Get Updates
Get notified of breaking news, exclusive insights, and must-see stories!

ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯಲು ಲಕ್ಷದ್ವೀಪದಲ್ಲಿವೆ ಅದ್ಭುತ ತಾಣಗಳು

ಲಕ್ಷದ್ವೀಪದ ಸದ್ದು ಸ್ವಲ್ಪ ಜೋರಾಗಿಯೇ ಇದೆ. ಈ ದ್ವೀಪವು ಮಾಲ್ಡೀವ್ಸ್‌ಗಿಂತ ಅತ್ಯಂತ ಸುಂದರವಾದ ಅದ್ಭುತ ಪ್ರವಾಸಿ ತಾಣವಾಗಿದೆ. ಇದು ಕುಟುಂಬ, ಸ್ನೇಹಿತರು, ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯರು ಸೂಕ್ತವಾಗಿದೆ. ಇನ್ನು ಇಲ್ಲಿ ರೊಮ್ಯಾಂಟಿಕ್‌ ತಾಣಗಳಂತೆ, ಇಂತಹ ಹೋಟೆಲ್‌ಗಳು ಕೂಡ ಒಂದಕ್ಕಿಂತ ಒಂದು ಸುಂದರವಾಗಿವೆ. ಅದರಲ್ಲೂ ಇವುಗಳ ಪೈಕಿ ನಿಮ್ಮ ಮನಸ್ಸನ್ನು ಸ್ವರ್ಗದೆಡೆ ಕೊಂಡೊಯ್ಯುವ ಕೆಲವು ಅದ್ಭುತ ತಾಣಗಳನ್ನು ಕಾಣಬಹುದಾಗಿದೆ. ಹಾಗಾದರೆ ಈ ತಾಣಗಳು ಯಾವುವು ಎಂದು ಇಲ್ಲಿ ತಿಳಿಯಿರಿ.

ದೇಶದಾದ್ಯಂತ ಪ್ರಸ್ತುತ ಲಕ್ಷದ್ವೀಪದ ಬಗ್ಗೆಯೇ ಹೆಚ್ಚು ಸುದ್ದಿ ಆಗುತ್ತಿದೆ. ಇಲ್ಲಿನ ಪ್ರವಾಸ ಎಂತಹ ಅನುಭವ ನೀಡುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಿಗೆ ವಿವರಿಸಿದ್ದಾರೆ. ಅಲ್ಲದೆ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ಎಲ್ಲಾ ಭಾಷೆಯ ಬಹುತೇಕ ಸಿನಿ ತಾರೆಯರು ಸೇರಿದಂತೆ ಸಾಮಾನ್ಯ ಪ್ರವಾಸಿಗರು ಕೂಡ ಮಾಲ್ಡೀವ್ಸ್‌ಗಿಂತಳು ಲಕ್ಷದ್ವೀಪವೇ ಸುಂದರವಾದ ತಾಣವಾಗಿದೆ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

 Lakshadweep: Amazing tourist spots in Lakshadweep for trip with your spouse

ಈ ಪ್ರತಿಕ್ರಿಯೆಗಳು ಬಂದಾಕ್ಷಣ ಹೆಚ್ಚು ಪ್ರವಾಸಿಗರಯ ಮಾಲ್ಡೀವ್ಸ್‌ಗೆ ಹೋಗುವ ಬದಲು ಲಕ್ಷದ್ವೀಪದ ಕಡೆಗೆ ಪ್ರವಾಸ ಬೆಳೆಸಲು ಮುಂದಾಗಿದ್ದಾರೆ. ಲಕ್ಷದ್ವೀಪವು, ಭಾರತದ ಅತ್ಯಂತ ರೋಮ್ಯಾಂಟಿಕ್ ತಾಣಗಳಲ್ಲಿ ಒಂದಾಗಿದೆ. ಅರೇಬಿಯನ್ ಸಮುದ್ರದಲ್ಲಿರುವ ಈ ಉಷ್ಣವಲಯದ ಸ್ವರ್ಗವು ತನ್ನ ಪ್ರಾಚೀನ ಸೌಂದರ್ಯ ಮತ್ತು ಅನನ್ಯ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿ ಆಗಿದೆ.

