ತುಮಕೂರು-ಬೆಂಗಳೂರು ನಡುವೆ 2 ಮೆಮು ರೈಲು: ವೇಳಾಪಟ್ಟಿ, ನಿಲ್ದಾಣಗಳು
ಬೆಂಗಳೂರು, ಸೆಪ್ಟೆಂಬರ್ 21: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ನೀಡಿದ್ದ ಭರವಸೆಯಂತೆ ತುಮಕೂರು-ಬೆಂಗಳೂರು ನಡುವೆ ಮತ್ತೆ ಎರಡು ಮೆಮು ರೈಲು ಸೇವೆ ಆರಂಭವಾಗಲಿದೆ. ಸೆಪ್ಟೆಂಬರ್ 27ರಂದು ರೈಲು ಸಂಚಾರಕ್ಕೆ ಸಚಿವರು ಹಸಿರು ನಿಶಾನೆ ತೋರಿಸಲಿದ್ದಾರೆ. ರೈಲುಗಳ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಜನರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ.
ತುಮಕೂರು-ಬೆಂಗಳೂರು ನಡುವೆ ಎರಡು ಮೆಮು ರೈಲು, ಬಾಣಸವಾಡಿ-ತುಮಕೂರು ನಡುವೆ ವಾರಕ್ಕೊಮ್ಮೆ ಸಂಚಾರ ನಡೆಸುವ ಮೆಮು ರೈಲು ಸೇವೆಗೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರೈಲ್ವೆ ಬೋರ್ಡ್ ತುಮಕೂರು-ಯಶವಂತಪುರ-ತುಮಕೂರು ನಡುವೆ ರೈಲು ಸಂಖ್ಯೆ 06201/ 06202 ಮತ್ತು ರೈಲು ಸಂಖ್ಯೆ 06203/ 06204 ಯಶವಂತಪುರ-ಹೊಸೂರು-ಯಶವಂತಪುರ ಮತ್ತು ರೈಲು ಸಂಖ್ಯೆ 06205/ 06206 ಬಾಣಸವಾಡಿ-ತುಮಕೂರು-ಬಾಣಸವಾಡಿ ನಡುವೆ ಸಂಚಾರ ನಡೆಸಲು ಒಪ್ಪಿಗೆ ನೀಡಿದೆ.
ಉದ್ಘಾಟನಾ ವಿಶೇಷ ವೇಳಾಪಟ್ಟಿ: ಸೆಪ್ಟೆಂಬರ್ 27ರಂದು ಉದ್ಘಾಟನಾ ದಿನದ ಅಂಗವಾಗಿ ತುಮಕೂರು-ಯಶವಂತಪುರ ನಡುವೆ 8 ಬೋಗಿಯ ಮೆಮು ರೈಲು ತುಮಕೂರಿನಿಂದ 10 ಗಂಟೆಗೆ ಹೊರಡಲಿದೆ. ಈ ರೈಲು ಕ್ಯಾತಸಂದ್ರ ಹಾಲ್ಟ್ 10.7/ 10.8, ಹಿರೇಹಳ್ಳಿ 10.14/ 10.15, ಡಾಬಸ್‌ಪೇಟೆ 10.21/ 10.22, ನಿಡವಂದ 10.26/ 10.27, ಮುದ್ದಲಿಂಗನಹಳ್ಳಿ 10.31/10.32, ದೊಡ್ಡಬೆಲೆ 10.37/ 10.38, ಬೈರನಾಯಕನಹಳ್ಳಿ 10.43/ 10.44, ಗೊಲ್ಲಹಳ್ಳಿ 10.49/ 10.50, ಸೋಲದೇವನಹಳ್ಳಿ 10.56/ 10.57, ಚಿಕ್ಕಬಣಾವರ 11/ 11.01 ಮೂಲಕ ಯಶವಂತಪುರಕ್ಕೆ 11.20ಕ್ಕೆ ಆಗಮಿಸಲಿದೆ.
