Ganesha Chaturthi 2024: ಮಂಗಳೂರು-ಅಹಮದಾಬಾದ್ ವಿಶೇಷ ರೈಲು, ವೇಳಾಪಟ್ಟಿ

ಮಂಗಳೂರು, ಜುಲೈ 27: ಗಣೇಶ ಚತುರ್ಥಿ ಅಂಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕೊಂಕಣಿ ರೈಲ್ವೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಓಡಿಸುತ್ತಿದೆ, ರೈಲುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 7 ಶನಿವಾರ ಇದೆ. ಭಾನವಾರವೂ ರಜೆ ಇರುವುದರಿಂದ ಸಾವಿರಾರು ಜನರು ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಾರೆ. ಆದ್ದರಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ.

Mangaluru Junction Ahmedabad Ganesha Chaturthi 2024 Special Train

ವಿಶೇಷ ರೈಲುಗಳು ವಿಶೇಷ ದರದಲ್ಲಿ ಸಂಚಾರ ನಡೆಸುತ್ತವೆ ಎಂದು ಕೊಂಕಣ ರೈಲ್ವೆ ಹೇಳಿದೆ. ಕರ್ನಾಟಕದ ಕರಾವಳಿಯ ಮಂಗಳೂರು ಜಂಕ್ಷನ್-ಅಹಮದಾಬಾದ್ ನಡುವೆ ಸಹ ವಾರದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ರೈಲು ವೇಳಾಪಟ್ಟಿ, ನಿಲ್ದಾಣದ ಮಾಹಿತಿ: ಕೊಂಕಣ ರೈಲ್ವೆ ಮಾಹಿತಿ ಪ್ರಕಾರ ರೈಲು ನಂಬರ್ 09424 ಮಂಗಳೂರು ಜಂಕ್ಷನ್-ಅಹಮದಾಬಾದ್ (ವಾರದ) ನಡುವಿನ ವಿಶೇಷ ದರದ, ವಿಶೇಷ ರೈಲು ಅಹಮದಾಬಾದ್‌ನಿಂದ ಪ್ರತಿ ಶುಕ್ರವಾರ 16:00 ಗಂಟೆಗೆ 6/9/2024, 13/9/2024, 20/9/2024ಕ್ಕೆ ಹೊರಡು, ಮರುದಿನ 19:45ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ರೈಲು ನಂಬರ್ 09423 ಮಂಗಳೂರು ಜಂಕ್ಷನ್-ಅಹಮದಾಬಾದ್ ನಡುವೆ (ವಾರದ) ವಿಶೇಷ ದರದಲ್ಲಿ ಸಂಚಾರ ನಡೆಸಲಿದೆ. ಮಂಗಳೂರು ಜಂಕ್ಷನ್‌ನಿಂದ ಶನಿವಾರ ರೈಲು 22:10 ಗಂಟೆಗೆ ಹೊರಟು 7/9/2024, 14/9/2024, 21/9/2024 ಮೂರನೇ ದಿನ 02:15ಕ್ಕೆ ಅಹಮದಾಬಾದ್ ತಲುಪಲಿದೆ.

ರೈಲು ಮಾರ್ಗದಲ್ಲಿ ನಾಡಿಯಾಡ್, ಆನಂದ್ ಜಂಕ್ಷನ್, ವಡೋದರಾ ಜಂಕ್ಷನ್, ಭರೂಚ್ ಜಂಕ್ಷನ್, ಸೂರತ್, ವಾಪಿ, ವಸಾಯಿ ರಸ್ತೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧೂದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಮಂಗಳೂರು ಜಂಕ್ಷನ್-ಅಹಮದಾಬಾದ್ ನಡುವಿನ ವಿಶೇಷ ರೈಲು 20 ಬೋಗಿಯನ್ನು ಒಳಗೊಂಡಿದೆ. 3 ಟೈರ್ ಎಸಿ-2, ಸ್ಲೀಪರ್ ಕೋಚ್ 12, ಸಾಮಾನ್ಯ ಬೋಗಿ 4, ಎಸ್‌ಎಲ್‌ಆರ್‌-2 ಬೋಗಿಯನ್ನು ಹೊಂದಿದೆ.

ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಇಲ್ಲವೇ NTES ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಮುಂಗಡ ಬುಕ್ಕಿಂಗ್‌ 28/07/2024 ರಿಂದ ಪಿಆರ್‌ಎಸ್‌ ಮತ್ತು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾಲು ಸಾಲು ರಜೆ ಇರುವುದಿರಂದ ವಿವಿಧ ನಗರಗಳಿಗೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದ್ದರಿಂದ ಹಲವು ರೈಲ್ವೇ ವಲಯಗಳು ಸಹ ವಿಶೇಷ ರೈಲುಗಳನ್ನು ಓಡಿಸುತ್ತವೆ. ರೈಲುಗಳ ವೇಳಾಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡಲಿವೆ. ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಸಂಚಾರ ನಡೆಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+