ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ

ಬೆಂಗಳೂರು, ಮೇ 25; ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳು ಏಕಮಾರ್ಗದ ವಿಶೇಷ ರೈಲುಗಳಾಗಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಜನರು ಈ ರೈಲು ಸಂಚಾರದ ಉಪಯೋಗ ಪಡೆದುಕೊಳ್ಳಬಹುದು.

ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿಶೇಷ ರೈಲುಗಳ ಸಂಚಾರದ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಮೇಲಿನ ವಿಶೇಷ ರೈಲುಗಳ ಎಸಿ ಬೋಗಿಗಳಲ್ಲಿ ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

South Western Railway

ಹುಬ್ಬಳ್ಳಿ-ಉತ್ತರ ಪ್ರದೇಶದ ಕಾನ್ಪುರ, ಯಶವಂತಪುರ-ವಡೋದರಾದ ವಿಶ್ವಾಮಿತ್ರ, ಬೆಂಗಳೂರು-ಹೌರಾ ಮತ್ತು ಬೆಂಗಳೂರು-ಬಿಹಾರದ ದಾನಪುರ ನಡುವೆ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ರೈಲುಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ರೈಲುಗಳ ವೇಳಾಪಟ್ಟಿ; ಹುಬ್ಬಳ್ಳಿ-ಉತ್ತರ ಪ್ರದೇಶದ ಕಾನ್ಪುರ ನಡುವೆ ವಿಶೇಷ ರೈಲು (06557) ಸಂಚಾರ ನಡೆಸಲಿದೆ. ಮೇ 27ರಂದು ರಾತ್ರಿ 11.50ಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಈ ರೈಲು ಹೊರಟು, ಮೇ 29ರ ಬೆಳಗ್ಗೆ 11.10 ಗಂಟೆಗೆ ಕಾನ್ವುರ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಸೊಲ್ಲಾಪುರ, ಕುರ್ಡುವಾಡಿ, ದೌಂಡ್, ಅಹ್ಮದ್‌ ನಗರ, ಕೋಪೆರಗಾಂವ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ರಾಣಿ ಕಮಲಾಪತಿ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಓಲೈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

South Western Railway

ಈ ವಿಶೇಷ ರೈಲು 2 ಎಸಿ ತ್ರಿ ಟೈಯರ್ ಬೋಗಿ, 11 ಸೆಕೆಂಡ್ ಕ್ಲಾಸ್ ಸ್ಲೀಪರ್‌ ಬೋಗಿಗಳು, 6 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು 2 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿವೆ.

ಮೇ 27ರಂದು ಸಂಚಾರ ಆರಂಭ; ಯಶವಂತಪುರ-ವಡೋದರಾದ ವಿಶ್ವಾಮಿತ್ರಿ ನಡುವೆ ವಿಶೇಷ ರೈಲು (06565) ಮೇ 27ರಂದು ಬೆಳಗ್ಗೆ 8.15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಸಂಜೆ 4.30 ಗಂಟೆಗೆ ವಡೋದರಾ ನಗರದ ವಿಶ್ವಾಮಿತ್ರಿ ಜಂಕ್ಷನ್‌ಗೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಚಿಕ್ಕಜಾಜೂ‌ರು, ದಾವಣಗೆರೆ, ಕೊಟ್ಟೂರು, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಪುಣೆ, ವಸಾಯಿ ರೋಡ್, ವಾಪಿ ಮತ್ತು ಸೂರತ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ವಿಶೇಷ ರೈಲು 1 ತ್ರಿ ಟೈಯರ್‌ ಬೋಗಿ, 18 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು 2 ದಿವ್ಯಾಂಗಸ್ನೇಹಿ ಕಂಪಾರ್ಟ್‌ ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್‌ ವ್ಯಾನ್‌ ಹೊಂದಿರಲಿದೆ.

ಮೇ 28ರಂದು ಸಂಚಾರ; ಬೆಂಗಳೂರು-ಹೌರಾ ನಡುವಿನ ವಿಶೇಷ ರೈಲು (06569) ಮೇ 28ರಂದು 12.30 ಎಎಂಗೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 11.45ಕ್ಕೆ ಹೌರಾ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟೆ, ಕಟಪಾಡಿ, ರೇಣಿಗುಂಟಾ, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ ಜಂಕ್ಷನ್, ಶ್ರೀಕಾಕುಲಂ, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್‌ಪುರ ಕೆ. ರೋಡ್, ಭದ್ರಖ್, ಖರಗ್‌ಪುರ ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲು 1 ಎಸಿ ತ್ರಿ ಟೈಯರ್ ಬೋಗಿ, 14 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು 2 ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿರಲಿದೆ.

ಮೇ 30ರಂದು ಸಂಚಾರ; ಬೆಂಗಳೂರು-ಬಿಹಾರದ ದಾನಪುರ ನಡುವೆ ವಿಶೇಷ ರೈಲು(06567) ಮೇ 30 ರಂದು ಬೆಳಗ್ಗೆ 6.50 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮೂರನೇ ದಿನ ಬೆಳಗ್ಗೆ 8 ಗಂಟೆಗೆ ದಾನಪುರ‌ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಜೋಲಾರ್‌ಪೆಟ್ಟೆ, ಕಟ್ಪಾಡಿ, ಅರಕ್ಕೋಣಂ, ಪೆರಂಬೂ‌ರ್, ಗುಡೂರು, ವಿಜಯವಾಡ, ವಾರಂಗಲ್, ಬಲ್ಹರಷ್ಹಾ, ನಾಗ್ಪುರ, ಇಟಾರ್ಸಿ, ಜಬ್ಬಲಪುರ, ಸತ್ನಾ, ಪ್ರಯಾಗ್‌ ರಾಜ್ ಛೋಕಿ, ದೀನ-ದಯಾಳ-ಉಪಾಧ್ಯಯ-ಬಕ್ಸರ್, ಆರಾ ಜಂಕ್ಷನ್ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು 1 ಎಸಿ ಟು ಟೈಯರ್ ಬೋಗಿ, 2 ಎಸಿ ತ್ರಿ ಟೈಯರ್ ಬೋಗಿ, 15 ಸೆಕೆಂಡ್ ಕ್ಲಾಸ್ ಸ್ಲೀಪರ್‌ ಬೋಗಿಗಳು, 2 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು 2 ದಿವ್ಯಾಂಗಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+