ಮೇ 7ರಂದು ಮತದಾನ: ನೈಋತ್ಯ ರೈಲ್ವೆ ಓಡಿಸಲಿರುವ ವಿಶೇಷ ರೈಲುಗಳು

ಬೆಂಗಳೂರು, ಮೇ 03: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನಕ್ಕೆ ತೆರಳಲು ಜನರಿಗೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಬೆಂಗಳೂರು, ಮೈಸೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಅಲ್ಲದೇ ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ದಟ್ಟಣೆಯನ್ನು ತಪ್ಪಿಸಲು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಹೇಳಿದೆ.

May 7th Voting SWR Running Special Train List

ಈ ವಿಶೇಷ ರೈಲುಗಳು ಎಸ್ಎಂವಿಟಿ ಬೆಂಗಳೂರು-ವಿಜಯಪುರ, ಯಶವಂತಪುರ-ಬೀದರ್, ಯಶವಂತರಪುರ-ವಿಜಯನಗರ, ಮೈಸೂರು-ತಾಳಗುಪ್ಪ, ಬೆಳಗಾವಿ-ಯಶವಂತಪುರ, ಬೆಳಗಾವಿ-ಮೈಸೂರು, ಮೈಸೂರು-ಕಾರವಾರ, ಕಾರವಾರ-ಮೈಸೂರು ನಡುವೆ ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಮೇ 7ರ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ವಿಶೇಷ ರೈಲುಗಳ ವೇಳಾಪಟ್ಟಿ

* ರೈಲು ನಂಬರ್ 06231/ 06232 ವಿಶೇಷ ರೈಲು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ವಿಜಯಪುರ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ಮೇ 6ರಂದು ರೈಲು ನಂಬರ್ 06231 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ 19:00 ಗಂಟೆಗೆ ಹೊರಟು ಮರುದಿನ 10.30ಕ್ಕೆ ವಿಜಯಪುರವನ್ನು ತಲುಪಲಿದೆ. ರೈಲು ನಂಬರ್ 06232 ಮೇ 7ರಂದು ವಿಜಯಪುರದಿಂದ 19:00 ಗಂಟೆಗೆ ಹೊರಟು ಮರುದಿನ 11:15ಕ್ಕೆ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ರೈಲು ತುಮಕೂರು, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆ ಮೂಲಕ ಸಂಚಾರ ನಡೆಸಲಿದೆ.

* ರೈಲು ನಂಬರ್ 06227/ 06228 ರೈಲು ಯಶವಂತಪುರ-ಬೀದರ್-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಒಂದು ಟ್ರಿಪ್ ಮಾತ್ರ ಸಂಚಾರ ನಡೆಸುವ ರೈಲು ಯಲಹಂಕ, ರಾಯಚೂರು, ಕಲಬುರಗಿ ಮೂಲಕ ಸಂಚರಿಸಲಿದೆ ಎಂದು ಪ್ರಕಟಣೆ ಹೇಳಿದೆ. ರೈಲು ನಂಬರ್ 06227 ಮೇ 6ರಂದು ಯಶವಂತಪುರದಿಂದ 23:00 ಗಂಟೆಗೆ ಹೊರಟು, ಮರುದಿನ 12:00 ಗಂಟೆಗೆ ಬೀದರ್ ತಲುಪಲಿದೆ. ರೈಲು ನಂಬರ್ 06228 ರೈಲು ಮೇ 7ರಂದು ಬೀದರ್‌ನಿಂದ 14:10ಕ್ಕೆ ಹೊರಟು ಮರುದಿನ 4:15ಕ್ಕೆ ಯಶವಂತಪುರ ತಲುಪಲಿದೆ.

* ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು. ರೈಲು ನಂಬರ್ 07373 ರೈಲು ಮೇ 6ರಂದು ಮೈಸೂರಿನಿಂದ 21:30ಕ್ಕೆ ಹೊರಡಲಿದ್ದು, ತಾಳಗುಪ್ಪಗೆ ಮರುದಿನ 9:00 ಗಂಟೆಗೆ ತಲುಪಲಿದೆ. ರೈಲು ನಂಬರ್ 07374 ತಾಳಗುಪ್ಪದಿಂದ ಮೇ 7ರಂದು 18;30ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ರೈಲು ಕೆಎಸ್ಆರ್ ಬೆಂಗಳೂರು, ತುಮಕೂರು, ಬೀರೂರು, ಶಿವಮೊಗ್ಗ ನಗರ ಮೂಲಕ ಸಂಚಾರ ನಡೆಸಲಿದೆ.

* ಮೈಸೂರು-ಕಾರವಾರ ನಡುವೆ ರೈಲು ಸಂಖ್ಯೆ 06241 ಮೇ 3 ಮತ್ತು 6ರಂದು ಸಂಚಾರ ನಡೆಸಲಿದೆ. ಈ ರೈಲು ಮೈಸೂರಿನಿಂದ 20:15ಕ್ಕೆ ಹೊರಟು, ಕಾರವಾರವನ್ನು ಮರುದಿನ ಬೆಳಗ್ಗೆ 13:00 ಗಂಟೆಗೆ ತಲುಪಲಿದೆ. ರೈಲು ಕೆಎಸ್ಆರ್‌ ಬೆಂಗಳೂರು, ಹಾಸನ, ಸುಬ್ರಮಣ್ಯ ರೋಡ್, ಬೈಂದೂರು ಮೂಲಕ ಸಾಗಲಿದೆ. ರೈಲು ನಂಬರ್ 06242 ಮೇ 4 ಮತ್ತು 7ರಂದು ಕಾರವಾರದಿಂದ 22:00 ಗಂಟೆಗೆ ಹೊರಟು, ಮೈಸೂರನ್ನು ಮರುದಿನ 18:25ಕ್ಕೆ ತಲುಪಲಿದೆ. ರೈಲು ಬೈಂದೂರು, ಮಂಗಳೂರು ಜಂಕ್ಷನ್, ಸುಬ್ರಮಣ್ಯ ರೋಡ್, ಹಾಸನ ಮೂಲಕ ಸಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+