ರಾಯಚೂರು-ನಾಂದೇಡ್ ರೈಲು ಆರಂಭ; ವೇಳಾಪಟ್ಟಿ
ರಾಯಚೂರು, ಅಕ್ಟೋಬರ್ 11: ತೆಲಂಗಾಣದಲ್ಲಿ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹಲವಾರು ರೈಲುಗಳ ಸೇವೆಗೆ ಚಾಲನೆ ನೀಡಿದರು. ಇದರಲ್ಲಿ ಒಂದು ರೈಲು ಕರ್ನಾಟಕದ ರಾಯಚೂರು ಮತ್ತು ತೆಲಂಗಾಣದ ನಾಂದೇಡ್ಗೆ ಸಂಚಾರ ನಡೆಸುತ್ತದೆ. ಈ ಮೂಲಕ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಅಕ್ಟೋಬರ್ 10ರಿಂದಲೇ ಈ ರೈಲು ಸೇವೆ ಆರಂಭವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ, ರೈಲ್ವೆ ಸಚಿವಾಲಯ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಆರಂಭಿಸಿದೆ.

ರೈಲು ಸಂಖ್ಯೆ 17663/17664 ತಾಂಡೂರ್ ಹಜೂರ್ ಸಾಹಿಬ-ನಾಂದೇಡ್ ಎಕ್ಸ್‌ಪ್ರೆಸ್ ಪ್ರತಿನಿತ್ಯದ ರೈಲನ್ನು ಪರಭಣಿ-ತಾಂಡೂರ್-ರಾಯಚೂರು ತನಕ ಸುಮಾರು 178 ಕಿ. ಮೀ. ವಿಸ್ತರಣೆ ಮಾಡಲಾಗಿತ್ತು. ಈಗ ರೈಲು ಸಂಚಾರ ಆರಂಭಿಸಿದೆ.
ರೈಲಿನ ವೇಳಾಪಟ್ಟಿ; ರೈಲು ಸಂಖ್ಯೆ 17663/ 17664 ತಾಂಡೂರ್ ಹಜೂರ್ ಸಾಹಿಬ-ನಾಂದೇಡ್ ಎಕ್ಸ್‌ಪ್ರೆಸ್ ರಾಯಚೂರು ತನಕ ವಿಸ್ತರಣೆಯಾಗಿದ್ದು, ಉದ್ಯಮಿಗಳಿಗೆ, ಪ್ರವಾಸಿಗರಿಗೆ, ಪ್ರತಿದಿನ ಸಂಚಾರ ನಡೆಸುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.
ವೇಳಾಪಟ್ಟಿಯ ಅನ್ವಯ ರೈಲು ಪರಭಣಿ, ನಾಂದೇಡ್, ಸೇಡಂ ಮಾರ್ಗವಾಗಿ ರಾಯಚೂರಿಗೆ 12.15ಕ್ಕೆ ಬರಲಿದೆ. ರಾಯಚೂರುರಿಂದ ಹೊರಟು ಯಾದಗಿರಿ- ಚಿತ್ತಾಪುರ-ಸೇಡಂ-ತಾಂಡೂರ್-ನಾಂದೇಡ್ ಮೂಲಕ ಪರಭಣಿಗೆ ಮರುದಿನ ಬೆಳಗ್ಗೆ 6.35ಕ್ಕೆ ತಲುಪುತ್ತದೆ.
ಕೇಂದ್ರ ಸಚಿವ ಕಿಶನ್ ರೆಡ್ಡಿ, ಹಡಪ್ಸರ್-ಹೈದರಾಬಾದ್-ಹಡಪ್ಸರ್ ಎಕ್ಸ್‌ಪ್ರೆಸ್.
ಕರ್ನೂಲ್ ನಗರಕ್ಕೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಜೈಪುರ-ಕಾಚಿಗುಡ-ಜೈಪುರ ಎಕ್ಸ್‌ಪ್ರೆಸ್, ಎಚ್‌ಎಸ್ ನಾಂದೇಡ್-ತಾಂಡೂರ್-ಪರ್ಭಾಣಿ ಎಕ್ಸ್‌ಪ್ರೆಸ್ ರಾಯಚೂರು ತನಕ ವಿಸ್ತರಣೆ, ದೈನಂದಿನ ಪ್ಯಾಸೆಂಜರ್ ರೈಲು ಕರೀಂನಗರ-ನಿಜಾಮಾಬಾದ್- ಕರೀಂನಗರ ಪ್ಯಾಸೆಂಜರ್ ರೈಲಿಗೆ ಸಹ ಚಾಲನೆ ನೀಡಿದರು.
ಡೆಮು ರೈಲು ಸಂಚಾರಕ್ಕೆ ಚಾಲನೆ; ರಾಯಚೂರು-ಕಾಚಿಗೂಡ ಡೆಮೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಕೃಷ್ಣ-ಮಹಿಬೂಬ ನಗರ ಮಾರ್ಗವಾಗಿ ತೆರಳುವ ಕಾಚಿಗೂಡ-ರಾಯಚೂರ-ಕಾಚಿಗೂಡ ಡೆಮೋ ರೈಲು ಸಂಚಾರಕ್ಕೆ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಮತ್ತು ಇಲಾಖೆಯ ಅಧಿಕಾರಿಗಳು ಚಾಲನೆ ಕೊಟ್ಟರು. ಪ್ರಯಾಣಿಕರು ಡೆಮೋ ರೈಲಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಹೈದರಾಬಾದ್ ಮತ್ತು ರಾಯಚೂರು ನಡುವೆ ಸಂಚಾರ ನಡೆಸುವ ಜನರಿಗೆ ರೈಲು ತುಂಬಾ ಅನುಕೂಲಕರವಾಗಿದೆ.












Click it and Unblock the Notifications