ಬೆಂಗಳೂರಿನಿಂದ ಈ ಮಾರ್ಗಗಗಳಿಗೆ ವಿಶೇಷ ರೈಲು ಸೇವೆ ವಿಸ್ತರಣೆ-ದಿನಾಂಕ, ಸಮಯಗಳ ಮಾಹಿತಿ ತಿಳಿಯಿರಿ

Eastern Railway Zone: ಭಾರತೀಯ ರೈಲ್ವೆಯು ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗಯೇ ಇದೀಗ ಮತ್ತೆ ಪ್ರಯಾಣಿಕರ ದಟ್ಟಣೆ ಹಿನ್ನೆಲೆ ಬೆಂಗಳೂರಿನಿಂದ ಈ ಮಾರ್ಗಗಗಳಲ್ಲಿ ವಿಶೇಷ ರೈಲು ಸೇವೆಯನ್ನು ಮುಂದುವರೆಸಲು ಪೂರ್ವ ರೈಲ್ವೆ ನಿರ್ಧರಿಸಿದೆ. ಹಾಗಾದರೆ ಸಮಯ, ದಿನಾಂಕಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Eastern Railwayಯು ಪ್ರಯಾಣಿಕರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಪುರ ನಿಲ್ದಾಣಗಳ ನಡುವೆ 10 ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಲು ಸೂಚನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Special train service Extension from Bengaluru to these routes Know details

* ರೈಲು ಸಂಖ್ಯೆ 03246 SMVT ಬೆಂಗಳೂರು-ದಾನಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಒಂದು ಟ್ರಿಪ್‌ ಆಗಸ್ಟ್‌ 16, 2024ರಂದು ಸೇವೆಯನ್ನು ಮುಂದುವರೆಸಲಿದೆ.

* ರೈಲು ಸಂಖ್ಯೆ 03260 SMVT ಬೆಂಗಳೂರು-ದಾನಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆಗಸ್ಟ್‌, 15, 2024ರಂದು 1 ಟ್ರಿಪ್ ಸಂಚಾರ ಮುಂದುವರೆಸಲಿದೆ.

* ರೈಲು ಸಂಖ್ಯೆ 03247 ದಾನಪುರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆಗಸ್ಟ್‌, 15, 2024ರಂದು 1 ಟ್ರಿಪ್ ಸಂಚಾರ ಮುಂದುವರೆಸಲಿದೆ.

* ರೈಲು ಸಂಖ್ಯೆ 03248 ಎಸ್ಎಂವಿಟಿ ಬೆಂಗಳೂರು-ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆಗಸ್ಟ್‌ 17, 2024ರಂದು 1 ಟ್ರಿಪ್‌ ಸಂಚಾರ ಮುಂದುವರೆಸಲಿದೆ.

* ರೈಲು ಸಂಖ್ಯೆ 03241 ದಾನಾಪುರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆಗಸ್ಟ್‌ 16, 2024ರಂದು ಒಂದು ಟ್ರಿಪ್‌ ಸೇವೆಯನ್ನು ಮುಂದುವರೆಸಲಿದೆ.

* ರೈಲು ಸಂಖ್ಯೆ 03242 ಎಸ್ಎಂವಿಟಿ ಬೆಂಗಳೂರು-ದಾನಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಆಗಸ್ಟ್‌ 18, 2024ರಂದು (1 ಟ್ರಿಪ್) ಸೇವೆಯನ್ನು ಮುಂದುವರೆಸುತ್ತದೆ.

ಯಾವೆಲ್ಲ ರೈಲುಗಳ ಸೇವೆ ವಿಸ್ತರಣೆ.?

Eastern Railwayಯು ರೈಲು ಸಂಖ್ಯೆ 08543/08544 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಸೇವೆಯಯನ್ನು ವಿಸ್ತರಣೆ ಮಾಡಲಾಗಿದೆ. ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.

