ಹುಬ್ಬಳ್ಳಿ-ಹೈದರಾಬಾದ್ ವೇಗದೂತ ಬಸ್: ದರ, ವೇಳಾಪಟ್ಟಿ
ಹುಬ್ಬಳ್ಳಿ, ಮೇ 28: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಅಂತರರಾಜ್ಯ ಪ್ರಯಾಣಿಕರ ಅನುಕೂಲಕ್ಕಾಗಿ ವೇಗದೂತ ಬಸ್‌ಗಳನ್ನು ಪರಿಚಯಿಸಿದೆ. ಹುಬ್ಬಳ್ಳಿ-ಹೈದರಾಬಾದ್ ನಡುವೆ ಈ ಬಸ್ ಸಂಚಾರ ನಡೆಸಲಿದೆ.
ಹುಬ್ಬಳ್ಳಿ-ಹೈದರಾಬಾದ್ ನಡುವಿನ ವೇಗದೂತ ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮಾರ್ಗದ ಪ್ರಯಾಣದರ 700 ರೂ.ಗಳು ಎಂದು ನಿಗದಿ ಮಾಡಲಾಗಿದೆ. www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಬಹುದು.

ಹುಬ್ಬಳ್ಳಿಯಿಂದ ಹೊರಡುವ ವೇಗದೂತ ಬಸ್ ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್ ತಲುಪಲಿದೆ. ಪ್ರಯಾಣಿಕರ ಬಸ್ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಸ್ ವೇಳಾಪಟ್ಟಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಹೈದರಾಬಾದ್ ನಡುವಿನ ವೇಗದೂತ ಬಸ್ ಹುಬ್ಬಳ್ಳಿಯಿಂದ 15:00 ಗಂಟೆಗೆ ಹೊರಡಲಿದೆ. ಹೈದರಾಬಾದ್ ತಲುಪುವ ವೇಳೆ 05:00.
ಈ ಬಸ್ ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮೂಲಕ ಸಾಗುವುದರಿಂದ ವಿವಿಧ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ಕುಮಟಾ-ತಿರುಪತಿ ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಮಟಾ-ತಿರುಪತಿ ನಡುವೆಯೂ ವೇಗದೂತ ಬಸ್‌ಗಳನ್ನು ಓಡಿಸುತ್ತಿದೆ. ಈ ವೇಗದೂತ ಬಸ್ ಪ್ರಯಾಣ ದರ 855 ರೂ.ಗಳು. ಕುಮಟಾ-ತಿರುಪತಿ ನಡುವಿನ ಬಸ್ ಶಿರಸಿ, ಸಿದ್ಧಾಪುರ, ಶಿವಮೊಗ್ಗ, ಬೆಂಗಳೂರು ಮೂಲಕ ಸಂಚರಿಸುತ್ತದೆ.
ಬಸ್ ಕುಮಟಾದಿಂದ 16:00ಕ್ಕೆ ಹೊರಟು, ತಿರುಪತಿಯನ್ನು 09:30ಕ್ಕೆ ತಲುಪಲಿದೆ. ಹಾಗೆಯೇ ತಿರುಪತಿಯಿಂದ 16:00 ಗಂಟೆಗೆ ಹೊರಟು, ಕುಮಟಾವನ್ನು 10.30ಕ್ಕೆ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ 7760991730 ಸಂಖ್ಯೆಗೆ ಕರೆ ಮಾಡಬಹುದು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ದಿನಗಳ ಹಿಂದೆ ಬೆಳಗಾವಿ-ಬಬಲಾದಿ ನಡುವೆ ವೇಗದೂತ ಬಸ್ ಸಂಚಾರ ಆರಂಭಿಸಿದೆ. ಈ ಬಸ್ ಯರಗಟ್ಟಿ, ಯಾದವಾಡ, ಮುಧೋಳ್, ಗಲಗಲಿ ನಡುವೆ ಸಂಚಾರ ನಡೆಸಲಿದೆ.
ಬಸ್ ಬೆಳಗಾವಿಯಿಂದ 16:00 ಗಂಟೆಗೆ ಹೊರಟು, ಬಬಲಾದಿಗೆ 20:00ಕ್ಕೆ ತಲುಪಲಿದೆ. ಬಬಲಾದಿಯಿಂದ 06:00ಕ್ಕೆ ಹೊರಟು, ಬೆಳಗಾವಿಗೆ 10:00ಕ್ಕೆ ತಲುಪಲಿದೆ.












Click it and Unblock the Notifications