NWKRTC Tour Package; ದೇವಾಲಯ, ಪ್ರವಾಸಿ ತಾಣ ಒಂದು ದಿನದ ಪ್ರವಾಸ
ಮಡಿಕೇರಿ, ಆಗಸ್ಟ್ 11; ಬೆಳಗಾವಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರವಾಸ ಹೋಗುವವರಿಗೆ ಒಂದು ದಿನದ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ದೇವಾಲಯಗಳು ಮತ್ತು ಪ್ರವಾಸಿ ತಾಣಗಳನ್ನು ಈ ಪ್ಯಾಕೇಜ್ ಮೂಲಕ ಸಾಗಿ ವೀಕ್ಷಣೆ ಮಾಡಬಹುದಾಗಿದೆ.
ಬೆಳಗಾವಿ ನಗರದಿಂದ ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡುವವರಿಗೆ ಈ ಪ್ಯಾಕೇಜ್ ಸಹಾಯಕವಾಗಲಿದೆ. ವಿಶೇಷ ಸಾರಿಗೆಯ ಈ ಪ್ಯಾಕೇಜ್ ಅಡಿ ಓಡಿಸಲಾಗುತ್ತದೆ. ಈ ಪ್ಯಾಕೇಜ್ ಒಂದು ದಿನದ್ದಾಗಿದೆ. ಆಗಸ್ಟ್ 12ರಿಂದ ಈ ಪ್ಯಾಕೇಜ್‌ಗಳು ಆರಂಭವಾಗಲಿವೆ ಎಂದು ಪ್ರಕಟಣೆ ಹೇಳಿದೆ.

ಈ ಪ್ರವಾಸಿ ಪ್ಯಾಕೇಜ್ ಬಸ್‌ಗಳು ವಿಶೇಷ ಸಾರಿಗೆ ಆಗಿವೆ. ಆದ್ದರಿಂದ ಮಹಿಳೆಯರು ಸಹ ಟೂರ್ ಪ್ಯಾಕೇಜ್‌ಗಳಲ್ಲಿ ಪ್ರಯಾಣ ಬೆಳೆಸಿದರೆ 'ಶಕ್ತಿ' ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಪ್ಯಾಕೇಜ್‌ನ ದರವನ್ನು ಪಾವತಿ ಮಾಡಬೇಕಿದೆ.
ಒಂದು ದಿನದ ಪ್ರವಾಸಿ ಪ್ಯಾಕೇಜ್‌ನಲ್ಲಿ ಸಂಚಾರ ನಡೆಸಲು ಜನರು ಆನ್‌ಲೈನ್ ಮೂಲಕವೂ ಟಿಕೆಟ್ ಬುಕ್ ಮಾಡಬಹುದು. ಇದಕ್ಕಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವಿವರಗಳಿಗೆ 7760991612/ 7760991613/ 7760991635 ಸಂಖ್ಯೆಗೆ ಕರೆ ಮಾಡಬಹುದು.
ಪ್ರವಾಸಿ ಪ್ಯಾಕೇಜ್ ಸ್ಥಳ, ದರಗಳು
* ರಾಜಹಂಸಗಡ, ಅಸೋಗಾ ಹೊಳೆ, ನಂದಗಡ, ಕಕ್ಕೇರಿ. ಈ ಪ್ರವಾಸಿ ಪ್ಯಾಕೇಜ್ ಬಸ್ ಬೆಳಗಾವಿಯಿಂದ ಹೊರಟು ರಾಜಹಂಸಗಡ, ಅಸೋಗಾ ಹೊಳೆ ದಂಡೆ, ನಂಗದಡ ಸಂಗೊಳ್ಳಿ ರಾಯಣ್ಣ ಸಮಾಧಿ, ಹಲಸಿ ಭೂವರಾಹ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ, ಕಕ್ಕೇರಿ ಶ್ರೀ ಬಿಷ್ಟಾದೇವಿ ದೇವಸ್ಥಾನಕ್ಕೆ ತೆರಳಲಿದೆ. ವೇಗದೂತ ಸಾರಿಗೆಯನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ನಿರ್ಗಮನ 7.45, ಆಗಮನ 17.15. ಪ್ರಯಾಣ ದರ 230 ರೂ.ಗಳು. ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಪ್ರತಿ ಭಾನುವಾರ ಈ ಪ್ಯಾಕೇಜ್ ಲಭ್ಯ.