ಇಲ್ಲಿರುವ ದ್ವೀಪಸಮೂಹವು ರೋಮಾಂಚಕ ಹವಳದ ಬಂಡೆಗಳು ಮತ್ತು ಬಿಳಿ ಮರಳಿನ ಕಡಲತೀರಗಳಿಂದ ಕೂಡಿದೆ. ಇನ್ನು ನಿಮ್ಮೆ ಸಂಗಾತಿಯೊಂದಿಗೆ ರೋಮ್ಯಾಂಟಿಕ್‌ ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ ಹಲವು ಸುಂರದ ರೆಸಾರ್ಟ್‌ಗಳಿದ್ದು, ಇವುಗಳು ಪ್ರವಾಸಿಗರನ್ನು ಸೆಳೆಯುತ್ತವೆ.

36 ದ್ವೀಪಗಳ ಸಮೂಹವನ್ನು ಹೊಂದಿರುವ ಲಕ್ಷದ್ವೀಪವು ಬಂಗಾರಂ, ಅಗತ್ತಿ, ಕದ್ಮತ್‌, ಮಿನಿಕಾಯ್, ಕವರಟ್ಟಿ ಮತ್ತು ಸುಹೇಲಿಯಂತಹ ಅನೇಕ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಕದ್ಮತ್ ಭಾರತದ ಅತ್ಯಂತ ಸುಂದರವಾದ ಡೈವಿಂಗ್ ಕೇಂದ್ರಗಳಲ್ಲಿ ಒಂದಾಗಿದೆ.

ಬಂಗಾರಮ್ ದ್ವೀಪದಲ್ಲಿರುವ ಈ ಬಂಗಾರಮ್ ಐಲ್ಯಾಂಡ್ ರೆಸಾರ್ಟ್ ಐಷಾರಾಮಿ ಕ್ಷಣಗಳನ್ನು ಕಳೆಯಲು ಸೂಕ್ತವಾಗಿದೆ. ಪ್ರಶಾಂತತೆಗೆ ಮತ್ತು ನೆಮ್ಮದಿಗೆ ಇದು ಹೆಸರುವಾಸಿ ಆಗಿದೆ. ಇಲ್ಲಿ ನೀರಿನ ಬಂಗಲೆಗಳು, ಬಿಳಿ ಮರಳಿನ ಕಡಲತೀರಗಳನ್ನು ನೋಡಬಹುದು ಮತ್ತು ಪ್ರಶಾಂತ ಮತ್ತು ಪ್ರಣಯದಿಂದ ಪಾರಾಗಲು ಬಯಸುವವರಲ್ಲಿ ಜನಪ್ರಿಯವಾಗಿದೆ. ಇದೀಗ ಈ ರೆಸಾರ್ಟ್ ತುಂಬಾ ಪ್ರಸಿದ್ಧಿ ಪಡೆದಿದೆ.

ಕದ್ಮತ್ ದ್ವೀಪದಲ್ಲಿರುವ ಈ ಕದ್ಮತ್ ಬೀಚ್ ರೆಸಾರ್ಟ್ ಹವಳದ ಬಂಡೆಗಳ ಸಮೀಪ ಮತ್ತು ಅತ್ಯುತ್ತಮ ಜಲ ಕ್ರೀಡಾ ಸೌಲಭ್ಯಗಳಿಗೆ ಹೆಸರುವಾಸಿ ಆಗಿದೆ. ರೆಸಾರ್ಟ್‌ನ ಆರಾಮದಾಯಕ ವಸತಿ ಆಯ್ಕೆಗಳು ದಂಪತಿಗಳಿಗೆ ಗೌಪ್ಯತೆ ಮತ್ತು ಶಾಂತ ವಾತಾವರಣವನ್ನು ಒದಗಿಸುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೋಲಿಸಿದರೆ ಲಕ್ಷದ್ವೀಪವು ಇನ್ನೂ ತುಂಬಾ ಆಫ್‌ಬೀಟ್ ಆಗಿದೆ. ಆದ್ದರಿಂದ ನೀವು ರೆಸಾರ್ಟ್‌ನಲ್ಲಿ ಮತ್ತು ಸುತ್ತಮುತ್ತಲಿನ ಪ್ರವಾಸಿಗರನ್ನು ಕಡಿಮೆ ನಿರೀಕ್ಷಿಸಬಹುದಾಗಿದ್ದು, ನಿಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಲು ಸೂಕ್ತವಾಗಿದೆ.

