ಅರಸೀಕೆರೆಯಿಂದ ವಿಶೇಷ ಬೇಸಿಗೆ ರೈಲು; ನಿಲ್ದಾಣ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್ 29; ನೈಋತ್ಯ ರೈಲ್ವೆಯು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಕೆಲವು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ವಲಯದ ಜೊತೆ ಸೇರಿ ಬೇಡಿಕೆಯ ಮೇರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸುವುದಾಗಿಯೂ ಘೋಷಣೆ ಮಾಡಿದೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಕರ್ನಾಟಕ ಮತ್ತು ಅಕ್ಕ-ಪಕ್ಕದ ರಾಜ್ಯಗಳ ನಡುವೆ ಈ ವಿಶೇಷ ರೈಲು ಸಂಚಾರ ನಡೆಸಲಿದೆ.
ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಹೈದರಾಬಾದ್-ಅರಸೀಕೆರೆ ನಿಲ್ದಾಣಗಳ ನಡುವೆ ಬೇಡಿಕೆಯ ಮೇರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ದಕ್ಷಿಣ ಮಧ್ಯ ರೈಲ್ವೆ ವಲಯ ನಿರ್ಧರಿಸಲಾಗಿದೆ. ರೈಲು ಸಂಚಾರದ ದಿನಾಂಕ, ನಿಲುಗಡೆ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ರೈಲು ಸಂಖ್ಯೆ 07265/07266 ಹೈದರಾಬಾದ್-ಅರಸೀಕೆರೆ-ಹೈದರಾಬಾದ್ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಾಗಿ ಓಡಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ರೈಲು ಸಂಖ್ಯೆ 07265 ಹೈದರಾಬಾದ್-ಅರಸೀಕೆರೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ಬೇಸಿಗೆ ವಿಶೇಷ ರೈಲು ಪ್ರತಿ ಮಂಗಳವಾರ ಏಪ್ರಿಲ್ 4, 2023ರಿಂದ ಜೂನ್ 27, 2023ರವರೆಗೆ ಸಂಜೆ 7.10 ಗಂಟೆಗೆ ಹೈದರಾಬಾದ್ ನಿಲ್ದಾಣದಿಂದ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಅರಸೀಕೆರೆ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 07266 ಅರಸೀಕೆರೆ-ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಬೇಸಿಗೆ ವಿಶೇಷ ರೈಲು ಏಪ್ರಿಲ್ 5, 2023 ರಿಂದ ಜೂನ್ 28, 2023ರವರೆಗೆ ಪ್ರತಿ ಬುಧವಾರ ಅರಸೀಕೆರೆ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.30 ಗಂಟೆಗೆ ಹೈದರಾಬಾದ್ ನಿಲ್ದಾಣಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.
ಈ ರೈಲುಗಳು ಸಿಕಂದರಾಬಾದ್, ಕಾಚಿಗೂಡ, ಉಮದನಗರ, ಶಾದ್‌ನಗರ ಜಡಚೆರ್ಲಾ, ಮಹಬೂಬನಗರ, ವನಪರ್ತಿ ರೋಡ್, ಗದ್ವಾಲ್, ಕರ್ನೂಲ್ ಸಿಟಿ, ದೋಣೆ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ವಿಶೇಷ ರೈಲು 1 ಎಸಿ ಟು ಟೈರ್, 7 ಎಸಿ ತ್ರಿ ಟೈಯರ್, 9 ಎರಡನೇ ದರ್ಜೆ ಸ್ಲೀಪರ್ ಕ್ಲಾಸ್ ಬೋಗಿಗಳು, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು 1 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್-ವ್ಯಾನ್, ಜನರೇಟರ್ ಕಾರ್‌ನೊಂದಿಗೆ 1 ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತವೆ.
