One Day Trip: ಬೆಂಗಳೂರಿನಿಂದ ಆಚೆ ಹೋಗುವಿರಾ? ಇಲ್ಲೇ ಇದೆ ಓಂಕಾರೇಶ್ವರ ನೋಡುವಿರಾ?

ಕೃಷ್ಣ ಜನ್ಮಾಷ್ಟಮಿ ಮುಗಿತು. ಈಗೇನಿದ್ರು ಗಣೇಶನ ಹಬ್ಬ ಬರೋವರೆಗೂ ಸಾಲು ಸಾಲು ರಜೆಗಳಿಲ್ಲ. ಈ ವೀಕೆಂಡ್ ಅಲ್ಲೇ ಸುತ್ತಾಡ್ಬೇಕು ಅನ್ಕೊಂಡಿದ್ರೆ ಬೆಂಗಳೂರಿನಲ್ಲೇ ಸಾಕಷ್ಟು ಸ್ಥಳಗಳಿವೆ. ನಿಮ್ಮ ವಾರಾಂತ್ಯವನ್ನು ಕೊಂಚ ಮಟ್ಟಿಗೆ ಸ್ಪೆಷಲ್ ಆಗಿ ಕಳಿಬೇಕು ಅಂನ್ಕೊಂಡಿದ್ರೆ ಬೆಂಗಳೂರಿನಲ್ಲಿ ಕೆಲ ಅದ್ಬುತ ಸ್ಥಳಗಳಿವೆ.

ಅಯ್ಯೋ ಶನಿವಾರ ಮಾತ್ರ ನನಗೆ ರಜೆ, ಭಾನುವಾರ ಮಾತ್ರ ನಾನು ಫ್ರೀ ಇರೋದು ಅನ್ನೋರಿಗೆ ಈ ಸ್ಥಳಗಳು ಬೇಸರ ತರುವುದಿಲ್ಲ. ಈ ಒಂದು ದಿನದ ಬಿಡುವಿನ ಸಮಯವನ್ನು ನೀವು ನಿಮ್ಮ ಸಂಗಾತಿಯೊಂದಿಗೆ ಕಳೆಯಬಹುದು. ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ಸ್ಥಳದಲ್ಲಿ ಓಂಕಾರೇಶ್ವರ ದೇವಸ್ಥಾನ ಒಂದು.

One Day Trip: Must See Temples in Bengaluru

ಓಂಕಾರೇಶ್ವರ ದೇವಸ್ಥಾನ

ಓಂಕಾರೇಶ್ವರ ದೇವಸ್ಥಾನ ಬೆಂಗಳೂರಿನಲ್ಲಿ ವಿಶೇಷವಾಗಿದೆ. ಇಲ್ಲಿ ದೇಶದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ಕಂಡುಬರುವ ಜ್ಯೋತಿರ್ಲಿಂಗ ಕಾಣಬಹುದು. ಓಂಕಾರ ಹಿಲ್ಸ್ ಅಥವಾ ಓಂಕಾರೇಶ್ವರ ಬೆಟ್ಟಗಳು ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಸಮೀಪದಲ್ಲಿದೆ. ಇದು ಮತ್ಸ್ಯ ನಾರಾಯಣ ದೇವಾಲಯ ಮತ್ತು ದ್ವಾದಶ ಜ್ಯೋತಿರ್ಲಿಂಗ ದೇವಾಲಯಗಳಿಗೆ ಪ್ರಸಿದ್ಧವಾದ ಶಿವ ದೇವಾಲಯವಾಗಿದೆ.

ಈ ಬೆಟ್ಟವು 2800 ಅಡಿ ಎತ್ತರದಲ್ಲಿದ್ದು ಇಲ್ಲಿ ಬೆಂಗಳೂರಿನ ನೋಟವನ್ನು ಕಣ್ತುಂಬಿಕೊಳ್ಳಬಹುದು. 40 ಅಡಿ ದೈತ್ಯ ಗಡಿಯಾರ ಗೋಪುರವು ಜನರನ್ನು ಈ ಸ್ಥಳಕ್ಕೆ ಬರುವಂತೆ ಮಾಡುತ್ತದೆ. ಇದು ವಿಶ್ವದ ಅತಿದೊಡ್ಡ ಗಡಿಯಾರ ಗೋಪುರಗಳಲ್ಲಿ ಒಂದಾಗಿದೆ. ಇದು ಲಂಡನ್‌ನಲ್ಲಿರುವ ಪ್ರಸಿದ್ಧ ಬಿಗ್ ಬೆನ್‌ಗಿಂತಲೂ ದೊಡ್ಡದಾಗಿದೆ.

