NWKRTC Tour Package; ಒಂದು ದಿನದ ಪ್ರವಾಸದ ವೇಳಾಪಟ್ಟಿ, ದರ
ಬೆಳಗಾವಿ, ಆಗಸ್ಟ್ 10; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಬೆಳಗಾವಿ ವಿಭಾಗ ಮಳೆಗಾಲದಲ್ಲಿ ಪ್ರವಾಸ ಹೋಗುವ ಜನರಿಗಾಗಿ ಒಂದು ದಿನದ ಹಲವಾರು ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡುವ ಪ್ಯಾಕೇಜ್ ಇದಾಗಿದೆ.
NWKRTC ಬೆಳಗಾವಿಯಿಂದ ಪ್ರೇಕ್ಷಣಿಯ/ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆಯ ಒಂದು ದಿನದ ಪ್ಯಾಕೇಜ್ ಘೋಷಿಸಿದೆ. ದಿನಾಂಕ 12/08/2023 ರಂದು ಈ ವಿಶೇಷ ಸಾರಿಗೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದೆ.

ಜನರು ಈ ಪ್ಯಾಕೇಜ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಹೇಳಿದೆ. ವಿವರಗಳಿಗಾಗಿ 7760991612/ 7760991613/ 7760991635 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಈ ಸಾರಿಗೆ ಬಸ್‌ಗಳು ವಿಶೇಷ ಪ್ಯಾಕೇಜ್ ಸಾರಿಗೆ ಆಗಿವೆ. ಆದ್ದರಿಂದ ಟೂರ್ ಪ್ಯಾಕೇಜ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ 'ಶಕ್ತಿ' ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.
ಒಂದು ದಿನದ ಪ್ಯಾಕೇಜ್ ವಿವರ; ಶ್ರೀ ಮಹಾಲಕ್ಷ್ಮೀ ದೇವಾಲಯ, ಕೊಲ್ಲಾಪುರ. ಶ್ರೀ ಕ್ಷೇತ್ರ ಕನ್ನೇರಿ ಮಠ ಕೊಲ್ಲಾಪುರ. ಈ ಬಸ್ ಬೆಳಗಾವಿ-ಶ್ರೀ ಮಹಾಲಕ್ಷ್ಮೀ ದೇವಾಲಯ, ಕೊಲ್ಲಾಪುರ-ಶ್ರೀ ಕ್ಷೇತ್ರ ಕನ್ನೇರಿ ಮಠ ಕೊಲ್ಲಾಪುರ ಮಾರ್ಗವಾಗಿ ಸಂಚಾರ ನಡೆಸಲಿದೆ.
ಮಲ್ಟಿ ಆಕ್ಸೆಲ್ ವೋಲ್ವೋ ಎಸಿ ಬಸ್‌ಗಳನ್ನು ಈ ಪ್ಯಾಕೇಜ್‌ಗೆ ಬಳಕೆ ಮಾಡಲಾಗುತ್ತಿದೆ. ಬೆಳಗಾವಿಯಿಂದ 8 ಗಂಟೆಗೆ ಹೊರಡುವ ಬಸ್, 19.30ಕ್ಕೆ ವಾಪಸ್ ಆಗಲಿದೆ. ಈ ಪ್ಯಾಕೇಜ್‌ಗೆ 600 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಪ್ರತಿ 2 ಮತ್ತು 4ನೇ ಶನಿವಾರ, ಭಾನುವಾರ ಪ್ಯಾಕೇಜ್ ಲಭ್ಯವಿದೆ.
350 ರೂ. ಪ್ಯಾಕೇಜ್; ಗಂಗಾಬಿಕಾ ಐಕ್ಯಸ್ಥಾನ, ಕಿತ್ತೂರು ಕೋಟೆ, ಸೋಗಲ, ನವಿಲು ತೀರ್ಥ ಡ್ಯಾಂ ಪ್ಯಾಕೇಜ್. ಬೆಳಗಾವಿ, ಗಂಗಾಬಿಕೆ ಐಕ್ಯಸ್ಥಳ, ಶ್ರೀ ಅಶ್ವಥ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ (ಎಂ. ಕೆ. ಹುಬ್ಬಳ್ಳಿ), ಕಿತ್ತೂರು ಕೋಟೆ, ಶ್ರೀ ಸೋಮೇಶ್ವರ ದೇವಸ್ಥಾನ ಸೊಗಲ, ನವಿಲು ತೀರ್ಥ ಡ್ಯಾಂ (ಮುನವಳ್ಳಿ) ಮಾರ್ಗದಲ್ಲಿ ಬಸ್ ಸಂಚಾರ.
ವೇಗದೂತ ಸಾರಿಗೆ ಬಸ್ ಈ ಪ್ಯಾಕೇಜ್‌ಗೆ ಬಳಕೆ. ನಿರ್ಗಮನ 7.45, ಆಗಮನ 19.15. ಒಂದು ದಿನದ ಟೂರ್‌ಗೆ ಪ್ರಯಾಣ ದರ 350 ರೂ.ಗಳು. ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ ಈ ಟೂರ್ ಪ್ಯಾಕೇಜ್ ಲಭ್ಯ.
360 ರೂ. ದರದ ಪ್ಯಾಕೇಜ್; ಕಕ್ಕೇರಿ (ಬಿಷ್ಟಾದೇವಿ ದೇವಾಲಯ), ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಇಕೋ ಪಾರ್ಕ್, ಕುಳಗಿ ಪ್ರಕೃತಿ ಶಿಬಿರ. ಬೆಳಗಾವಿ-ಕಕ್ಕೇರಿ (ಬಿಷ್ಟಾದೇವಿ ದೇವಾಲಯ), ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕುಳಗಿ ನೇಚರ್ ಪಾರ್ಕ್ ಮಾರ್ಗದಲ್ಲಿ ಬಸ್ ಸಂಚಾರ.
ವೇಗದೂತ ಸಾರಿಗೆಯನ್ನು ಈ ಒಂದು ದಿನದ ಟೂರ್ ಪ್ಯಾಕೇಜ್‌ಗೆ ಬಳಕೆ ಮಾಡಲಾಗುತ್ತದೆ. ನಿರ್ಗಮನ 7.30. ಆಗವನ 19.45. ಪ್ರಯಾಣ ದರ 360 ರೂ.ಗಳು. ಈ ಟೂರ್ ಪ್ಯಾಕೇಜ್ ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ ಲಭ್ಯವಿದೆ.












Click it and Unblock the Notifications