ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರು ಗಮನಿಸಿ, ರೈಲುಗಳು ರದ್ದು
ಬೆಂಗಳೂರು, ಮಾರ್ಚ್ 03: ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದಿದೆ. ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಈ ಕುರಿತು ಮಾಹಿತಿ ತಿಳಿದು ಸಂಚಾರದ ಯೋಜನೆ ರೂಪಿಸಬೇಕಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ 15ರ ಬಳಿಯ ಕಾಮಗಾರಿ ಹಿನ್ನಲೆಯಲ್ಲಿ ಕೆಲವು ರೈಲು ರದ್ದಾಗಿದೆ, ಕೆಲವು ಭಾಗಶಃ ರದ್ದುಗೊಂಡಿವೆ.

ಮಾರ್ಚ್ 6, 7, 8, 12 ಮತ್ತು 13ರ ತನಕ ಕೆಲವು ರೈಲು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ರದ್ದುಗೊಂಡಿರುವ ರೈಲುಗಳ ಪಟ್ಟಿ
* ರೈಲು ನಂಬರ್ 16021 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ಮಾರ್ಚ್ 6, 7ರಂದು ರದ್ದು.
* ರೈಲು ನಂಬರ್ 20623 ಮೈಸೂರು-ಕೆಎಸ್ಆರ್ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ಮಾರ್ಚ್ 7, 8ರಂದು ರದ್ದು.
* ರೈಲು ನಂಬರ್ 20624 ಕೆಎಸ್ಆರ್ ಬೆಂಗಳೂರು-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ಮಾರ್ಚ್ 7, 8ರಂದು ರದ್ದು.
* ರೈಲು ನಂಬರ್ 16022 ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಮಾರ್ಚ್ 7, 8ರಂದು ರದ್ದು.
* ರೈಲು ನಂಬರ್ 06267 ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 7, 12ರಂದು ರದ್ದು.
* ರೈಲು ನಂಬರ್ 06269 ಮೈಸೂರು- ಎಸ್‌ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ಮಾರ್ಚ್ 7, 12ರಂದು ರದ್ದು.
* ರೈಲು ನಂಬರ್ 06560 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಮಾರ್ಚ್ 7, 12ರಂದು ರದ್ದು.
* ರೈಲು ನಂಬರ್ 06270 ಎಸ್‌ಎಂವಿಟಿ ಬೆಂಗಳೂರು- ಮೈಸೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ಮಾರ್ಚ್ 7, 12ರಂದು ರದ್ದು.
* ರೈಲು ನಂಬರ್ 06268 ಮೈಸೂರು-ಅರಸೀಕೆರೆ ಪ್ರತಿ ದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 8, 13ರಂದು ರದ್ದು.
* ರೈಲು ನಂಬರ್ 06559 ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲು ಮಾರ್ಚ್ 8, 13ರಂದು ರದ್ದು.
* ರೈಲು ನಂಬರ್ 01763 ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್ ಮಾರ್ಚ್ 8, 13ರಂದು ರದ್ದು.
ಭಾಗಶಃ ರದ್ದು: ರೈಲು ನಂಬರ್ 06526 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಮಾರ್ಚ್ 7, 12ರಂದು ಚನ್ನಪಟ್ಟಣ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು.












Click it and Unblock the Notifications