ಸಾಮಾನ್ಯ ದಿನದ ವೇಳಾಪಟ್ಟಿ: ರೈಲು ನಂಬರ್ 06201 ತುಮಕೂರು-ಯಶವಂತಪುರ ರೈಲು ಸಾಮಾನ್ಯ ದಿನಗಳಲ್ಲಿ ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಸಂಚಾರ ನಡೆಸಲಿದೆ. ತುಮಕೂರಿನಿಂದ ರೈಲು 8.45ಕ್ಕೆ ಹೊರಡಲಿದೆ. 10.25ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
ಮಾರ್ಗದ ನಡುವೆ ಕ್ಯಾತ್ಸಂದ್ರ ಹಾಲ್ಟ್ 8.51/ 8.52, ಕ್ಯಾತ್ಸಂದ್ರ ಗೂಡ್ಸ್ 8.54, ಹಿರೇಹಳ್ಳಿ 8.58/08.52, ಡಾಬಸ್‌ಪೇಟೆ 9.08/ 09.09, ನಿಡವಂದ 9.13/ 9.14, ಮುದ್ದಲಿಂನಹಳ್ಳಿ 9.18/ 9.20, ದೊಡ್ಡಬೆಲೆ 9.25/ 9.26, ಬೈರನಾಯಕನಹಳ್ಳಿ 9.31/ 9.32, ಗೊಲ್ಲಹಳ್ಳಿ 9.39/ 9.40, ಸೋಲದೇವನಹಳ್ಳಿ 9.47/ 9.48, ಚಿಕ್ಕಬಣಾವರ 9.54/ 9.55 ಆಗಮನ/ ನಿರ್ಗಮನ. ರೈಲು ಯಶವಂತಪುರಕ್ಕೆ 10.25ಕ್ಕೆ ಆಗಮಿಸಲಿದೆ.
ರೈಲು ನಂಬರ್ 06202. ಯಶವಂತಪು-ತುಮಕೂರು ರೈಲು 17.40ಕ್ಕೆ ಯಶವಂತಪುರದಿಂದ ಹೊರಡಲಿದೆ. ತುಮಕೂರು ನಿಲ್ದಾಣಕ್ಕೆ 19.05ಕ್ಕೆ ತಲುಪಲಿದೆ. ರೈಲು ಚಿಕ್ಕಬಣಾವರ 17.50/17.51, ಸೋಲದೇವನಹಳ್ಳಿ 17.53/ 17.54, ಗೊಲ್ಲಹಳ್ಳಿ 18/.01/ 18.02, ಬೈರನಾಯಕನಹಳ್ಳಿ 18.08/ 18.09, ದೊಡ್ಡಬಲೆ 18.15/ 18.16, ಮುದ್ದಲಿಂಗನಹಳ್ಳಿ 18.20/ 18.21, ನಿಲವಂದ 18.24/ 18.25, ದಾಬಸ್‌ಪೇಟೆ 18.29/ 18.30, ಕ್ಯಾತ್ಸಂದ್ರ ಗೂಡ್ಸ್ 18.51, ಕ್ಯಾತ್ಸಂದ್ರ ಹಾಲ್ಟ್ 18.45/ 18.46 ಆಗಮನ/ ನಿರ್ಗಮನ.
ಬೆಂಗಳೂರು-ತುಮಕೂರು ನಗರಗಳ ನಡುವೆ ಪ್ರತಿದಿನ ನೂರಾರು ಜನರು ಸಂಚಾರ ನಡೆಸುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡಲು ಹೆಚ್ಚುವರಿ ರೈಲು ಬೇಕು ಎಂದು ಸಂಸದ ವಿ. ಸೋಮಣ್ಣಗೆ ಮನವಿ ಮಾಡಲಾಗಿತ್ತು. ಈಗ ಇರುವ ರೈಲುಗಳ ಜೊತೆಗೆ ಉಭಯ ನಗರಗಳ ನಡುವೆ ಎರಡು ಹೆಚ್ಚುವರಿ ರೈಲು ಸಂಚಾರ ಈಗ ಆರಂಭವಾಗುತ್ತಿದೆ.












Click it and Unblock the Notifications