Vande Bharat Train; ಜನರ ಮನಗೆದ್ದ 4 ರೈಲು, ಪ್ರಯಾಣಿಕರು ಎಷ್ಟು?

ಬೆಂಗಳೂರು, ಜನವರಿ 03: ಭಾರತೀಯ ರೈಲ್ವೆ ದೇಶದ ಹಲವು ಮಾರ್ಗದಲ್ಲಿ ವಂದೇ ಭಾರತ್‌ ರೈಲುಗಳ ಸಂಚಾರವನ್ನು ಆರಂಭಿಸಿದೆ. ಡಿಸೆಂಬರ್ 2023ರಲ್ಲಿ 4 ವಂದೇ ಭಾರತ್ ರೈಲುಗಳು ಶೇ 100ರಷ್ಟು ಪ್ರಯಾಣಿಕರಿಂದ ಭರ್ತಿಯಾಗಿದೆ.

ದಕ್ಷಿಣ ಕೇಂದ್ರ ರೈಲ್ವೆ ವಲಯ (SCR) ತನ್ನ ವ್ಯಾಪ್ತಿಯಲ್ಲಿ ಒಟ್ಟು 4 ವಂದೇ ಭಾರತ್ ರೈಲುಗಳನ್ನು ಓಡಿಸುತ್ತದೆ. ಈ ಎಲ್ಲಾ ರೈಲುಗಳು ಯಶಸ್ವಿಯಾಗಿ ಸಂಚಾರ ನಡೆಸುತ್ತಿವೆ. ಇದರಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಸಂಪರ್ಕಿಸುವ ಯಶವಂತಪುರ-ಕಾಚಿಗುಡ ರೈಲು ಸಹ ಸೇರಿದೆ.

SCR Four Vande Bharat Trains Get 100 Percent Occupancy

ಸಿಕಂದರಾಬಾದ್-ವಿಶಾಖಪಟ್ಟಣ, ಸಿಕಂದರಾಬಾದ್-ತಿರುಪತಿ, ಕಾಚಿಗುಡ-ಯಶವಂತಪುರ ಮತ್ತು ವಿಜಯವಾಡ- ಎಂಜಿಆರ್ ಚೆನ್ನೈ ನಡುವಿನ ವಂದೇ ಭಾರತ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ರೈಲುನ ಸೀಟುಗಳು ಸಂಪೂರ್ಣ ಭರ್ತಿಯಾಗುತ್ತಿವೆ.

ಪ್ರಯಾಣಿಕರ ಸಂಖ್ಯೆ ಎಷ್ಟು?; ಸಿಕಂದರಾಬಾದ್-ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ರೈಲನ್ನು 2023ರ ಜನವರಿಯಲ್ಲಿ ಆರಂಭಿಸಲಾಯಿತು. ಈ ರೈಲು 16 ಬೋಗಿಗಳನ್ನು ಒಳಗೊಂಡಿದೆ. ಈ ರೈಲು ಪ್ರತಿ ತಿಂಗಳು ಶೇ 100ರಷ್ಟು ಪ್ರಯಾಣಿಕರಿಂದ ಭರ್ತಿಯಾಗಿ ಸಾಗುತ್ತಿದೆ. ಡಿಸೆಂಬರ್‌ನಲ್ಲಿ ಸಿಕಂದರಾಬಾದ್-ವಿಶಾಖಪಟ್ಟಂ ನಡುವಿನ ಪ್ರಯಾಣಿಕರ ಸಂಖ್ಯೆ ಶೇ 134 ಮತ್ತು ವಿಶಾಖಪಟ್ಟಣಂ-ಸಿಕಂದರಾಬಾದ್ ಪ್ರಯಾಣಿಕರ ಸಂಖ್ಯೆ ಶೇ 143 ಆಗಿತ್ತು.

ಏಪ್ರಿಲ್ 2023ರಿಂದ ಸಿಕಂದರಾಬಾದ್-ತಿರುಪತಿ ನಡುವಿನ ರೈಲು ಸಹ ಸಂಪೂರ್ಣ ಭರ್ತಿಯಾಗುತ್ತಿದೆ. ಡಿಸೆಂಬರ್‌ ತಿಂಗಳಿನಲ್ಲಿ ಸಿಕಂದರಾಬಾದ್-ತಿರುಪತಿ ನಡುವಿನ ಪ್ರಯಾಣಿಕರು ಶೇ 114. ಅದೇ ತಿರುಪತಿ-ಸಿಕಂದರಾಬಾದ್ ಪ್ರಯಾಣಿಕರ ಸಂಖ್ಯೆ ಶೇ 105.

