Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ ಮೋದಿಯಿಂದ ಇಂದು ವರ್ಚುವಲ್ ಚಾಲನೆ

ಹುಬ್ಬಳ್ಳಿ ಸೆಪ್ಟೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ ವರ್ಚುವಲ್ ಚಾಲನೆ ನೀಡಲಿದ್ದಾರೆ. ಇದು ಕರ್ನಾಟಕದ 10ನೇ ವಂದೇ ಭಾರತ್ ರೈಲಾಗಿದೆ. ಹಾಗಾದರೆ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಮಯ, ಯಾವ ದಿನ ಸಂಚಾರ ಮಾಡಲಿದೆ, ಯಾವ ನಿಲ್ದಾಣಗಳ ಮೂಲಕ ಸಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಖ್ಯೆ 20669/20670 ಒಟ್ಟು 8 ಬೋಗಿಗಳನ್ನ ಹೊಂದಿದೆ. 52 ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್‌ಗಳು, 478 ಚೇರ್‌ ಕಾರ್‌ ಸೀಟುಗಳು ಹಾಗೂ 530 ಆಸನಗಳನ್ನು ಹೊಂದಿದೆ. ಈ ರೈಲು ಹುಬ್ಬಳ್ಳಿಂದ ಬುಧವಾರ, ಶುಕ್ರವಾರ ಹಾಗೂ ಭಾನುವಾರ ಹೊರಡಲಿದೆ. ಅದೇ ದಿನ ಪುಣೆ ತಲುಪಲಿದೆ. ಇನ್ನೂ ಪುಣೆಯಿಂದ ಗುರುವಾರ, ಶನಿವಾರ ಮತ್ತು ಸೋಮವಾರ ಹೊರಟು ಹುಬ್ಬಳ್ಳಿ ತಲುಪುತ್ತದೆ.

pm narendra modi will flag off hubballi pune vande bharat train

ಯಾವೆಲ್ಲಾ ನಿಲ್ದಾಣಗಳ ಮೂಲಕ ಸಾಗಲಿದೆ?

ಹುಬ್ಬಳ್ಳಿಂದ ಹೊರಡುವ ವಂದೇ ಭಾರತ್ ರೈಲು ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ಮೂಲಕ ಫುಣೆಗೆ ತರಳಲಿದೆ. ಹುಬ್ಬಳ್ಳಿಯಿಂದ ಪುಣೆಗೆ ಹೊರಡುವ ರೈಲು ಬುಧವಾರ, ಶುಕ್ರವಾರ ಹಾಗೂ ಭಾನುವಾರ ಹೊರಡಲಿದೆ.

ಹುಬ್ಬಳ್ಳಿಯಿಂದ ಹೊರಡುವ ಸಮಯ

ವಂದೇ ಭಾರತ್ ರೈಲು (ಸಂಖ್ಯೆ 20669) ಹುಬ್ಬಳ್ಳಿಂದ ಬೆಳಗ್ಗೆ 5 ಗಂಟೆಗೆ ಹೊರಡಲಿದೆ. ಧಾರವಾಡಕ್ಕೆ ಬೆಳಗ್ಗೆ 5:15ಕ್ಕೆ ತಲುಪಲಿದೆ. ಬೆಳಗ್ಗೆ 5:17ಕ್ಕೆ ಹೊರಡಲಿದೆ. ಬೆಳಗಾವಿಗೆ ಬೆಳಗ್ಗೆ 6:55ಕ್ಕೆ ತಲುಪಲಿದ್ದು, ಬೆಳಗ್ಗೆ 7:00ಕ್ಕೆ ಹೊರಡಲಿದೆ. ಇನ್ನೂ ಮೀರಜ್ ಅನ್ನು ಬೆಳಗ್ಗೆ 9:15ಕ್ಕೆ ತಲುಪಲಿದ್ದು, 9:20ಕ್ಕೆ ಹೊರಡಲಿದೆ, ಸಾಂಗ್ಲಿಗೆ 9:30ಕ್ಕೆ ತಲುಪಿ 9:32ಕ್ಕೆ ನಿರ್ಗಮಿಸಲಿದೆ. ಸತಾರಾವನ್ನು ಬೆಳಗ್ಗೆ 10:35ಕ್ಕೆ ತಲುಪಿ ಬೆಳಗ್ಗೆ 10:37ಕ್ಕೆ ಹೊರಡಲಿದೆ. ಮಧ್ಯಾಹ್ನಕ್ಕೆ 1:30ಕ್ಕೆ ಪುಣೆ ತಲುಪಲಿದೆ.

