ಬೆಂಗಳೂರಿನಿಂದ ಹೊರಡುವ ಈ ರೈಲುಗಳಲ್ಲಿ ಕೆಲವು ಬದಲಾವಣೆ

ಬೆಂಗಳೂರು, ಏಪ್ರಿಲ್ 04; ನೈಋತ್ಯ ರೈಲ್ವೆ ರೈಲುಗಳ ವೇಗವನ್ನು 130 ಕಿ. ಮೀ.ಗೆ ಹೆಚ್ಚಿಸುವ ಕಾಮಗಾರಿಯನ್ನು ಕೈಗೊಂಡಿದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸೇವೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಜನರಿಗೆ ಮಾಹಿತಿ ನೀಡಿದೆ.

ಬೆಂಗಳೂರು ಮತ್ತು ಜೋಲಾರ್‌ಪೆಟ್ಟೆ ನಿಲ್ದಾಣಗಳ ನಡುವೆ ಜಲ್ಲಿಕಲ್ಲುಅನ್‌ ಲೋಡಿಂಗ್ ಮಾಡುವ ಸಲುವಾಗಿ ಕೆಲವು ರೈಲುಗಳನ್ನು ಭಾಗಶಃ ರದ್ದು ಮತ್ತು ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಏಪ್ರಿಲ್ 4 ರಿಂದ ಜುಲೈ ತನಕ ತನಕ ರೈಲು ಪ್ರಯಾಣ ಮಾಡುವವರು ಈ ಕುರಿತು ಮಾಹಿತಿ ತಿಳಿದಿರಬೇಕು.

South Western Railway Partially Cancelled Some Trains List

ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01775 ಕೆ. ಎಸ್. ಆರ್. ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು ಏಪ್ರಿಲ್ 4, 6, 9, 11, 13, 16, 18, 20, 23, 25, 27, 30 ಮತ್ತು ಮೇ 2 ಮತ್ತು 4 ರಂದು ವೈಟ್‌ಫೀಲ್ಡ್‌ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲಿನ ಕೊನೆ ನಿಲ್ದಾಣ ವೈಟ್‌ಫೀಲ್ಡ್ ಆಗಿರಲಿದೆ. ಮಾರಿಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01778 ಮಾರಿಕುಪ್ಪಂ-ಬೈಯ್ಯಪ್ಪನಹಳ್ಳಿ ಮೆಮು ವಿಶೇಷ ರೈಲನ್ನು ಏಪ್ರಿಲ್ 4, 6, 9, 11, 13, 16, 18, 20, 23, 25, 27, 30 ಮತ್ತು ಮೇ 2 ಮತ್ತು 4ರಂದು ಮಾರಿಕುಪ್ಪಂ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್‌ ನಿಲ್ದಾಣದಿಂದ ಹೊರಡಲಿದೆ.

ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01775 ಕೆ. ಎಸ್. ಆರ್. ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು ಮೇ 7, 9, 11, 14, 16 ಮತ್ತು 18,ರಂದು ಮಾಲೂರು ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮಾಲೂರು ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. ಮಾರಿಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01778 ಮಾರಿಕುಪ್ಪಂ-ಬೈಯ್ಯಪ್ಪನಹಳ್ಳಿ ಮೆಮು ವಿಶೇಷ ರೈಲನ್ನು ಮೇ 7, 9, 11, 14, 16 ಮತ್ತು 18ರಂದು ಮಾರಿಕುಪ್ಪಂ ಮತ್ತು ಮಾಲೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮಾಲೂರು ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.

South Western Railway Partially Cancelled Some Trains List

ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06529 ಕೆ. ಎಸ್. ಆರ್. ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲನ್ನು ಜೂನ್ 4, 6, 8, 11, 13 ಮತ್ತು 15, 2023 ರಂದು ವರದಪುರ ಮತ್ತು ಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವರದಪುರದಲ್ಲಿ ಪ್ರಯಾಣ ಕೊನೆಗೊಳಿಸಲಿದೆ. ಕುಪ್ಪಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06530 ಕುಪ್ಪಂ-ಕೆ. ಎಸ್. ಆರ್. ಬೆಂಗಳೂರು ಮೆಮು ವಿಶೇಷ ರೈಲನ್ನು ಜೂನ್ 4, 6, 8, 11, 13 ಮತ್ತು 15ರಂದು ಕುಪ್ಪಂ ಮತ್ತು ವರದಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವರದಪುರ ನಿಲ್ದಾಣದಿಂದ ಹೊರಡುತ್ತದೆ.

ಬಂಗಾರಪೇಟೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01773 ಬಂಗಾರಪೇಟೆ-ಕೆ. ಎಸ್. ಆರ್. ಬೆಂಗಳೂರು ಮೆಮು ವಿಶೇಷ ರೈಲನ್ನು ಜೂನ್ 17, 20, 22, 24, 27, 29 ಮತ್ತು ಜುಲೈ 1ರಂದು ವೈಟ್‌ಫೀಲ್ಡ್ ಮತ್ತು ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್ ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ.

ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01774 ಕೆ. ಎಸ್. ಆರ್. ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು ಜೂನ್ 17, 20, 22, 24, 27, 29 ಮತ್ತು ಜುಲೈ 1ರಂದು ಕೆ. ಎಸ್. ಆರ್. ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ವೈಟ್‌ಫೀಲ್ಡ್ ನಿಲ್ದಾಣದಿಂದ ಹೊರಡಲಿದೆ.

ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 01774 ಕೆ. ಎಸ್. ಆರ್. ಬೆಂಗಳೂರು-ಮಾರಿಕುಪ್ಪಂ ಮೆಮು ವಿಶೇಷ ರೈಲನ್ನು ಜುಲೈ 4, 6, 8, 11, 13, 15, 18, 20, 22, 25, 27 ಮತ್ತು 29ರಂದು ಕೆ. ಎಸ್. ಆರ್. ಬೆಂಗಳೂರು-ಬಂಗಾರಪೇಟೆ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಬಂಗಾರಪೇಟೆ ನಿಲ್ದಾಣದಿಂದ ಸಂಚಾರ ಆರಂಭಿಸುತ್ತಿದೆ.

ರೈಲು ರದ್ದು: ಬಂಗಾರಪೇಟೆ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 01773 ಬಂಗಾರಪೇಟೆ-ಕೆ. ಎಸ್. ಆರ್. ಬೆಂಗಳೂರು ಮೆಮು ವಿಶೇಷ ರೈಲನ್ನು ಜುಲೈ 4, 6, 8, 11, 13, 15, 18, 20, 22, 25, 27 29ರಂದು ರದ್ದುಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+