ಮಂಗಳೂರು, ಬೆಂಗಳೂರಿನ ಕೆಲವು ರೈಲು ರದ್ದು, ಪಟ್ಟಿ

ಬೆಂಗಳೂರು, ನವೆಂಬರ್ 21: ನೈಋತ್ಯ ರೈಲ್ವೆ ಪ್ಲಾಟ್‌ಫಾರಂ ಕಾಮಗಾರಿಯ ಹಿನ್ನಲೆಯಲ್ಲಿ ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸುವ ಕೆಲವು ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಿದೆ. ಕೆಲ ರೈಲು ಸೇವೆ ಭಾಗಶಃ ರದ್ದು ಮಾಡಿ ಆದೇಶಿಸಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಹೆಚ್ಚುವರಿ ಪ್ಲಾಟ್‌ಫಾರಂನಲ್ಲಿನ ಲೈನ್ ಮತ್ತು ಇತರ ಕಾಮಗಾರಿ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ನವೆಂಬರ್ 24 ರಿಂದ ವಿವಿಧ ರೈಲುಗಳ ಸಂಚಾರ ಸಂಪೂರ್ಣ/ ಭಾಗಶಃ ರದ್ದುಗೊಳಿಸಲಾಗಿದೆ.

mangaluru-bengaluru-train-cancel-news

ರೈಲು ಪ್ರಯಾಣ ಮಾಡುವ ಪ್ರಯಾಣಿಕರು ಈ ಮಾಹಿತಿಯ ಅನ್ವಯ ತಮ್ಮ ಪ್ರವಾಸದ ವೇಳಾಪಟ್ಟಿ ಯೋಜಿಸಬೇಕು. ಪ್ರಯಾಣಿಕರು ರೈಲ್ವೆ ಇಲಾಖೆ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಸಂಪೂರ್ಣ ರದ್ದುಗೊಂಡಿರುವ ರೈಲು

* ರೈಲು ನಂಬರ್ 06487/ 06486 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಎರಡೂ ಕಡೆಯಿಂದ ನವೆಂಬರ್ 24ರಂದು ಸಂಪೂರ್ಣ ರದ್ದುಗೊಳಿಸಲಾಗಿದೆ.

* ರೈಲು ನಂಬರ್ 06485/ 06484 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಎರಡೂ ಕಡೆ ನವೆಂಬರ್ 25ರಂದು ಸಂಪೂರ್ಣ ರದ್ದು.

ಭಾಗಶಃ ರೈಲು ಸಂಚಾರ ರದ್ದು

ಕನ್ಯಾಕುಮಾರಿ ಯಾರ್ಡ್‌ನಲ್ಲಿನ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿಯ ಕಾರಣ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

* ರೈಲು ನಂಬರ್ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲನ್ನು 25/11/2023 ರಿಂದ 1/12/2023 ಮತ್ತು 3/12/2023 ರಂದು ಭಾಗಶಃ ರದ್ದುಗೊಳಿಸಲಾಗಿದೆ. ಕನ್ಯಾಕುಮಾರಿ ಬದಲು ರೈಲು ನಾಗರಕೋಲಿಯಲ್ಲಿ ನಿಲ್ಲಲಿದೆ.

* ರೈಲು ನಂಬರ್ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್. ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲನ್ನು 2/12/2023ರಂದು ತಿರುವನಂತಪುರಂ ಸೆಂಟ್ರಲ್, ಕನ್ಯಾಕುಮಾರಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಕನ್ಯಾಕುಮಾರಿ ಬದಲು ತಿರುವನಂತಪುರದಲ್ಲಿ ನಿಲುಗಡೆಗೊಳ್ಳಲಿದೆ.

* ರೈಲು ನಂಬರ್ 16525 ಕನ್ಯಾಕುಮಾರಿ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್. 4/12/2023ರಂದು ಕನ್ಯಾಕುಮಾರಿ ಮತ್ತು ತಿರುವನಂತಪುರಂ ಸೆಂಟ್ರಲ್ ನಡುವೆ ಭಾಗಶಃ ರದ್ದು. ಕನ್ಯಾಕುಮಾರಿ ಬದಲು ತಿರುವನಂತಪುರಂ ಸೆಂಟ್ರಲ್‌ನಿಂದ ರೈಲು ಹೊರಡಲಿದೆ.

ತಾತ್ಕಾಲಿಕ ನಿಲುಗಡೆ

ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚಾರ ನಡೆಸುವುದರಿಂದ ವರ್ಕಲ ರೈಲು ನಿಲ್ದಾಣದಲ್ಲಿ 30/12/2023 ರಿಂದ 1/1/2023ರ ತನಕ ರೈಲುಗಲಿಗೆ ಒಂದು ನಿಮಿಷದ ನಿಲುಗಡೆ ನೀಡಿ ರೈಲ್ವೆ ಇಲಾಖೆ ಆದೇಶಿಸಿದೆ.

* ರೈಲು ನಂಬರ್ 16316 ಕೊಚಿವೇಲಿ-ಮೈಸೂರು ಎಕ್ಸ್‌ಪ್ರೆಸ್ 30/122023 ಮತ್ತು 1/1/2023ರಂದು ಸಂಜೆ 5.20/ 5.21ಕ್ಕೆ ವರ್ಕಲ ರೈಲು ನಿಲ್ದಾಣಕ್ಕೆ ಆಗಮಿಸಿ/ ನಿರ್ಗಮಿಸಲಿದೆ.

* ರೈಲು ನಂಬರ್ 16315 ಮೈಸೂರು-ಕೊಚಿವೇಲಿ ಎಕ್ಸ್‌ಪ್ರೆಸ್ ರೈಲು 29/12/2023 ರಿಂದ 31/12/2023ರ ತನಕ ವರ್ಕಲ ರೈಲು ನಿಲ್ದಾಣಕ್ಕೆ ಬೆಳಗ್ಗೆ 7.50/ 7.51 ಆಗಮಿಸಿ/ ನಿರ್ಗಮಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+