* ಗೊಡಚಿ, ಬಾದಾಮಿ, ಬನಶಂಕರಿ, ಶಿವಯೋಗಿ ಪ್ಯಾಕೇಜ್. ವೇಗದೂತ ಬಸ್ 8 ಗಂಟೆಗೆ ಬೆಳಗಾವಿಯಿಂದ ನಿರ್ಗಮನ, ಆಗಮನ 17.15. ಪ್ಯಾಕೇಜ್ ದರ 270 ರೂ.ಗಳು. ಬೆಳಗಾವಿ, ಶ್ರೀ ವೀರಭದ್ರಶ್ವರ ದೇವಾಲಯ ಗೊಡಚಿ, ಮೇಣ ಬಸದಿ, ಬಾದಾಮಿ ಗುಹೆಗಳು, ಬನಶಂಕರಿ ದೇವಸ್ಥಾನ, ಶ್ರೀ ಶಿವಯೋಗಿ ಮಂದಿರ ಮಾರ್ಗದಲ್ಲಿ ಪ್ರಯಾಣ. ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಪ್ರತಿ ಭಾನುವಾರ ಸಂಚಾರ.
* ಬೆಳಗಾವಿ, ರಾಜಹಂಸಗಡ, ಮಿಲಿಟರಿ ಮಹಾದೇವ ದೇವಾಲಯ, ಕಿ. ರಾ. ಚ. ಮೃಗಾಲಯ, ಹುಂಚೆವಾರಿ ಮಠ ಪ್ಯಾಕೇಜ್. ವೇಗದೂತ ಮಿಡಿ ಸಾರಿಗೆ ಬೆಳಗಾವಿಯಿಂದ 8.45ಕ್ಕೆ ನಿರ್ಗಮನ, ಆಗಮನ 17.45. ಪ್ರಯಾಣ ದರ 150 ರೂ.ಗಳು. ಬೆಳಗಾವಿ-ರಾಜಹಂಸಗಡ-ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ, ಕಿ. ರಾ. ಚ. ಮೃಗಾಲಯ, ಶ್ರೀ ರೇವಣ ಸಿದ್ದೇಶ್ವರ ಮಂದಿರ ಹುಂಚೆವಾರಿ ಮಠದ ಮಾರ್ಗದಲ್ಲಿ ಪ್ರಯಾಣ. ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಪ್ರತಿ ಭಾನುವಾರ ಬಸ್ ಸಂಚಾರ.
* ರಾಜಹಂಸಗಡ, ರಕ್ಕಸಕೊಪ್ಪ ಡ್ಯಾಂ, ಧಾಮಣಿ ಫಾಲ್ಸ್, ಶ್ರೀ ವೈಜನಾಥ ದೇವಸ್ಥಾನ ಮಹಿಪಾಲಗಡ ಪ್ಯಾಕೇಜ್. ಪ್ರಯಾಣ ದರ 200 ರೂ.ಗಳು. ವೇಗದೂತ ಸಾರಿಗೆ ಬೆಳಗಾವಿಯಿಂದ ನಿರ್ಗಮನ 7.45, ಆಗಮನ 17.30. ಈ ಟೂರ್ ಪ್ಯಾಕೇಜ್ ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಪ್ರತಿ ಭಾನುವಾರ ಲಭ್ಯ. ಬೆಳಗಾವಿಯಿಂದ ಹೊರಡುವ ಬಸ್ ರಾಜಹಂಸಗಡ, ಶ್ರೀ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ ಬೆಳಗುಂದಿ, ರಕ್ಕಸಕೊಪ್ಪ ಡ್ಯಾಮ್, ಧಾಮಣಿ ಫಾಲ್ಸ್/ ನೇಚರ್ ಕ್ಯಾಂಪ್, ಶ್ರೀ ವೈಜನಾಥ ದೇವಸ್ಥಾನ ಮಹಿಪಾಲಗಡ.












Click it and Unblock the Notifications