ರೈಲು ಸಂಖ್ಯೆ 07233/07234 ಸಿಕಂದರಾಬಾದ್-ಅರಸೀಕೆರೆ-ಸಿಕಂದರಾಬಾದ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ವಿವರ. ರೈಲು ಸಂಖ್ಯೆ 07233 ಸಿಕಂದರಾಬಾದ್-ಅರಸೀಕೆರೆ ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಮಾರ್ಚ್ 30, 2023 ರಿಂದ ಜೂನ್ 29, 2023 ರವರೆಗೆ ರಾತ್ರಿ 8 ಗಂಟೆಗೆ ಸಿಕಂದರಾಬಾದ್ ನಿಲ್ದಾಣದಿಂದ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಅರಸೀಕೆರೆ ನಿಲ್ದಾಣವನ್ನು ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07234 ಅರಸೀಕೆರೆ- ಸಿಕಂದರಾಬಾದ್ ಸಾಪ್ತಾಹಿಕ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ನಿಲ್ದಾಣದಿಂದ ಮಾರ್ಚ್ 31,2023 ರಿಂದ ಜೂನ್ 30,2023 ರವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 7.35 ಗಂಟೆಗೆ ಸಿಕಂದರಾಬಾದ್ ನಿಲ್ದಾಣಕ್ಕೆ ಆಗಮಿಸಲಿದೆ.
ವಿಶೇಷ ರೈಲು ಸಿಕಂದರಾಬಾದ್, ಕಾಚಿಗೂಡ, ಉಮದನಗರ, ಶಾದ್‌ನಗರ, ಜಡಚೆರ್ಲಾ, ಮಹಬೂಬನಗರ, ವನಪರ್ತಿ ರೋಡ್, ಗದ್ವಾಲ್, ರಾಯಚೂರು, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಚಿಕ್ಕಬಾಣಾವರ, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲು 2 ಎಸಿ ಟು ಟೈರ್, 7 ಎಸಿ ತ್ರಿ ಟೈಯರ್, 11 ಎರಡನೇ ದರ್ಜೆ ಸ್ಲೀಪರ್ ಕ್ಲಾಸ್ ಬೋಗಿಗಳು, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು 2 ದಿವ್ಯಾಂಗ ಸ್ನೇಹಿ ಕಂಪರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್-ವ್ಯಾನ್ ಸೇರಿದಂತೆ ಒಟ್ಟು 24 ಬೋಗಿಗಳನ್ನು ಒಳಗೊಂಡಿರುತ್ತವೆ. ಈ ರೈಲಿನ ದರ 1.3 ರಷ್ಟಾಗಿರುತ್ತದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.
ರೈಲು ಸೇವೆ ವಿಸ್ತರಣೆ; ಭಾರತೀಯ ರೈಲ್ವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಿಸಿದೆ. ನೈರುತ್ಯ ರೈಲ್ವೆ ವಲಯದಲ್ಲಿ ಸಂಚಾರ ನಡೆಸುವ ಕೆಲವು ರೈಲುಗಳ ಸೇವೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರೈಲು ಸಂಖ್ಯೆ 07335 ಬೆಳಗಾವಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು ಮೊದಲು ಮಾರ್ಚ್ 30ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ರೈಲನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07336 ಸಿಕಂದರಾಬಾದ್-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಮೊದಲು ಮಾರ್ಚ್ 31 ರವರೆಗೆ ಓಡಿಸಲು ತಿಳಿಸಲಾಗಿತ್ತು. ಏಪ್ರಿಲ್ 1ರಿಂದ ಜುಲೈ 1, 2023 ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06223 ಶಿವಮೊಗ್ಗ-ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸೇವೆ ಈ ಮೊದಲು ಮಾರ್ಚ್ 28 ರವರೆಗೆ ಓಡಿಸಲು ಸೂಚಿಸಲಾಗಿತ್ತು. ರೈಲನ್ನುಏಪ್ರಿಲ್ 2 ರಿಂದ ಜೂನ್ 27, 2023 ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 06224 ಎಂಜಿಆರ್ ಚೆನ್ನೈ ಸೆಂಟ್ರಲ್-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ಸೇವೆ ಈ ಮೊದಲು ಮಾರ್ಚ್ 29 ರವರೆಗೆ ಓಡಿಸಲು ಸೂಚಿಸಲಾಗಿತ್ತು. ಈಗ ರೈಲನ್ನು ಏಪ್ರಿಲ್ 3 ರಿಂದ ಜೂನ್ 28, 2023 ರವರೆಗೆ ವಿಸ್ತರಿಸಲಾಗಿದೆ. ಆದರೆ ಈ ರೈಲುಗಳ ಸಮಯ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ.












Click it and Unblock the Notifications