Mysuru to Belagavi: ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ ಬೆಳಗಾವಿಗೆ ವಿಸ್ತರಣೆ: ಈ ದಿನದಿಂದ ಓಡಾಟ

ಮೈಸೂರು-ಬೆಳಗಾವಿ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರ ಮನವಿಗೆ ಫಲ ಸಿಕ್ಕಿದೆ. ಮೈಸೂರು ಮತ್ತು ಧಾರವಾಡ ನಿಲ್ದಾಗಳ ನಡುವೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್‌ಪ್ರೆಸ್ (17301/02) ರೈಲುಗಳನ್ನು ಬೆಳಗಾವಿ ನಿಲ್ದಾಣದವರೆಗೆ ವಿಸ್ತರಿಸಿ ರೈಲ್ವೆ ಸಚಿವಾಲಯವು ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 26 ರಿಂದ ಮೈಸೂರಿನಿಂದ ಬೆಳಗಾವಿವರೆಗೆ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ ಮೈಸೂರು ಮತ್ತು ಬೆಳಗಾವಿ ನಡುವಿನ ಸಂಚಾರ ಮತ್ತಷ್ಟು ಸುಲಭವಾಗಲಿದೆ. ರಾಜ್ಯಸಭಾ ಸಂಸದ ಈರಣ್ಣ ಕರಡಿ ಅವರು ಈ ವಿಚಾರವನ್ನು ಮೊದಲೇ ತಿಳಿಸಿದ್ದರು, ಸೆಪ್ಟೆಂಬರ್ 19ರಂದು ಈ ಬಗ್ಗೆ ಅಧಿಕೃತ ಆದೇಶ ಬಂದಿದ್ದು, ರೈಲು ಸೇವೆಗೆ ಮುಹೂರ್ತ ನಿಗದಿಯಾಗಿದೆ.

mysuru-dharwad-daily-express

ಬದಲಾಗಿದ್ದ ವೇಳಾಪಟ್ಟಿ

ಇತ್ತೀಚೆಗೆ ಪ್ರಯಾಣಿಕರ ಬೇಡಿಕೆ, ವಿವಿಧ ಕಾರಣಗಳಿಗಾಗಿ ರೈಲು ಸಂಖ್ಯೆ 17302 ಧಾರವಾಡ-ಮೈಸೂರು ನಡುವಿನ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿತ್ತು. ಸೆಪ್ಟೆಂಬರ್ 26ರಿಂದಲೇ ಈ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.

ಈಗ ವೇಳಾಪಟ್ಟಿ ಬದಲಾವಣೆ ಜೊತೆಗೆ ಬೆಳಗಾವಿವರೆಗೆ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡಲಿದೆ.

ಮೈಸೂರು-ಬೆಳಗಾವಿ ರೈಲು ವೇಳಾಪಟ್ಟಿ

17301 ಸಂಖ್ಯೆಯ ರೈಲು ರಾತ್ರಿ 10.30ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಡಲಿದೆ. ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ, ಹುಬ್ಬಳ್ಳಿ, ಧಾರವಾಡ ತಲುಪಲಿದೆ. ಸದ್ಯ ಬೆಳಗ್ಗೆ 8 ಗಂಟೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಸೆಪ್ಟೆಂಬರ್ 26ರಿಂದ ಬೆಳಗ್ಗೆ 7.38ಕ್ಕೆ ಧಾರವಾಡ ರೈಲು ನಿಲ್ದಾಣಕ್ಕೆ ಬರಲಿದೆ. 7.40ಕ್ಕೆ ಧಾರವಾಡದಿಂದ ಬೆಳಗಾವಿಗೆ ಹೊರಡಲಿದೆ. ಬೆಳಗ್ಗೆ 10.45 ಗಂಟೆಗೆ ಬೆಳಗಾವಿ ರೈಲು ನಿಲ್ದಾಣ ತಲುಪಲಿದೆ.

ಬೆಳಗಾವಿ-ಮೈಸೂರು ವೇಳಾಪಟ್ಟಿ

17302 ಸಂಖ್ಯೆಯ ರೈಲು ರಾತ್ರಿ 8 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡಲಿದ್ದು ಮರುದಿನ ಬೆಳಗ್ಗೆ 7.10 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು-ಬೆಳಗಾವಿ ರೈಲು ಓಡಾಟದಿಂದ ಎರಡೂ ಜಿಲ್ಲೆಗಳ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಅಲ್ಲದೆ ಎರಡೂ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಕೂಡ ಭಾರಿ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+