One Day Trip: Must See Temples in Bengaluru

ಭೋಗ ನಂದೀಶ್ವರ ದೇವಸ್ಥಾನ

ನಂದಿ ಬೆಟ್ಟದ ತಪ್ಪಲಿನಲ್ಲಿ ಬೋಗ ನಂದೀಶ್ವರ ದೇವಸ್ಥಾನವಿದೆ. ಬೆಂಗಳೂರಿನಿಂದ ನೂರು ಕಿ.ಮೀ ದೂರದಲ್ಲಿರುವ ಈ ದೇವಾಲಯವು ಸುಂದರವಾದ ಮತ್ತು ದೊಡ್ಡದಾದ ಕಲ್ಯಾಣಿಗೆ ಹೆಸರುವಾಸಿಯಾಗಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ಶಿವ ದೇವಾಲಯಗಳಲ್ಲಿ ಒಂದಾಗಿದೆ. ದ್ರಾವಿಡ ವಾಸ್ತುಶೈಲಿಯಲ್ಲಿ ನೋಳಂ ರಾಜವಂಶದಿಂದ ಸುಮಾರು 9ನೇ ಶತಮಾನದಲ್ಲಿ ನಿರ್ಮಿಸಲಾಯಿತು.

ಹೊಯ್ಸಳರು ಶಿವ ಮತ್ತು ಪಾರ್ವತಿಯ ವಿವಾಹವನ್ನು ಚಿತ್ರಿಸುವ ಉಮಾ ಮಹೇಶ್ವರ ದೇವಾಲಯವನ್ನು ಮತ್ತು ಚೋಳರು ಶಿವನನ್ನು ಪ್ರತಿನಿಧಿಸುವ ಶಿವ ದೇವಾಲಯ ಭೋಗ ನಂಧೀಶ್ವರವನ್ನು ನಿರ್ಮಿಸಿದರು. ಶಿವನ ಪರಿತ್ಯಾಗವನ್ನು ಚಿತ್ರಿಸುವ ಯೋಗ ನರಸಿಂಹ ದೇವಾಲಯವು ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ ನಂದಿ ಬೆಟ್ಟಗಳ ತುದಿಯಲ್ಲಿದೆ.

One Day Trip: Must See Temples in Bengaluru

ಮುರುಗ ದೇವಸ್ಥಾನ

ರಾಜರಾಜೇಶ್ವರಿ ನಗರದಲ್ಲಿರುವ ಆರು ಮುಖದ ಮುರುಗ ದೇವಾಲಯವು ಬೆಂಗಳೂರಿನಲ್ಲಿರುವ ಷಣ್ಮುಕ ದೇವರಿಗೆ (ಮುರುಗ) ಸಮರ್ಪಿತವಾದ ವಿಶಿಷ್ಟ ದೇವಾಲಯವಾಗಿದೆ. ಶೃಂಗಗಿರಿ ಬೆಟ್ಟದಲ್ಲಿರುವ ಷಣ್ಮುಖ ದೇವಾಲಯದ ಅಸಾಧಾರಣ ವೈಶಿಷ್ಟ್ಯವೆಂದರೆ ಷಣ್ಮುಖ ಭಗವಂತನ ಆರು ಮುಖಗಳನ್ನು ಹೊಂದಿರುವ ಗೋಪುರ. ಷಣ್ಮುಘನ (ಷಣ್ಮುಖ) 6 ಮುಖಗಳನ್ನು ಒಳಗೊಂಡಿರುವ ಗೋಪುರವು 2-3 ಕಿಮೀ ದೂರದಿಂದ ಗೋಚರಿಸುತ್ತದೆ. ಈ ದೇವಸ್ಥಾನವೂ ಎತ್ತರದಲ್ಲಿದ್ದು ಬೆಂಗಳೂರಿನ ಕೆಲಭಾಗದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+