ಲಕ್ಷದ್ವೀಪ್‌ದಲ್ಲಿರುವ ಅತ್ಯಂತ ಸುಂದರ ಮತ್ತು ಮಧುಚಂದ್ರಕ್ಕೆ ಸೂಕ್ತವಾಗಿರುವ ಹೋಟೆಲ್‌ಗಳಲ್ಲಿ ವೈಟ್ ಪರ್ಲ್ ಬೀಚ್ ಹೋಟೆಲ್ ಕೂಡ ಒಂದಾಗಿದೆ. ದಂಪತಿಗಳು ಗೌಪ್ಯತೆ, ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳು, ಪ್ರಣಯ ಬೀಚ್ ವೀಕ್ಷಣೆಗಳು ಮತ್ತು ಕೆಲವು ಅತ್ಯುತ್ತಮ ಸೂರ್ಯಾಸ್ತದ ವೀಕ್ಷಣೆಗಳನ್ನು ನೋಡುವ ಅವಕಾಶಗಳನ್ನು ಪಡೆಯಬಹುದು. ಅಲ್ಲದೆ, ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್‌ಗಳಲ್ಲಿ ತೊಡಗಿಕೊಳ್ಳಲಿ ಅವಕಾಶ ಕಲ್ಪಿಸಲಾಗಿದೆ.

ಈ ಬೀಚ್-ಫ್ರಂಟ್ ಹೋಟೆಲ್ ಲಕ್ಷದ್ವೀಪ್‌ನ ಅತ್ಯುತ್ತಮ ಹೋಟೆಲ್‌ಗಳಲ್ಲಿ ಒಂದಾಗಿದೆ. ಈ ರೆಸಾರ್ಟ್‌ನ ಕೊಠಡಿಗಳು ವಿಶಾಲವಾದ ಮತ್ತು ಆರಾಮದಾಯಕವಾಗಿದ್ದು, ಕೆಲವು ಅತ್ಯುತ್ತಮ ಸಾಗರ-ವೀಕ್ಷಣೆಗಳನ್ನು ಇಲ್ಲಿ ಮಾಡಬಹುದಾಗಿದೆ. ಸಂಗಾತಿಯೊಂದಿಗೆ ಸಮುದ್ರತೀರದಲ್ಲಿ ರೋಮ್ಯಾಂಟಿಕ್ ಸಮಯವನ್ನು ಕಳೆಯಬಹುದು ಮತ್ತು ಸ್ನಾರ್ಕೆಲಿಂಗ್‌ಗೆ ಹೋಗಬಹುದಾಗಿದೆ.

