NWKRTCಗೆ ಬರಲಿವೆ ಅಂಬಾರಿ ಉತ್ಸವ ಐಷಾರಾಮಿ ಬಸ್
ಹುಬ್ಬಳ್ಳಿ, ನವೆಂಬರ್ 30; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗೆ 'ಪಲ್ಲಕ್ಕಿ' ಹೆಸರಿನ ನೂತನ ಸ್ಲೀಪರ್ ಮಾದರಿಯ ನಾನ್ ಎಸಿ ಬಸ್ ಸೇರ್ಪಡೆಯಾಗಲಿದೆ. ಇದರ ಜೊತೆಗೆ ಐಷಾರಾಮಿ 4 'ಅಂಬಾರಿ ಉತ್ಸವ' ಬಸ್‌ಗಳು ಸೇರಲಿವೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಯುರೋಪಿಯನ್ ಮಾದರಿಯ ಮಲ್ಟಿ ಆಕ್ಸೆಲ್ ಹವಾನಿಯಂತ್ರಣ ಸಹಿತ ಸ್ಲೀಪರ್ ಬಸ್‌ಗಳು ಸಂಸ್ಥೆಗೆ ಸೇರಲಿವೆ. ಆದರೆ ಯಾವ ಮಾರ್ಗದಲ್ಲಿ ಈ ಬಸ್ ಸಂಚಾರ ನಡೆಸಲಿವೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಬಸ್‌ಗಳ ದರ, ಟೆಂಡರ್ ಮಾಹಿತಿ; ಕೆಎಸ್ಆರ್‌ಟಿಸಿ ಈ ವರ್ಷದ ಫೆಬ್ರವರಿಯಲ್ಲಿ 'ಅಂಬಾರಿ ಉತ್ಸವ' ಮಾದರಿ ವೋಲ್ವೊ ಬಸ್‌ಗಳ ಸಂಚಾರವನ್ನು ಆರಂಭಿಸಿತ್ತು. ಈಗ NWKRTC ಒಟ್ಟು 7.2 ಕೋಟಿ ರೂ.ಗಳಲ್ಲಿ ಬಿಎಸ್6 ಮಾದರಿಯ ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಬಸ್ ಪೂರೈಕೆ ಮಾಡಲು ಟೆಂಡರ್ ಕರೆದಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಸೆಲ್ವಂ ಅಂಬಾರಿ ಉತ್ಸವ ಮಾದರಿಯ 4 ಬಸ್‌ಗಳ ಖರೀದಿಗೆ ಟೆಂಡರ್ ಕರೆದಿರುವುದನ್ನು ಖಚಿತಪಡಿಸಿದ್ದಾರೆ. ಇದರ ಜೊತೆಗೆ NWKRTCಗೆ 20 ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸಹ ಖರೀದಿ ಮಾಡಲಿದೆ. ಇದಕ್ಕೆ ಸುಮಾರು 9 ಕೋಟಿ ವೆಚ್ಚವಾಗಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಡಿಸೆಂಬರ್ 11 ಕೊನೆಯ ದಿನವಾಗಿದೆ.
ಕೆಎಸ್ಆರ್‌ಟಿಸಿಯು ಈಗಾಗಲೇ 'ಪಲ್ಲಕ್ಕಿ' ಹೆಸರಿನ ನೂತನ ಬಸ್ ಸೇವೆಗೆ ಚಾಲನೆ ನೀಡಿದೆ. ಒಟ್ಟು 40 ಈ ಮಾದರಿ ಬಸ್‌ಗಳು ರಾಜ್ಯಕ್ಕೆ ಆಗಮಿಸಲಿವೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈಗಿರುವ ಒಟ್ಟು ಬಸ್‌ಗಳು 4,866 ಮತ್ತು ಕಾರ್ಯಾಚರಣೆಯಲ್ಲಿರುವ ಬಸ್‌ಗಳು 4,579 ಆಗಿವೆ. ಈಗ ಹೊಸ ಮಾದರಿಯ 'ಪಲ್ಲಕ್ಕಿ' 10 ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 50 ವೋಲ್ವೊ ಸ್ಲೀಪರ್ ಮಾದರಿಯ ಅಂಬಾರಿ ಉತ್ಸವ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಿದೆ. ಮೊದಲ ಹಂತದಲ್ಲಿ 15 ಬಸ್ ಸೇವೆಗೆ 21/02/2023 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿದ್ದರು.
ವೋಲ್ಲೋ ಬಿಸ್-VI 9600ಎಸ್ ಮಾದರಿಯ ಮಲ್ಟಿ ಆಕ್ಸೆಲ್ 'ಅಂಬಾರಿ ಉತ್ಸವ' ಸ್ಲೀಪರ್ ಬಸ್‌ಗೆ ಹೆಸರನ್ನು ಜನರಿಂದಲೇ ಆಹ್ವಾನಿಸಿತ್ತು. ಜನರ ಸಲಹೆಗಳ ಆಧಾರದ ಮೇಲೆ 'ಅಂಬಾರಿ ಉತ್ಸವ' ಎಂಬ ಬ್ರಾಂಡ್ ಹೆಸರು ಮತ್ತು 'ಸಂಭ್ರಮದ ಪ್ರಯಾಣ' ಎಂಬ ಟ್ಯಾಗ್ ಲೈನ್ ಅಂತಿಮಗೊಳಿಸಿತ್ತು.
ಪ್ರಾಯೋಗಿಕವಾಗಿ ರಾಜ್ಯದಲ್ಲಿ ಬೆಂಗಳೂರು-ಕುಂದಾಪುರ ಮಾರ್ಗದಲ್ಲಿ ಮಾತ್ರ ಈ ಬಸ್ ಸೇವೆ ಆರಂಭಿಸಲಾಗಿತ್ತು. ಉಳಿದಂತೆ ಎಲ್ಲಾ 7 ಬಸ್‌ಗಳು ಬೆಂಗಳೂರು ಮತ್ತು ಅಂತರ ರಾಜ್ಯವ ವಿವಿಧ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಿದ್ದವು. ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಈ ಬಸ್ 15 ಮೀಟರ್ ಉದ್ದವಿದ್ದು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡಲು ಹಲವು ಸೌಲಭ್ಯಗಳನ್ನು ಒಳಗೊಂಡಿದೆ. 40 ಆಸನಗಳ ಬಸ್ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್- ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ.
KSRTC ವೋಲ್ಲೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಟ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನ. ವಾಹನದ ಮುಂಭಾಗವು ಏರೋಡೈನಾಮಿಕ್ ಮೇರುಕೃತಿಯ ಭಾಗವಾಗಿದೆ, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ ವಿನ್ಯಾಸ ರೂಪಿಸಲಾಗಿದೆ.












Click it and Unblock the Notifications