ಬೆಳಗಾವಿ: ಹುಬ್ಬಳ್ಳಿ, ಗೋವಾ, ಹೈದರಾಬಾದ್‌ಗೆ ಪ್ರತಿದಿನದ ವಿಮಾನ, ವೇಳಾಪಟ್ಟಿ

ಬೆಳಗಾವಿ, ಅಕ್ಟೋಬರ್ 27: ಬೆಳಗಾವಿಯ ವಿಮಾನ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದಿದೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಪ್ರತಿದಿನದ ವಿಮಾನ ಸೇವೆ ಆರಂಭವಾಗುತ್ತಿದೆ. ಈ ಹೊಸ ಮಾರ್ಗದ ವಿಮಾನ ಸೇವೆಯ ವೇಳಾಪಟ್ಟಿಯನ್ನು ಡಿಜಿಸಿಎ ತನ್ನ ಚಳಿಗಾಳದ ವೇಳಾಪಟ್ಟಿಯಲ್ಲಿಯೂ ಸಹ ಸೇರಿಸಿಕೊಂಡಿದೆ.

ಫ್ಲೈ-91 ಎಂಬ ವಿಮಾನಯಾನ ಸಂಸ್ಥೆ ಬೆಳಗಾವಿಯಿಂದ ಗೋವಾ, ಹುಬ್ಬಳ್ಳಿ ಮತ್ತು ಹೈದರಾಬಾದ್‌ಗೆ ಪ್ರತಿದಿನದ ವಿಮಾನ ಸೇವೆಯನ್ನು ಒದಗಿಸಲಿದೆ. ಬೆಳಗಾವಿಯಿಂದ ಹಲವು ವಿಮಾನಗಳು ರದ್ದಾಗುವ ಸಂದರ್ಭದಲ್ಲಿ ಹೊಸದಾಗಿ ವಿಮಾನ ಸೇವೆ ಆರಂಭವಾಗುತ್ತಿರುವುದು ಜನರಿಗೆ ಸಂತಸ ತಂದಿದೆ.

New Daily Flight Belagavi To Goa Hubballi And Hyderabad Schedule

ಬೆಳಗಾವಿ-ಹೈದರಾಬಾದ್, ಬೆಳಗಾವಿ-ಹುಬ್ಬಳ್ಳಿ, ಬೆಳಗಾವಿ-ಗೋವಾ ನಡುವೆ ಫ್ಲೈ-91 ಪ್ರತಿದಿನದ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ. ನವೆಂಬರ್ ತಿಂಗಳಿನಿಂದ ಈ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಫ್ಲೈ-91 ವಿಮಾನದ ವೇಳಾಪಟ್ಟಿಯ ಮಾಹಿತಿಯನ್ನು ಸಹ ಬಿಡುಗಡೆ ಮಾಡಿದೆ.

ವಿಮಾನದ ವೇಳಾಪಟ್ಟಿ: ಫ್ಲೈ-91 ಬೆಳಗಾವಿ-ಹೈದರಾಬಾದ್ ನಡುವೆ ಐಸಿ 1843 ಸಂಖ್ಯೆಯ ವಿಮಾನಗಳ ಕಾರ್ಯಾಚರಣೆ ನಡೆಸಲಿದೆ. ಈ ವಿಮಾನ ಹೈದರಾಬಾದ್‌ನಿಂದ 10.55ಕ್ಕೆ ಹೊರಟು, 11.45ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಈ ವಿಮಾನ ಪ್ರತಿದಿನ ಸಂಚಾರವನ್ನು ನಡೆಸಲಿದೆ. ಬೆಳಗಾವಿ-ಹೈದರಾಬಾದ್ ವಿಮಾನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.35ಕ್ಕೆ ಹೊರಡಲಿದೆ. ಹೈದರಾಬಾದ್‌ಗೆ 10.25ಕ್ಕೆ ತಲುಪಲಿದೆ. ಈ ವಿಮಾನ ಸಹ ಪ್ರತಿದಿನ ಸಂಚಾರ ನಡೆಸಲಿದೆ.

