ಹಲವು ರೈಲುಗಳ ಸೇವೆ ವಿಸ್ತರಿಸಿದ ನೈಋತ್ಯ ರೈಲ್ವೆ, ಪಟ್ಟಿ

ಬೆಂಗಳೂರು, ಡಿಸೆಂಬರ್ 29; ಡಿಸೆಂಬರ್ ತಿಂಗಳ ಅಂತ್ಯದಲ್ಲಿ ನೈಋತ್ಯ ರೈಲ್ವೆ ಹಲವು ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಪ್ರಯಾಣಿಕರ ಬೇಡಿಕೆಯಂತೆ ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ರೈಲುಗಳ ಪಟ್ಟಿ ಇಲ್ಲಿದೆ.

ನೈಋತ್ಯ ರೈಲ್ವೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ, ನಿಲ್ದಾಣ ಮತ್ತು ಬೋಗಿಗಳ ಸಂಯೋಜನೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲದಂತೆ ರೈಲು ಸೇವೆಗಳನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ.

SWR Extend Services Of Several Trains List And Details

ವಿಸ್ತರಣೆಯಾದ ರೈಲುಗಳ ಪಟ್ಟಿ

* ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ರೈಲು. ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲನ್ನು 30/12/2023 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ 6/1/2024ರಿಂದ 30/3/2024ರವರೆಗೆ ವಿಸ್ತರಿಸಲಾಗಿದೆ.

* ರೈಲು ಸಂಖ್ಯೆ 07356 ರಾಮೇಶ್ವರಂ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ರೈಲು. ರಾಮೇಶ್ವರಂನಿಂದ ಹೊರಡುವ ರೈಲನ್ನು 31/12/2023ರವರೆಗೆ ಓಡಿಸಲು ಸೂಚಿಸಲಾಗಿತ್ತು. ಇದನ್ನು 7/1/2024ರಿಂದ 31/3/2024ರವರೆಗೆ ವಿಸ್ತರಿಸಲಾಗಿದೆ.

* ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್‌ ಪ್ರತಿದಿನದ ವಿಶೇಷ ರೈಲು. ವಿಜಯಪುರದಿಂದ ಹೊರಡುವ ರೈಲನ್ನು 31/12/2023ರವರೆಗೆ ಓಡಿಸಲು ಸೂಚಿಸಲಾಗಿತ್ತು ಇದನ್ನು ಈಗ 1/1/2024 ರಿಂದ 31/3/2024ರವರೆಗೆ ವಿಸ್ತರಿಸಲಾಗಿದೆ.

* ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ರೈಲು. ಮಂಗಳೂರಿನಿಂದ ಹೊರಡುವ ರೈಲನ್ನು ಮೊದಲು 1/1/2024ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ಇದನ್ನು 2/1/2024 ರಿಂದ 1/4/2024ರ ತನಕ ವಿಸ್ತರಣೆ ಮಾಡಲಾಗಿದೆ.

ರೈಲುಗಳ ಪ್ರಾಯೋಗಿಕ ನಿಲುಗಡೆ; ಪೂರ್ವ ಕರಾವಳಿ ರೈಲ್ವೆಯು ನಿರಾಕರ್‌ಪುರ ನಿಲ್ದಾಣದಲ್ಲಿ ರೈಲು ಸಂಖ್ಯೆ 18463/ 18464 ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್‌ಗೆ ಪ್ರಾಯೋಗಿಕ ನಿಲುಗಡೆ ನೀಡಲು ನಿರ್ಧರಿಸಿದೆ.

ರೈಲು ಸಂಖ್ಯೆ 18463 ಭುವನೇಶ್ವರ ಕೆಎಸ್‌ಆರ್ ಬೆಂಗಳೂರು ಪ್ರಶಾಂತಿ ಎಕ್ಸ್‌ಪ್ರೆಸ್ 31/12/2023ರಿಂದ ಭುವನೇಶ್ವರದಿಂದ ಪ್ರಾರಂಭವಾಗಿ 6:27ಕ್ಕೆ ನಿರಾಕರ್‌ಪುರ ನಿಲ್ದಾಣವನ್ನು ತಲುಪಿ 6:29ಕ್ಕೆ ಹೊರಡುತ್ತದೆ.

ರೈಲು ಸಂಖ್ಯೆ 18464 ಕೆಎಸ್‌ಆರ್‌ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು 29/12/2023ರಿಂದ ಕೆಎಸ್‌ಆರ್ ಬೆಂಗಳೂರಿನಿಂದ ಪ್ರಾರಂಭವಾಗಿ 30/12/2023 ಸಂಜೆ 5:05ಕ್ಕೆ ನಿರಾಕರ್‌ಪುರ ನಿಲ್ದಾಣವನ್ನು ತಲುಪಿ 5:07 ಕ್ಕೆ ಹೊರಡಲಿದೆ.

ಕುಪ್ಪಂನಲ್ಲಿ ರೈಲುಗಳ ಪ್ರಾಯೋಗಿಕ ನಿಲುಗಡೆ; ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07153/ 07154 ನರಸಾಪುರ-ಎಸ್‌ಎಂವಿಟಿ ಬೆಂಗಳೂರು ನರಸಾಪುರವನ್ನು ರೈಲನ್ನು ಕುಪ್ಪಂ ನಿಲ್ದಾಣದಲ್ಲಿ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ನಿಲುಗಡೆ ನೀಡಲು ನಿರ್ಧರಿಸಿದೆ.

ರೈಲು ಸಂಖ್ಯೆ 07153 ನರಸಾಪುರ ಎಸ್‌ಎಂವಿಟಿ ಬೆಂಗಳೂರು ರೈಲು 29/12/2023ರಿಂದ ನರಸಾಪುರದಿಂದ ಪ್ರಾರಂಭವಾಗಿ 7:07AMಕ್ಕೆ ಕುಪ್ಪಂ ನಿಲ್ದಾಣವನ್ನು ತಲುಪಿ 7:08AMಕ್ಕೆ ಹೊರಡುತ್ತದೆ.

ರೈಲು ಸಂಖ್ಯೆ 07154 ಎಸ್‌ಎಂವಿಟಿ ಬೆಂಗಳೂರು-ನರಸಾಪುರ ರೈಲು ಪ್ರಯಾಣವು 30/12/2023ರಿಂದ ಎಸ್‌ಎಂವಿಟಿ ಬೆಂಗಳೂರುನಿಂದ ಪ್ರಾರಂಭವಾಗಿ 12:15 PMಕ್ಕೆ ಕುಪ್ಪಂ ನಿಲ್ದಾಣವನ್ನು ತಲುಪಿ 12:16 PMಕ್ಕೆ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+