ಬೆಂಗಳೂರು-ಶಿವಮೊಗ್ಗ ಎಲೆಕ್ಟ್ರಿಕ್ ಬಸ್; ದರ, ವೇಳಾಪಟ್ಟಿ

ಬೆಂಗಳೂರು, ಮೇ 29; ಮಲೆನಾಡು ಮತ್ತು ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸುವ ಜನರಿಗೆ ಸಿಹಿಸುದ್ದಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರು-ಶಿವಮೊಗ್ಗ ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿದೆ. ಬಸ್‌, ದರ ವೇಳಾಪಟ್ಟಿಯ ಮಾಹಿತಿ ಬಿಡುಗಡೆ ಮಾಡಿದೆ.

ಮೇ 27ರಿಂದ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್ ಬೆಂಗಳೂರು- ಶಿವಮೊಗ್ಗ ನಡುವೆ ಸಂಚಾರ ನಡೆಸುತ್ತಿದೆ. ಐಷಾರಾಮಿ ಹವಾನಿಯಂತ್ರಿತ ಬಸ್‌ಗಳಲ್ಲಿ ಜನರು ಸಂಚಾರ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಚಿಕ್ಕಮಗಳೂರು, ಹಾಸನಕ್ಕೆ ಸಹ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗಿದೆ.

KSRTC Electric Bus Between Bengaluru And Shivamogga Fare And Timings

ಶಿವಮೊಗ್ಗದ ಕೆಎಸ್ಆರ್‌ಟಿಸಿ ವಿಭಾಗ ಎಲೆಕ್ಟ್ರಿಕ್ ಬಸ್ ಸಂಚಾರದ ಕುರಿತು ಮಾಹಿತಿ ನೀಡಿದೆ. ಐಷಾರಾಮಿಯಾದ 10 ಇವಿ ಪವರ್ ಪ್ಲಸ್ ಬಸ್‌ಗಳನ್ನು ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಈಗ ಒಂದು ಬಸ್ ಸಂಚಾರ ಆರಂಭಿಸಲಾಗಿದ್ದು, ಉಳಿದ 9 ಬಸ್ ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ.

ಬಸ್ ದರ, ವೇಳಾಪಟ್ಟಿ; ಶಿವಮೊಗ್ಗ-ಬೆಂಗಳೂರು ನಡುವಿನ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ನ ದರವನ್ನು 600 ರೂ. ಎಂದು ನಿಗದಿ ಮಾಡಲಾಗಿದೆ. ಕೆಎಸ್ಆರ್‌ಟಿಸಿಯ ವೆಬ್‌ಸೈಟ್‌ನಲ್ಲಿ ಸಾಮಾನ್ಯ ಬಸ್‌ನ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲಿಯೇ ಎಲೆಕ್ಟ್ರಿಕ್ ಬಸ್ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದಾಗಿದೆ.

electric-bus

ಶಿವಮೊಗ್ಗ-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಬಸ್ ಪ್ರತಿದಿನ ಮಧ್ಯಾಹ್ನ 12ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದೆ, ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು ನಗರದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ನಗರ ತಲುಪಲಿದೆ.

ಕಾಫಿನಾಡಿಗೂ ಬಸ್; ಮೇ 19ರಿಂದ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ ಬೆಂಗಳೂರು-ಚಿಕ್ಕಮಗಳೂರು ನಡುವೆ ಸಂಚಾರ ಆರಂಭಿಸಿವೆ. ಬೆಂಗಳೂರು-ಚಿಕ್ಕಮಗಳೂರು ನಡುವಿನ 6 ವೊಲ್ವೋ ಬಸ್‌ಗಳ ಬದಲಾಗಿ ಇವಿ ಪವರ್ ಪ್ಲಸ್ ಹೆಸರಿನ ಎಲೆಕ್ಟ್ರಿಕ್ ಬಸ್‌ನ ಸಂಚಾರ ಆರಂಭಗೊಂಡಿದೆ.

ಈ ಬಸ್‌ ಸೇವೆಯಿಂದ ಚಿಕ್ಕಮಗಳೂರು-ಬೆಂಗಳೂರು ಮಾತ್ರವಲ್ಲ. ಹಾಸನ ಮತ್ತು ಬೇಲೂರು ಭಾಗದ ಪ್ರಯಾಣಿಕರಿಗೆ ಸಹ ಅನುಕೂಲವಾಗಿದೆ. ಬೆಂಗಳೂರಿನಿಂದ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಆರು ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ನಡೆಸುತ್ತವೆ.

ಒಮ್ಮೆ ಚಾರ್ಚ್‌ ಮಾಡಿದರೆ ಈ ಬಸ್‌ಗಳು 300 ಕಿ. ಮೀ. ತನಕ ಸಂಚಾರ ನಡೆಸುತ್ತವೆ. ಬಸ್‌ಗಳನ್ನು ಚಾರ್ಜ್‌ ಮಾಡಲು ಚಿಕ್ಕಮಗಳೂರು ಕೆಎಸ್ಆರ್‌ಟಿಸಿ ಬಸ್ ಡಿಪೋದಲ್ಲಿ ಎರಡು ಘಟಕ ನಿರ್ಮಾಣ ಮಾಡಲಾಗಿದೆ. ಒಂದು ಬಸ್ ಚಾರ್ಜ್‌ ಆಗಲು ಸುಮಾರು 2 ಗಂಟೆಗಳು ಬೇಕು.

2023ರಲ್ಲಿ ಕರ್ನಾಟಕ ಸರ್ಕಾರ ಕೆಎಸ್‌ಆರ್‌ಟಿಸಿಯ ಅಂತರ ನಗರ ಎಲೆಕ್ಟ್ರಿಕ್ ಬಸ್‌ ಸಂಚಾರ ಆರಂಭಿತ್ತು. 'ಮೇಕ್ ಇನ್ ಇಂಡಿಯಾ' ವಿದ್ಯುತ್ ಬಸ್ ಫೇಮ್‌-2 ಯೋಜನೆಯಡಿಯಲ್ಲಿ 50 ಅಂತರ ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಿತ್ತು.

ಓಲೆಕ್ಟ್ರಾ ಕಂಪನಿಯು ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಬಸ್‌ಗಳನ್ನು ನೀಡಿದೆ. ಇ-ವಾಹನದಿಂದ ಪ್ರಯಾಣಿಕರು ಹೊಗೆ ಹಾಗೂ ಶಬ್ದರಹಿತ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಈ ಬಸ್‌ಗಳು ದೃಢವಾದ ಕವಚ ಮತ್ತು ಅರಾಮದಾಯಕವಾದ ಪುಶ್ ಬ್ಯಾಕ್ ಆಸನಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ಬಸ್ ಇದಾಗಿದೆ.

ಈ ಎಲೆಕ್ಟ್ರಿಕ್ ಬಸ್‌ಗಳು 43 ಸೀಟುಗಳು ಮತ್ತು ನಿರ್ವಾಹಕರು + ಚಾಲಕರ ಆಸನ ಸಾಮರ್ಥ್ಯವನ್ನು ಹೊಂದಿದೆ. ಬಸ್ 12 ಮೀ. ಉದ್ದವಿದೆ. ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆಕ್ಷನ್‌ನಿಂದಾಗಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ಸಿಗಲಿದೆ. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮುಂತಾದ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+