ಬೆಂಗಳೂರು-ವಾಸ್ಕೋ-ಡ-ಗಾಮಾ ವಿಶೇಷ ರೈಲು; ವೇಳಾಪಟ್ಟಿ, ನಿಲ್ದಾಣ

ಬೆಂಗಳೂರು, ಅಕ್ಟೋಬರ್ 18: ನೈಋತ್ಯ ರೈಲ್ವೆ ದಸರಾ ಹಬ್ಬದ ಪ್ರಯುಕ್ತ ಹಲವು ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಬೆಂಗಳೂರು ನಗರ-ವಾಸ್ಕೋ-ಡ- ಗಾಮಾ ನಡುವೆ ವಿಶೇಷ ರೈಲನ್ನು ಘೋಷಣೆ ಮಾಡಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ವಾಸ್ಕೋ-ಡ- ಗಾಮಾ ಮತ್ತು ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ನಿಲ್ದಾಣಗಳ ನಡುವೆ 1 ಟ್ರಿಪ್ ಸಂಚಾರ ನಡೆಸುವ ವಿಶೇಷ ರೈಲು ಓಡಿಸುತ್ತಿದೆ.

SWR Special Train Between Vasco Da Gama And SMVT Station And Schedule

ಈ ವಿಶೇಷ ರೈಲು ಎಸಿ ಪ್ರಥಮ ದರ್ಜೆ (1), ಎಸಿ ಎರಡನೇ ದರ್ಜೆ (1), ಎಸಿ ಮೂರನೇ ದರ್ಜೆ (2), ಸ್ಲಿಪರ್ ಕ್ಲಾಸ್ (9), ಸಾಮಾನ್ಯ ದ್ವಿತೀಯ ದರ್ಜೆ (2) ಮತ್ತು ಎಸ್‌ಎಲ್‌ಆರ್ (2) ಸೇರಿದಂತೆ ಒಟ್ಟು 17 ಬೋಗಿಗಳನ್ನು ಒಳಗೊಂಡಿರುತ್ತದೆ.

ರೈಲಿನ ವೇಳಾಪಟ್ಟಿ; ಬೆಂಗಳೂರಿನ ಎಸ್‌ಎಂಟಿಟಿ-ವಾಸ್ಕೋ-ಡ-ಗಾಮಾ ನಡುವೆ ವಿಶೇಷ ರೈಲು (07357) ಸಂಚಾರ ನಡೆಸಲಿದೆ. ಈ ರೈಲು ಅಕ್ಟೋಬರ್ 20ರಂದು ಸಂಜೆ 5.30ಕ್ಕೆ ಎಸ್‌ಎಂಐಟಿ ಬೆಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಮರುದಿನ ಬೆಳಗ್ಗೆ 9:30ಕ್ಕೆ ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ತಲುಪಲಿದೆ.

ವಾಪಸ್ ಬರುವ ದಿಕ್ಕಿನಲ್ಲಿ ರೈಲು ಸಂಖ್ಯೆ 07358 ಅಕ್ಟೋಬರ್ 24ರಂದು ಮಧ್ಯಾಹ್ನ 2:30ಕ್ಕೆ ವಾಸ್ಕೋ-ಡ- ಗಾಮಾದಿಂದ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಎಸ್‌ಎಂಐಟಿ ಬೆಂಗಳೂರು ತಲುಪಲಿದೆ.

ಎರಡೂ ಮಾರ್ಗಗಳಲ್ಲಿ ಈ ವಿಶೇಷ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಎಸ್.ಎಂ.ಎಂ. ಹಾವೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ https://enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ 139ಗೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಬೋಗಿ ಸೇರ್ಪಡೆ ಮಾಹಿತಿ; ನೈಋತ್ಯ ರೈಲ್ವೆ ಈ ರೈಲುಗಳಿಗೆ 1 ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಜೋಡಿಸಿ, ಒಂದು ಎಸಿ ತ್ರಿ ಎಕಾನಮಿ ಬೋಗಿಯನ್ನು ತಗೆಯಲಾಗುತ್ತಿದೆ ಎಂದು ಹೇಳಿದೆ.

ರೈಲು ಸಂಖ್ಯೆ 17321 ವಾಸ್ಕೋ-ಡ-ಗಾಮಾ - ಜಸಿದಿಹ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ಅಕ್ಟೋಬರ್ 13, 2023 ರಿಂದ ಜಾರಿಗೆ ಬರುವಂತೆ ಒಂದು ಎಸಿ ತ್ರಿ ಎಕಾನಮಿ ಬೋಗಿ ತಗೆದು, ಒಂದು ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಜೋಡಿಸಲಾಗುತ್ತಿದೆ.

ರೈಲು ಸಂಖ್ಯೆ 17322 ಜಸಿದಿಹ್ - ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಅಕ್ಟೋಬರ್ 16, 2023 ರಿಂದ ಜಾರಿಗೆ ಬರುವಂತೆ ಒಂದು ಎಸಿ ತ್ರಿ ಎಕಾನಮಿ ಬೋಗಿ ತಗೆದು, ಒಂದು ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಜೋಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+