8 ರೈಲುಗಳ ಸೇವೆ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ, ಪಟ್ಟಿ

ಬೆಂಗಳೂರು, ಜುಲೈ 02; ನೈಋತ್ಯ ರೈಲ್ವೆ ಜುಲೈ ತಿಂಗಳ ಆರಂಭದಲ್ಲಿ ಹಲವು ವಿಶೇಷ ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ವಾರಕ್ಕೊಮ್ಮೆ ಸಂಚಾರ ನಡೆಸುವ ಈ ರೈಲುಗಳನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ 8 ರೈಲುಗಳು ಬೆಂಗಳೂರು ನಗರದಿಂದ ಸಂಚಾರ ನಡೆಸುವ ರೈಲುಗಳಾಗಿವೆ. ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ನಗರ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲುಗಳ ಸೇವೆಗಳನ್ನು ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ವಿಸ್ತರಣೆ ಮಾಡಲಾಗಿದೆ.

South Western Railway Extends 8 Weekly Special Train Service List

8 ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಆದರೆ ರೈಲುಗಳ ವೇಳಾಪಟ್ಟಿ, ನಿಲ್ದಾಣ, ದರಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಹೇಳಿದೆ. ರೈಲು ಪ್ರಯಾಣ ಮಾಡುವವರು ವಿಸ್ತರಣೆಗೊಂಡ ರೈಲು ಸೇವೆಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ.

ವಿಸ್ತರಣೆಯಾದ ರೈಲುಗಳ ಪಟ್ಟಿ

* ರೈಲು ನಂಬರ್‌ 06563. ಯಶವಂತಪುರ-ಮುರುಡೇಶ್ವರ. 1/7/2023 ರಿಂದ 29/7/2023ರ ತನಕ ವಿಸ್ತರಣೆ. ಪ್ರತಿ ಶನಿವಾರ ಸಂಚಾರ ನಡೆಸುವ ವಿಶೇಷ ರೈಲು. ಒಟ್ಟು 5 ಟ್ರಿಪ್ ಸಂಚಾರ ನಡೆಸಲಿದೆ.

* ರೈಲು ಸಂಖ್ಯೆ 06564. ಮುರುಡೇಶ್ವರ ಯಶವಂತಪುರ. 2/7/2023 ರಿಂದ 30/72023ರ ತನಕ ವಿಸ್ತರಣೆ. ಪ್ರತಿ ಭಾನುವಾರ ಸಂಚಾರ ನಡೆಸಲಿದೆ. ಒಟ್ಟು 5 ಟ್ರಿಪ್ ಸಂಚಾರ.

* ರೈಲು ನಂಬರ್ 08543. ವಿಶಾಖಪಟ್ಟಣಂ-ಬೆಂಗಳೂರು ಕಂಟೋನ್ಮೆಂಟ್. ಪ್ರತಿ ಭಾನುವಾರ ಸಂಚಾರ. 2/7/2023 ರಿಂದ 30/7/2023ರ ತನಕ ಸೇವೆ ವಿಸ್ತರಣೆ ಮಾಡಿ ಆದೇಶ. ಒಟ್ಟು 5 ಟ್ರಿಪ್ ಸಂಚಾರ.

* ರೈಲು ನಂಬರ್ 08544. ಬೆಂಗಳೂರು ಕಂಟೋನ್ಮೆಂಟ್-ವಿಶಾಖಪಟ್ಟಣಂ. ಪ್ರತಿ ಸೋಮವಾರ ಸಂಚಾರ. ರೈಲು ಸೇವೆ 3/7/2023 ರಿಂದ 31/7/2023ರ ತನಕ ವಿಸ್ತರಣೆ. ಒಟ್ಟು 5 ಟ್ರಿಪ್ ಸಂಚಾರ ನಡೆಸಲಿದೆ.

* ರೈಲು ನಂಬರ್ 05271. ಮುಜಾಫರ್‌ಪುರ್-ಯಶವಂತಪುರ. ಪ್ರತಿ ಸೋಮವಾರ ಸಂಚಾರ. ಒಟ್ಟು 13 ಟ್ರಿಪ್ ಸಂಚಾರ. ರೈಲು ಸೇವೆ 7/7/2023 ರಿಂದ 29/9/2023ರ ತನಕ ವಿಸ್ತರಣೆ ಮಾಡಿ ಆದೇಶ.

* ರೈಲು ಸಂಖ್ಯೆ 05272. ಯಶವಂತಪುರ-ಮುಜಾಫರ್‌ಪುರ್‌. ಒಟ್ಟು 13 ಟ್ರಿಪ್ ಸಂಚಾರ. ಪ್ರತಿ ಸೋಮವಾರ ಓಡಲಿದೆ. ರೈಲು ಸೇವೆ 10/7/2023 ರಿಂದ 2/10/2023ರ ತನಕ ವಿಸ್ತರಣೆ.

* ರೈಲು ಸಂಖ್ಯೆ 05215. ಬರೌನಿ-ಯಶವಂತಪುರ. ಪ್ರತಿ ಶನಿವಾರ ಸಂಚಾರ. ಒಟ್ಟು 7 ಟ್ರಿಪ್‌ಗಳು. 1/7/2023 ರಿಂದ 12/8/2023ರ ತನಕ ರೈಲು ಸೇವೆ ವಿಸ್ತರಣೆ ಮಾಡಿ ಆದೇಶ.

* ರೈಲು ಸಂಖ್ಯೆ 05216. ಯಶವಂತಪುರ-ಬರೌನಿ. ಪ್ರತಿ ಮಂಗಳವಾರ ಸಂಚಾರ, ಒಟ್ಟು 7 ಟ್ರಿಪ್‌ಗಳು. ರೈಲು ಸೇವೆ 4/7/2023 ರಿಂದ 15/8/2023ರ ತನಕ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.

ರೈಲು ಸ್ಥಗಿತಕ್ಕೆ ಮುಂದಾಗಿತ್ತು; ನೈಋತ್ಯ ರೈಲ್ವೆ ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿ ಸಂಪರ್ಕಿಸುವ ಯಶವಂತಪುರ-ಮುರುಡೇಶ್ವರ ನಡುವಿನ ರೈಲು ಸ್ಥಗಿತಗೊಳಿಸಲು ಮುಂದಾಗಿತ್ತು. ಆದರೆ ಇದಕ್ಕೆ ರೈಲು ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದರು. ಈಗ ಈ ರೈಲನ್ನು ಜುಲೈ ಅಂತ್ಯದ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರೈಲು ನಂಬರ್ 06563/ 06564 ಸೇವೆಯನ್ನು ವಿಸ್ತರಣೆ ಮಾಡಿ ಆದೇಶಿಸಿರುವುದರಿಂದಾಗಿ ಬೆಂಗಳೂರು ಮತ್ತು ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಈ ರೈಲು ಸಂಪೂರ್ಣ ಭರ್ತಿಯಾಗುತ್ತಿದೆ, ಉತ್ತಮ ವಾದ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ. ಆದರೂ ಸಹ ರೈಲು ಸೇವೆ ಏಕೆ ಸ್ಥಗಿತಗೊಳಿಸಲಾಗುತ್ತಿದೆ? ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದರು.

ರೈಲು ನಂಬರ್ 06563 ಯಶವಂತಪುರ-ಮುರುಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜುಲೈ 1, 8, 15, 22 ಮತ್ತು 29ರಂದು ಸಂಚಾರ ನಡೆಸಲಿದೆ. ರೈಲು ನಂಬರ್ 06564 ಮರುಡೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿ ರವಿವಾರ ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+