ಐಸಿ1 1842 ಸಂಖ್ಯೆಯ ವಿಮಾನವನ್ನು ಫ್ಲೈ-91 ಹುಬ್ಬಳ್ಳಿ-ಬೆಳಗಾವಿ ನಡುವೆ ಪ್ರತಿದಿನ ಓಡಿಸಲಿದೆ. ಈ ವಿಮಾನ ಹುಬ್ಬಳ್ಳಿಯನ್ನು ಬೆಳಗ್ಗೆ 7.30ಕ್ಕೆ ಬಿಟ್ಟು, 8 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. ಬೆಳಗಾವಿ-ಹುಬ್ಬಳ್ಳಿ ನಡುವೆ ಐಸಿ 1843 ವಿಮಾನ ಪ್ರತಿದಿನ ಸಂಚಾರ ನಡೆಸಲಿದೆ. ಬೆಳಗಾವಿಯಿಂದ ವಿಮಾನ ಮಧ್ಯಾಹ್ನ 12.15ಕ್ಕೆ ಹೊರಟು, ಹುಬ್ಬಳ್ಳಿಗೆ 12.45ಕ್ಕೆ ತಲುಪಲಿದೆ. ಐಸಿ 1845 ಸಂಖ್ಯೆಯ ವಿಮಾನ ಬೆಳಗಾವಿ-ಹುಬ್ಬಳ್ಳಿ ನಡುವೆ ಸಂಚಾರವನ್ನು ನಡೆಸಲಿದೆ. ಈ ವಿಮಾನ ಬೆಳಗಾವಿಗೆ 20:10ಕ್ಕೆ ಆಗಮಿಸಲಿದೆ.

ಬೆಳಗಾವಿ-ಗೋವಾ ನಡುವೆ ಫ್ಲೈ-91 ಐಸಿ 1845 ವಿಮಾನವನ್ನು ಹಾರಿಸಲಿದೆ. ಬೆಳಗಾವಿಯಿಂದ ವಿಮಾನ 20:40ಕ್ಕೆ ಹೊರಡಲಿದೆ, ಗೋವಾಕ್ಕೆ 21:15ಕ್ಕೆ ತಲುಪಲಿದೆ. ಐಸಿ1844 ಸಂಖ್ಯೆಯ ವಿಮಾನ ಬೆಳಗಾವಿಗೆ ಗೋವಾದಿಂದ 14.25ಕ್ಕೆ ಆಗಮಿಸಲಿದೆ.

ಕೆಲವು ದಿನಗಳ ಹಿಂದೆ ಇಂಡಿಗೋ ವಿಮಾನಯಾನ ಸಂಸ್ಥೆ ಬೆಳಗಾವಿ- ಬೆಂಗಳೂರು ನಡುವಿನ ಬೆಳಗ್ಗೆಯ ನೇರ ವಿಮಾನ ಸೇವೆಯನ್ನು ಅಕ್ಟೋಬರ್ 27ರಿಂದ ನಿಲ್ಲಿಸಲಾಗುತ್ತದೆ ಎಂದು ಹೇಳಿತ್ತು. ಅಲ್ಲದೇ ಬುಕ್ಕಿಂಗ್ ಅನ್ನು ರದ್ದುಗೊಳಿಸಿತ್ತು. ಈಗ ಈ ಮಾರ್ಗದಲ್ಲಿ ಬೆಳಗ್ಗೆ ಸಂಚಾರ ನಡೆಸುವ ಪ್ರಯಾಣಿಕರು ಬೇರೆ ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು.

ಸುಮಾರು ಎರಡು ವರ್ಷಗಳಿಂದ ಬೆಳಗಾವಿ-ಬೆಂಗಳೂರು ನಡುವೆ ಬೆಳಗ್ಗೆ ನೇರ ವಿಮಾನ ಸೇವೆಯನ್ನು ಇಂಡಿಗೋ ನೀಡುತ್ತಿತ್ತು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ವಿಮಾನಯಾನ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿಯ ಅನ್ವಯ ಈ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ.

ಈಗಾಗಲೇ ಬೆಳಗಾವಿ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ಜೋಧ್‌ಪುರ್, ಸೂರತ್, ಇಂಧೋರ್, ನಾಸಿಕ್ ನಡುವಿನ ವಿಮಾನ ಸೇವೆ ರದ್ದುಗೊಳಿಸಿದೆ. ಚಳಿಗಾಲದ ವೇಳಾಪಟ್ಟಿಯಂತೆ ಬೆಳಗಾವಿ-ಅಹಮದಾಬಾದ್ ವಿಮಾನ ಸಹ ರದ್ದಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ವಿಮಾನಗಳ ಸಂಖ್ಯೆ ಕಡಿಮೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+