* ರೈಲು ಸಂಖ್ಯೆ 08543 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಜೂನ್ 30, 2024ರವರೆಗೆ ಪ್ರತಿ ಭಾನುವಾರ ಓಡಿಸುವಂತೆ ಮೊದಲೇ ಸೂಚಿಸಲಾಗಿತ್ತು. ಆದರೆ ಇದೀಗ ಆಗಸ್ಟ್ 18ರಿಂದ ನವೆಂಬರ್ 24, 2024ರವರೆಗೆ (15 ಟ್ರಿಪ್‌ಗಳು) ವಿಸ್ತರಣೆ ಮಾಡಲಾಗಿದೆ.

* ರೈಲು ಸಂಖ್ಯೆ 08544 ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ಜುಲೈ 1, 2024ರ ವರೆಗೆ ಪ್ರತಿ ಸೋಮವಾರ ಓಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದೀಗ ಆಗಸ್ಟ್ 19ರಿಂದ ನವೆಂಬರ್ 25, 2024ರ ವರೆಗೆ (15 ಟ್ರಿಪ್‌ಗಳು) ವಿಸ್ತರಣೆ ಮಾಡಲಾಗಿದೆ.

ವಿಶಾಖಪಟ್ಟಣಂ ಮತ್ತು ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 08543/08544) ರೈಲುಗಳ ಸೇವೆಯನ್ನು ಈಗಿರುವ ಸಮಯ ಮತ್ತು ನಿಲುಗಡೆಗಳೊಂದಿಗೆ ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ಸೂಚನೆ ನೀಡಿದೆ.

* ವಿಶಾಖಪಟ್ಟಣಂ ನಿಲ್ದಾಣದಿಂದ ಪ್ರತಿ ಭಾನುವಾರ ಚಲಿಸುತ್ತಿರುವ ರೈಲು ಸಂಖ್ಯೆ 08543 ವಿಶಾಖಪಟ್ಟಣಂ- ಎಸ್ಎಂವಿಟಿ ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಆಗಸ್ಟ್ 18ರಿಂದ ನವೆಂಬರ್ 24, 2024ರ ವರೆಗೆ (15 ಟ್ರಿಪ್‌ಗಳು) ಮುಂದುವರೆಸಲಾಗಿದೆ. ಈ ಮೊದಲು ಜೂನ್ 30, 2024ರ ವರೆಗೆ ಓಡಿಸಲು ತಿಳಿಸಲಾಗಿತ್ತು.

* ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರತಿ ಸೋಮವಾರ ಹೊರಡುವ ರೈಲು ಸಂಖ್ಯೆ 08544 ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಶಾಖಪಟ್ಟಣಂ ಸೂಪರ್ ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಆಗಸ್ಟ್ 19ರಿಂದ ನವೆಂಬರ್ 25, 2024ರ ವರೆಗೆ (15 ಟ್ರಿಪ್‌ಗಳು) ವಿಸ್ತಣೆ ಮಾಡಲಾಗಿದೆ. ಈ ಮೊದಲು ಜೂಲೈ 1, 2024ರ ವರೆಗೆ ಓಡಿಸಲು ತಿಳಿಸಲಾಗಿತ್ತು.

* ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಸೋಲಾಪುರ ನಿಲ್ದಾಣಗಳ ನಡುವೆ ದೈನಂದಿನ ಸಂಚರಿಸುವ ಪ್ಯಾಸೆಂಜರ್ ವಿಶೇಷ (ರೈಲು ಸಂಖ್ಯೆ 07331/07332) ರೈಲುಗಳನ್ನು ಪಡನೂರ ನಿಲುಗಡೆ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಯನ್ನು ನವೆಂಬರ್ 11, 2024ರ ವರೆಗೆ, ಅಸ್ತಿತ್ವದಲ್ಲಿರುವ ವೇಳಾಪಟ್ಟಿಯೊಂದಿಗೆ ಮುಂದುವರಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+