ನೈಋತ್ಯ ರೈಲ್ವೆಯಿಂದ ಬೇಸಿಗೆಗೆ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು ಏಪ್ರಿಲ್ 6: ಬೇಸಿಗೆಯ ರಜೆ ದಿನಗಳು ಆರಂಭವಾಗಲಿದೆ. ಇದರಿಂದ ರಜಾ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಪ್ರಯಾಣಿಕರಿಗೆ ತಕ್ಕಂತೆ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಹೀಗಾಗಿ ಬೆಂಗಳೂರು ಮತ್ತು ಕಲಬುರಗಿ ನಡುವೆ ಎರಡು ಸಾಪ್ತಾಹಿಕ ವಿಶೇಷ ರೈಲುಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರು ಮತ್ತು ಕಲಬುರಗಿ ನಡುವೆ ಎರಡು ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸುವುದಾಗಿ ನೈಋತ್ಯ ರೈಲ್ವೆ (SWR) ತಿಳಿಸಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ಮಾಡುವ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗಾದರೆ ಈ ರೈಲುಗಳು ಯಾವಾಗ? ಎಲ್ಲಿಂದ ಎಲ್ಲಿಗೆ? ಎಷ್ಟು ಬಾರಿ ಸಂಚಾರ ಮಾಡಲಿದೆ? ಎಲ್ಲೆಲ್ಲಿ ನಿಲುಗಡೆಯಾಗಲಿದೆ ಎಂಬುದನ್ನು ತಿಳಿಯೋಣ.

ಬೆಂಗಳೂರು ಕಲಬುರಗಿ ಎರಡು ಸಾಪ್ತಾಹಿಕ ವಿಶೇಷ ರೈಲುಗಳು
ರೈಲು ಸಂಖ್ಯೆ 06597 (SMVT ಬೆಂಗಳೂರು-ಕಲಬುರಗಿ) ಶುಕ್ರವಾರದಂದು ಚಲಿಸುತ್ತದೆ. ಈ ರೈಲು ಒಟ್ಟು 10 ಟ್ರಿಪ್‌ಗಳನ್ನು ಮಾಡುತ್ತದೆ. ಯಾವ ದಿನಾಂಕದಂದು ಈ ರೈಲು ಸಂಚಾರ ಮಾಡಲಿದೆ ಅಂದರೆ ಏಪ್ರಿಲ್ 12, 19 & 26ರಂದು ಬೆಂಗಳೂರಿನಿಂದ ಕಲಬುರಗಿಗೆ ಸಂಚಾರ ಮಾಡಲಿದೆ. ಜೊತೆಗೆ ಮೇ 3, 10, 17, 24 & 31 ರಂದು ಹಾಗೂ ಜೂನ್ 7 ಮತ್ತು 14ರಂದು ಒಟ್ಟು 10 ಟ್ರಿಪ್ ರೈಲು ಸಂಚಾರ ಮಾಡಲಿದೆ.
ಮತ್ತೊಂದು ರೈಲು ಸಂಖ್ಯೆ 06598(ಕಲಬುರಗಿ-SMVT ಬೆಂಗಳೂರು). ಇದು ಕಲಬುರಗಿಯಿಂದ ಬೆಂಗಳೂರಿಗೆ ಶನಿವಾರದಂದು ಸಂಚಾರ ಮಾಡಲಿದೆ. ಈ ರೈಲು ಕೂಡ ಒಟ್ಟು 10 ಟ್ರಿಪ್‌ಗಳನ್ನು ಮಾಡುತ್ತದೆ. ಅಂದರೆ ಏಪ್ರಿಲ್ 13, 20 & 27ರಂದು ಈ ರೈಲು ಸಂಚಾರ ಮಾಡಲಿದೆ. ಜೊತೆಗೆ ಮೇ 4, 11, 18 & 25 ಹಾಗೂ ಜೂನ್ 1, 8 & 15ರಂದು ಒಟ್ಟು 10 ಟ್ರಿಪ್ ರೈಲು ಸಂಚಾರ ಮಾಡಲಿದೆ.

ಬೆಂಗಳೂರು ಕಲಬುರಗಿ ಸಾಪ್ತಾಹಿಕ ವಿಶೇಷ ರೈಲುಗಳ ಸಮಯ
ಬೆಂಗಳೂರಿನಿಂದ ಕಲಬುರಗಿಗೆ ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ ಸಾಪ್ತಾಹಿಕ ವಿಶೇಷ ರೈಲುಗಳು ಬೇರೆ ಬೇರೆ ದಿನಾಂಕದಂದು ಸಂಚಾರ ಮಾಡಲಿದೆ. ಜೊತೆಗೆ ಬೇರೆ ಸಮಯದಲ್ಲಿ ಸಂಚರಿಸಲಿವೆ. ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ಹೊರಟು ರಾತ್ರಿ 9.05ಕ್ಕೆ ಕಲಬುರಗಿ ತಲುಪಲಿದೆ. ಹಿಂದಿರುಗುವ ರೈಲು ಕಲಬುರಗಿಯಿಂದ ಬೆಳಗ್ಗೆ 5.10ಕ್ಕೆ ಹೊರಟು ಸಂಜೆ 4.15ಕ್ಕೆ ಯಶವಂತಪುರ ತಲುಪಲಿದೆ.
ಬೆಂಗಳೂರು ಕಲಬುರಗಿ ಸಾಪ್ತಾಹಿಕ ವಿಶೇಷ ರೈಲುಗಳ ನಿಲುಗಡೆ ಸ್ಥಳಗಳು...
ಬೆಂಗಳೂರು ಕಲಬುರಗಿ ವಿಶೇಷ ರೈಲು ನಿಲುಗಡೆಯ ಪ್ರದೇಶಗಳ ವಿವರವನ್ನು ರೈಲ್ವೆ ಇಲಾಖೆ ಹಂಚಿಕೊಂಡಿದೆ. ಈ ರೈಲುಗಳು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್‌ಗಳಲ್ಲಿ ನಿಲುಗಡೆಯಾಗಲಿದೆ.
ಎಷ್ಟು ಕೋಚ್‌ಗಳನ್ನು ಹೊಂದಿದೆ?
ಬೆಂಗಳೂರು ಕಲಬುರಗಿ ವಿಶೇಷ ರೈಲು ಒಟ್ಟು 20 ಕೋಚ್‌ಗಳನ್ನು ಹೊಂದಿದ್ದು, ಅದರಲ್ಲಿ 10 ಕೋಚ್‌ಗಳು ನಾನ್-ಎಸಿ ಸ್ಲೀಪರ್ ಕ್ಲಾಸ್ ಆಗಿರುತ್ತವೆ.












Click it and Unblock the Notifications