ಆರಂಭವಾಗಲಿವೆ ಟಾಟಾದ ಎರಡು ರೆಸಾರ್ಟ್‌ಗಳು: ಲಕ್ಷದ್ವೀಪವು ಅತ್ಯಂತ ಸುಂದರ ಪ್ರವಾಸಿ ತಾಣವಾಗಿದೆ. ಅಲ್ಲದೆ ಇಲ್ಲಿನ ಸ್ವಚ್ಛತೆಗೆ ಎಂತಹವರೂ ಮನಸೋತುಬಿಡುತ್ತಾರೆ. ಪ್ರವಾಸಿಗರಿಗೆ ಇಲ್ಲಿದೆ ಯಾವುದೇ ಸೌಲಭ್ಯಗಳಿಗೆ ಕೊರತೆಯಿಲ್ಲ. ಹಾಗೆಯೇ ಇದೀಗ ಟಾಟಾ ಸಮೂಹಕ್ಕೆ ಸೇರಿದ ಎರಡು ರೆಸಾರ್ಟ್‌ಗಳು ಲಕ್ಷದ್ವೀಪದಲ್ಲಿ ತಲೆ ಎತ್ತಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ರೆಸಾರ್ಟ್‌ಗಳು ಯಾವಾಗ ಆರಂಭವಾಗಲಿದೆ ಹಾಗೂ ಇವುಗಳಿಗೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ಈ ರೆಸಾರ್ಟ್‌ಗಳು ತಲೆ ಎತ್ತಲಿವೆ. ಕಳೆದ ವರ್ಷದ ಜನವರಿಯಲ್ಲಿ, ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿಯು ಲಕ್ಷದ್ವೀಪದಲ್ಲಿ ಎರಡು ತಾಜ್-ಬ್ರಾಂಡ್ ರೆಸಾರ್ಟ್‌ ತೆರೆಯಲು ತೀರ್ಮಾನ ಮಾಡುವುದಾಗಿ ಘೋಷಣೆ ಮಾಡಿತ್ತು. ಇದನ್ನು 2026ರಲ್ಲಿ ಆರಂಭ ಮಾಡಲು ನಿರ್ಧಾರ ಮಾಡಲಾಗಿತ್ತು ಮತ್ತು ಐಎಚ್‌ಸಿಎಲ್‌ ಅಭಿವೃದ್ಧಿಪಡಿಸುತ್ತದೆ ಎಂದು ಕಂಪನಿ ಆ ವೇಳೆ ಮಾಹಿತಿ ನೀಡಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಬಳಿಯ ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡ ನಂತರ ಮತ್ತು ಅವುಗಳನ್ನು ಪ್ರವಾಸಿ ತಾಣವಾಗಿ ಪ್ರಚಾರಗೊಳಿಸಿದ ನಂತರ ಲಕ್ಷದ್ವೀಪ ಸುದ್ದಿ ಭಾರೀ ಸದ್ದು ಮಾಡಿದೆ ಹಾಗೂ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಬಹುತೇಕ ಭಾರತೀಯರು (ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಸೇರಿ ಇನ್ನಿತರರು) ಇದನ್ನು ಮಾಲ್ಡೀವ್ಸ್‌ಗೆ ಹೋಲಿಸಿದ್ದು, ಲಕ್ಷದ್ವೀಪದ ಕಡಲತೀರಗಳು ಮಾಲ್ಡೀವ್ಸ್‌ಗಿಂತ ಸುಂದರವಾಗಿ ಕಾಣುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದರ ಬೆನ್ನಲ್ಲೇ ಲಕ್ಷದ್ವೀಪದಲ್ಲಿನ ಮೂಲಸೌಕರ್ಯಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ದ್ವೀಪ ಸಮೂಹದಲ್ಲಿ ಪ್ರವಾಸಿಗರಿಗೆ ಉತ್ತಮ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ಹೊಂದಿಲ್ಲ ಎಂಬುದು ಚರ್ಚೆಗಳಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶವಾಗುದೆ. ಇದೀಗ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನು ಸುಹೇಲಿಯಲ್ಲಿ ತಲೆ ಎತ್ತಲಿರುವ ತಾಜ್‌ ರೆಸಾರ್ಟ್‌ನಲ್ಲಿ 60 ಬೀಚ್‌ ವಿಲ್ಲಾಗಳು ಮತ್ತು 50 ವಾಟರ್‌ ವಿಲ್ಲಾಗಳು ಸೇರಿದಂತೆ 110 ಕೊಠಡಿಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.

ದೊಡ್ಡ ಭೂ ಪ್ರದೇಶವನ್ನು ಹೊಂದಿರುವ ಕದ್ಮತ್‌ ದ್ವೀಪವು ಸಮುದ್ರ ಹುಲ್ಲು ಹಾಸುಗಳನ್ನು ಹೊಂದಿದೆ. ಇದು ಸಮುದ್ರ ಸಂರಕ್ಷಿತ ಪ್ರದೇಶವಾಗಿದ್ದು, ಇದನ್ನು ಕಾರ್ಡಮಮ್‌ ಐಲ್ಯಾಂಡ್‌ ಅಂತಳು ಕರೆಯುತ್ತಾರೆ. ಇಲ್ಲಿ 110 ಕೊಠಡಿಗಳನ್ನು ಒಳಗೊಂಡಿರುವ ತಾಜ್‌ ರೆಸಾರ್ಟ್‌ ಬರಲಿದೆ. ಇದರಲ್ಲಿ 75 ಬೀಚ್ ವಿಲ್ಲಾಗಳು ಮತ್ತು 35 ವಾಟರ್ ವಿಲ್ಲಾಗಳು ಇರಲಿವೆ.

ಲಕ್ಷದ್ವೀಪ ಅರಬ್ಬೀ ಸಮುದ್ರದಲ್ಲಿರುವ ದ್ವೀಪ ಸಮೂಹವಾಗಿದ್ದು, ಸುಂದರ ಕಡಲತೀರಗಳು, ಹವಳದ ದಿಬ್ಬಗಳು, ಖಾರಿಗಳೊಂದಿಗೆ ತನ್ನ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿ ಆಗಿದೆ. ಇದು ಸ್ಕೂಬಾ ಡೈವಿಂಗ್, ವಿಂಡ್‌ಸರ್ಫಿಂಗ್, ಸ್ನಾರ್ಕ್ಲಿಂಗ್, ಸರ್ಫಿಂಗ್, ವಾಟರ್ ಸ್ಕೀಯಿಂಗ್ ಮತ್ತು ವಿಹಾರ ನೌಕೆ ಸೇರಿದಂತೆ ಜಲ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+