2023ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು-ಹೈದರಾಬಾದ್ ನಡುವಿನ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಯಶವಂತಪುರ-ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲಾಯಿತು. ಡಿಸೆಂಬರ್‌ನಲ್ಲಿ ಕಾಚಿಗುಡ-ಯಶವಂತಪುರ ನಡುವೆ ಶೇ 107ರಷ್ಟು ಪ್ರಯಾಣಿಕರು ಸಂಚಾರ ನಡೆಸಿದ್ದಾರೆ, ಅದೇ ಯಶವಂತಪುರ-ಕಾಚಿಗುಡ ನಡುವೆ ಶೇ 110ರಷ್ಟು ಪ್ರಯಾಣಿಕರ ಸಂಚಾರವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿಯೇ ಭಾರತೀಯ ರೈಲ್ವೆ ವಿಜಯವಾಡ- ಎಂಜಿಆರ್ ಚೆನ್ನೈ ನಡುವೆ ರೈಲು ಸಂಚಾರ ಆರಂಭವಾಯಿತು. ಈ ರೈಲಿಗೂ ಸಹ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಜಯವಾಡ- ಎಂಜಿಆರ್ ಚೆನ್ನೈ ನಡುವೆ ಶೇ 126ರಷ್ಟು ಪ್ರಯಾಣಿಕರು ಮತ್ತು ಎಂಜಿಆರ್ ಚೆನ್ನೈ-ವಿಜಯವಾಡ ನಡುವೆ ಶೇ 119ರಷ್ಟು ಪ್ರಯಾಣಿಕರ ಸಂಚಾರ ನಡೆಸಿದ್ದಾರೆ.

ಎರಡು ನಗರಗಳನ್ನು ಸಂಪರ್ಕಿಸುವ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲು ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಮಯ ಉಳಿತಾಯವಾಗುವ, ಐಷಾರಾಮಿ ವ್ಯವಸ್ಥೆ ಇರುವ ಕಾರಣ ಜನರು ಹೆಚ್ಚಾಗಿ ಈ ರೈಲುಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ರೈಲ್ವೆಯ ಐಷಾರಾಮಿ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಇದು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸುತ್ತದೆ. ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳನ್ನು ಹೊಂದಿರುವ ಆಧುನಿಕ ಕೋಚ್‌ಗಳನ್ನು ಈ ರೈಲುಗಳು ಹೊಂದಿವೆ.

'ಕವಚ್‌' ವ್ಯವಸ್ಥೆಯನ್ನು ಬೋಗಿಯೊಂದಿಗೆ ಅಳವಡಿಸಲಾಗಿದೆ. 160 KMPH ವರೆಗೆ ವೇಗವಾದ ವೇಗವರ್ಧನೆ ಮತ್ತು ಹೆಚ್ಚಿನ ವೇಗದ ಕಾರ್ಯಾಚರಣೆಗೆ ಅನುಕೂಲವಾಗುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಸ್ವಯಂಚಾಲಿತ ಪ್ಲಗ್ ಬಾಗಿಲುಗಳು, ಉತ್ತಮ ಗುಣಮಟ್ಟದ ಆಸನಗಳು ಮತ್ತು ಪ್ರತಿ ಆಸನಕ್ಕೂ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳಿವೆ.

ಹಾಟ್ ಕೇಸ್, ಬಾಟಲ್ ಕೂಲರ್, ಡೀಪ್ ಫ್ರೀಜರ್ ಮತ್ತು ಬಿಸಿನೀರಿನ ಬಾಯ್ಲರ್ ಒದಗಿಸುವ ಮಿನಿ ಪ್ಯಾಂಟ್ರಿ ನೇರ ಮತ್ತು ಪ್ರಸರಣ ಬೆಳಕಿನ ವ್ಯವಸ್ಥೆ ಇದೆ. ಪ್ರತಿ ಕೋಚ್‌ನಲ್ಲಿ ತುರ್ತು ತೆರೆಯಬಹುದಾದ ವಿಂಡೋಸ್ ಮತ್ತು ಸಿಸಿಟಿವಿಗಳ ಸುರಕ್ಷತೆ ಇದೆ. ಬೋರ್ಡ್ ಗೇಜ್ (ಬಿಜಿ) ವಿದ್ಯುದೀಕೃತ ನೆಟ್‌ವರ್ಕ್ ಹೊಂದಿರುವ ರಾಜ್ಯಗಳನ್ನು ಈ ರೈಲು ಸದ್ಯ ಸಂಪರ್ಕಿಸುತ್ತದೆ. ಭಾರತದ ಮೊದಲ ಸ್ವದೇಶಿ ವಿನ್ಯಾಸದ ರೈಲು ಪ್ರಯಾಣವನ್ನು ಜನರು ಮೆಚ್ಚಿಕೊಂಡಿದ್ದಾರೆ. ದರ ಹೆಚ್ಚು ಎಂಬ ಆರೋಪದ ನಡುವೆಯೂ ಜನರು ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+