ಬೆಂಗಳೂರು-ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ ಮಾನ್ಸೂನ್ ವೇಳಾಪಟ್ಟಿ

ಬೆಂಗಳೂರು, ಮಾರ್ಚ್ 23: ನೈಋತ್ಯ ರೈಲ್ವೆ ಮಾನ್ಸೂನ್ ರೈಲು ವೇಳಾಪಟ್ಟಿ ಜಾರಿ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ಹಲವು ರೈಲುಗಳು ಈ ವೇಳಾಪಟ್ಟಿ ವ್ಯಾಪ್ತಿಗೆ ಒಳಪಡುತ್ತವೆ.

ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2024ರ ಜೂನ್‌ 10 ರಿಂದ ಅಕ್ಟೋಬರ್ 31ರ ತನಕ ಈ ವೇಳಾಪಟ್ಟಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಕೊಂಕಣ ರೈಲ್ವೆ ಹೇಳಿದೆ.

SWR Announces Train Monsoon Schedule For 2024

ನೈಋತ್ಯ ರೈಲ್ವೆ ಮಾನ್ಸೂನ್ ವೇಳಾಪಟ್ಟಿಗೆ ಅನುಗುಣವಾಗಿ ಈ ರೈಲುಗಳು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಸಂಚಾರ ನಡೆಸಲಿವೆ. ಈ ಅವಧಿಯಲ್ಲಿ ಐದು ಜೋಡಿ ರೈಲುಗಳು ಮಾನ್ಸೂನ್ ಸಮಯಕ್ಕೆ ಅನುಗುಣವಾಗಿ ಚಲಿಸುತ್ತವೆ ಪ್ರಯಾಣಿಕರು ಪರಿಷ್ಕೃತ ಸಮಯವನ್ನು ಗಮನದಲ್ಲಿಟ್ಟುಕೊಂಡು ಸಂಚಾರ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಯಾವ-ಯಾವ ರೈಲುಗಳು

* ರೈಲು ಸಂಖ್ಯೆ 12741/ 12742 ವಾಸೋ-ಡ-ಗಾಮಾ-ಪಾಟ್ನಾ-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್

* ರೈಲು ಸಂಖ್ಯೆ 16515/ 16516 ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್

* ರೈಲು ಸಂಖ್ಯೆ 11097/ 11098 ಪುಣೆ-ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್‌ಪ್ರೆಸ್

* ರೈಲು ಸಂಖ್ಯೆ 16595/ 16596 ಕೆಎಸ್‌ಆರ್ ಬೆಂಗಳೂರು-ಕಾರವಾರ-ಕೆಎಸ್‌ಆರ್‌ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್

* ರೈಲು ಸಂಖ್ಯೆ 16586/ 16585 ಮುರುಡೇಶ್ವರ-ಎಸ್‌ಎಂಬಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್

ಮಾನ್ಸೂನ್ ಅವಧಿಯಲ್ಲಿ ಜೋಡಿ ರೈಲುಗಳು ಮಾನ್ಸೂನ್ ಸಮಯಕ್ಕೆ ಅನುಗುಣವಾಗಿ ಚಲಿಸುತ್ತವೆ. ಪ್ರಯಾಣಿಕರು ಈ ಮೇಲಿನ ರೈಲುಗಳ ಮಾನ್ಸೂನ್ ವೇಳಾಪಟ್ಟಿ ತಿಳಿಯಲು ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
https://swr.indianrailways.gov.in

ರೈಲುಗಳ ರದ್ದು ಮಾಹಿತಿ: ಬೈಯ್ಯಪ್ಪನಹಳ್ಳಿ ಯಾರ್ಡ್‌ನಲ್ಲಿ ಬಾಣಸವಾಡಿ-ಕರ್ಮಮೇಳಂ ಮಾರ್ಗದಲ್ಲಿ ಬಾಕ್ಸ್ ಸೇತುವೆ ವಿರ್ಮಾಣಕ್ಕಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾರಣದಿಂದಾಗಿ ಈ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

* ರೈಲು ಸಂಖ್ಯೆ 16211 ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್ 01.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

* ರೈಲು ಸಂಖ್ಯೆ 16212 ಸೇಲಂ-ಯಶವಂತಪುರ ಎಕ್ಸ್‌ಪ್ರೆಸ್ 02.04.2024 ರಿಂದ 06.04.2024 ರವರೆಗೆ ರದ್ದಾಗಿದೆ.

* ರೈಲು ಸಂಖ್ಯೆ 16208 ಮೈಸೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು 01.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್ ರೈಲು 02.04.2024 ರಿಂದ 06.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06573 ಯಶವಂತಪುರ-ತುಮಕೂರು ಮೆಮು ರೈಲು 01.04.2024 ರಿಂದ 04.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06574ತುಮಕೂರು-ಯಶವಂತಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದಾಗಿದೆ.

* ರೈಲು ಸಂಖ್ಯೆ 06591 ಯಶವಂತಪುರ-ಹೊಸೂರು ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06592 ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06593 ಯಶವಂತಪುರ-ಚಿಕ್ಕಬಳ್ಳಾಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06594 ಚಿಕ್ಕಬಳ್ಳಾಪುರ-ಯಶವಂತಪುರ ಮೆಮು ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06393 ಯಶವಂತಪುರ-ಹೊಸೂರು ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

* ರೈಲು ಸಂಖ್ಯೆ 06394 ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು 02.04.2024 ರಿಂದ 05.04.2024 ರವರೆಗೆ ರದ್ದು.

South western railways announced train monsoon schedule for 2024. Here are the list of schedule change of 5 trains.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+