಸೂರು ನಿಲ್ದಾಣಕ್ಕೆ ಆಗಮಿಸಿ 09.11 am ಹೊರಡಲಿದೆ.

* ರೈಲು ಸಂಖ್ಯೆ 06536 ಬೆಂಗಳೂರು ಕ್ಯಾಂಟ್-ಚಿಕ್ಕಬಳ್ಳಾಪುರ ಮೆಮು ಬೆಟ್ಟಹಲ್ಕೂರು ನಿಲ್ದಾಣಕ್ಕೆ ಬೆಳಿಗ್ಗೆ 11.42 am ಬಂದು 11.43 am ಹೊರಟು ಮತ್ತು 11.48 am ದೊಡ್ಡಜಾಲ ನಿಲ್ದಾಣಕ್ಕೆ ಬಂದು 11.49 am ಹೊರಡಲಿದೆ.

* ರೈಲು ಸಂಖ್ಯೆ 06538 ಬೆಂಗಳೂರು ಕ್ಯಾಂಟ್ ಚಿಕ್ಕಬಳ್ಳಾಪುರ ಮೆಮು ಬೆಟ್ಟಹಲ್ಕೂರು ನಿಲ್ದಾಣಕ್ಕೆ ಸಂಜೆ 04.43 pm ಬಂದು 04.44 pm ಹೊರಟು ಮತ್ತು 04.49 pm ದೊಡ್ಡಜಾಲ ನಿಲ್ದಾಣಕ್ಕೆ ಬಂದು 04.50 pm ಹೊರಡಲಿದೆ.

* ರೈಲು ಸಂಖ್ಯೆ 06537 ಚಿಕ್ಕಬಳ್ಳಾಪುರ-ಬೆಂಗಳೂರು ಕ್ಯಾಂಟ್ ಮೆಮು ದೊಡ್ಡಜಾಲ ನಿಲ್ದಾಣಕ್ಕೆ ಮಧ್ಯಾಹ್ನ 02.26 pm ಬಂದು 02.27 pm ಹೊರಟು ಮತ್ತು 02.32 pm ಬೆಟ್ಟಹಲಸೂರು ನಿಲ್ದಾಣಕ್ಕೆ ಆಗಮಿಸಿ 02.33 pm ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+