ಪುಣೆಯಿಂದ ಹೊರಡುವ ಸಮಯ

ವಂದೇ ಭಾರತ್ ರೈಲು (ಸಂಖ್ಯೆ 20670) ಪುಣೆಯಿಂದ ಗುರುವಾರ, ಶನಿವಾರ ಹಾಗೂ ಸೋಮವಾರ ಮಾತ್ರ ಸಂಚರಿಸಲಿದೆ. ಇದು ಪುಣೆಯಿಂದ ಮಧ್ಯಾಹ್ನ 2:15ಕ್ಕೆ ಹೊರಡಲಿದೆ. ಸತಾರಾವನ್ನು ಸಂಜೆ 4:08ಕ್ಕೆ ತಲುಪಲಿದ್ದು 4:10ಕ್ಕೆ ಹೊರಡಲಿದೆ. ಸಾಂಗ್ಲಿಯನ್ನು ಸಂಜೆ 6:10ಕ್ಕೆ ತಲುಪಲಿದ್ದು 6:12ಕ್ಕೆ ಹೊರಡಲಿದೆ, ಮೀರಜ್ ಅನ್ನು ಸಂಜೆ 6:45ಕ್ಕೆ ತಲುಪಿ 6:50ಕ್ಕೆ ತೆರಳಲಿದೆ. ಇನ್ನೂ ರಾತ್ರಿ 8:35ಕ್ಕೆ ಬೆಳಗಾವಿ ತಲುಪಿ 8:40ಕ್ಕೆ ನಿರ್ಗಮಿಸಲಿದೆ. ಧಾರವಾರಡವನ್ನು ರಾತ್ರಿ 10:20ಕ್ಕೆ ತಲುಪಲಿದ್ದು 10:22ಕ್ಕೆ ನಿರ್ಗಮಿಸಿ 10:45ಕ್ಕೆ ಹುಬ್ಬಳ್ಳಿ ತಲುಪಲಿದೆ.

ಈ ರೈಲು 8 ಗಂಟೆ 30 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಸಂಚಾರ ಕಲ್ಪಿಸಲಿದೆ. ಎರಡು ರಾಜ್ಯಗಳ ಐದು ಪ್ರಮುಖ ನಗರಗಳಲಲ್ಲಿ ಮಾತ್ರ ನಿಲುಗಡೆಯಾಗಲಿದೆ. ಇಂದು ಅಹ್ಮದಾಬಾದ್‌ನಿಂದ ಮೋದಿ ಅವರು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ದಿನ ರೈಲು ಪುಣೆಯಿಂದ ಹುಬ್ಬಳ್ಳಿಗೆ ವಿಶೇಷ ಸಂಚಾರ ಮಾಡಲಿದೆ. ಅಧಿಕೃತವಾಗಿ ಪ್ರಯಾಣಿಕರ ಸೇವೆಯು ಸೆಪ್ಟೆಂಬರ್ 18ರಿಂದ ಹುಬ್ಬಳ್ಳಿಯಿಂದ, ಸೆಪ್ಟೆಂಬರ್ 19ರಿಂದ ಪುಣೆಯಿಂದ ಆರಂಭವಾಗಲಿದೆ.

ಬೆಳಗಾವಿಯ ಪ್ರಯಾಣಿಕರಿಂದ ವಿರೋಧ

ಈಗಾಗಲೇ ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಇದಕ್ಕೆ 2023ರ ಜೂನ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆದರೆ ಬೆಂಗಳೂರು ಧಾರವಾಡ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿಗೆ ವಿಸ್ತರಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸದೆ, ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುತ್ತಿರುವುದಕ್ಕೆ ಬೆಳಗಾವಿಯ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+