Namma metro: ನವೆಂಬರ್‌ 16ರಿಂದ ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಹೊಸ ಸೌಲಭ್ಯ, ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್‌, 11: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಮೆಟ್ರೋ ನಿಲ್ದಾಣದ ಒಳಗೆ ಪ್ರತಿನಿತ್ಯವೂ ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದ್ದು, ಇದರಿಂದ ಪ್ರಯಾಣಿಕರು ತುಂಬಾ ಕಿರಿಕಿರಿ ಅನುಭವಿಸುವಂತಾಗಿತ್ತು. ಆದ್ದರಿಂದ ಇದೀಗ ಟಿಕೆಟ್‌ ಕೌಂಟರ್‌ಗಳಲ್ಲಿ ಟೋಕನ್‌ ಖರೀದಿಸಲು ಸರತಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್‌ಸಿಎಲ್‌ ಇದೇ ನವೆಂಬರ್‌ 16ರಿಂದ ಹೊಸ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಸರತಿ ಸಾಲಿನಲ್ಲಿ ನಿಲ್ಲುವ ಬದಲು ಪ್ರಯಾಣಿಕರು ಮನೆ ಕಚೇರಿ ಹಾಗೂ ತಾವಿರುವ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಪಡೆಯಬುದು. ಇದರಿಂದ ಸಮಯವೂ ಉಳಿತಾಯವಾಗಲಿದೆ ಹಾಗೂ ಟೋಕನ್‌ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma metro: Mobile QR code group ticket facility from november 16, know details

ನಮ್ಮ ಮೆಟ್ರೋ ನವೆಂಬರ್‌ 16ರಿಂದಲೇ ಮೊಬೈಲ್‌ ಕ್ಯೂಆರ್‌ ಕೋಡ್‌ ಗ್ರೂಪ್‌ ಟಿಕೆಟ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಪ್ರಸ್ತುತ ಮೊಬೈಲ್‌ ಕ್ಯೂಆರ್‌ ಟಿಕೆಟ್‌ಗಳನ್ನು ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್‌ ನೀಡಲಾಗುತ್ತಿದೆ. ಗುಂಪು ಟಿಕೆಟ್‌ಗಳನ್ನೂ ಕ್ಯೂಆರ್‌ ಕೋಡ್‌ ಮೂಲಕ ನೀಡಬೇಕು ಎಂದು ಪ್ರಯಾಣಿಕರಿಂದ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆ ಮೊಬೈಲ್‌ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಜಾರಿಗೆ ತರಲಾಗಿದೆ. ಈ ಟಿಕೆಟ್‌ಗಳು ಟೋಕನ್‌ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಮುಂದೆ ಒಂದೇ ಕ್ಯೂಆರ್​ ಕೋಡ್‌ನಲ್ಲಿ 6 ಜನರು ಪ್ರಯಾಣ ಮಾಡಬಹುದಾಗಿದೆ. ಇದರಿಂದ ಟಿಕೆಟ್ ಕೌಂಟರ್ ಮುಂದೆ ನಿಲ್ಲುವ ಸಮಯ ಉಳಿತಾಯವಾಗಲಿದೆ. ಕುಟುಂಬ ಸಮೇತ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಸಹಾಯಕಾರಿ ಆಗಲಿದ್ದು, ಟೋಕನ್ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ.

ಪ್ರಯಾಣಿಕರ ಸಂಖ್ಯೆಯನ್ನು ಎನ್​​​​ಕ್ರಿಪ್ಟ್​ ಮಾಡಿದ ಬಳಿಕ ನಿಮಗೆ ಒಂದು ಕ್ಯೂಆರ್ ಟಿಕೆಟ್ ಸಿಗುತ್ತದೆ. ಇದೇ ಟಿಕೆಟ್​ ಅನ್ನು ಎಫ್​ಸಿ ಗೇಟ್​ನಲ್ಲಿ 6 ಬಾರಿ ಸ್ಕ್ಯಾನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಸ್ಕ್ಯಾನ್ ಮಾಡುವ ಸೌಲಭ್ಯವೂ ಇರಲಿದೆ. ಈ ಮೂಲಕ ಪ್ರಯಾಣಿಕರ ಬೇಡಿಕೆಗೆ ನಮ್ಮ ಮೆಟ್ರೋ ಸ್ಪಂದನೆ ನೀಡಿದೆ.

ಟಿಕೆಟ್‌ ಪಡೆಯುವುದೇಗೆ ಹಾಗೂ ಪ್ರಯೋಜನೆಗಳೇನು?

1. ನಿಮ್ಮ ಮೊಬೈಲ್ ಅಪ್ಲಿಕೇಶನ್ ನಮ್ಮ ಮೆಟ್ರೋ, ಪೇಟಿಯಂ, ವಾಟ್ಸಾಪ್ ಮತ್ತು ಯಾತ್ರಾ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಪಡೆಯಬಹುದು.

2. ಒಂದು ಬಾರಿ ಆರು ಜನರ ಗುಂಪು ಟಿಕೆಟ್ ಪಡೆದರೆ ಟೋಕನ್ ದರಕ್ಕಿಂತ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು.

3. ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಪ್ರಯಾಣಿಕರ ಸಂಖ್ಯೆ, ಎನ್‌ಕ್ರಿಪ್ಟ್ ಮಾಡಿದ ಒಂದು ಕ್ಯೂಆರ್ ಟಿಕೆಟ್ ಅನ್ನು ಸ್ವೀಕರಿಸುತ್ತಾರೆ.

4. ನಂತರ ಬಳಕೆಗಾಗಿ, ಈ ಕ್ಯೂಆರ್ ಟಿಕೆಟ್ ಅನ್ನು ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ಕಟ್ಟಿ ಎಫ್ ಸಿ ಗೇಟ್ ಗಳಲ್ಲಿ ಸ್ಕ್ಯಾನ್ ಮಾಡಬೇಕು.

5. ಇದರಿಂದಾಗಿ ಟಿಕೆಟ್‌ ಕೌಂಟರ್‌ಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.

6. ಪ್ರಯಾಣಿಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಮನೆ ಕಚೇರಿಯಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+