KSRTC: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಆಟ ನೋಡಿ!
ಬೆಂಗಳೂರು, ಜೂನ್. 27: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ಪೊಲೀಸರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎಷ್ಟು ನಿಯಮಗಳನ್ನು ಜಾರಿಗೆ ತಂದರೂ ಕೂಡ ಇದು ಕಡಿಮೆಯಾಗುತ್ತಿಲ್ಲ.
ಖಾಸಗಿ ವಾಹನಗಳು, ಬೈಕ್‌ಗಳು ಹೆಚ್ಚಾಗಿ ಸಂಚಾರಿ ನಿಯಮ ಉಲ್ಲಂಘಟನೆ ಮಾಡುವುದನ್ನು ನೋಡುತ್ತೇವೆ. ಆದರೆ, ನಿಯಮಗಳನ್ನು ರೂಪಿಸುವ ಸರ್ಕಾರಿ ಸಂಸ್ಥೆಯ ವಾಹನಗಳೇ ಈ ನಿಯಮಗಳನ್ನು ಮುರಿದರೆ ಏನು ಮಾಡುವುದು..? ಇಂತಹದ್ದೆ ಘಟನೆ ಸದ್ಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಅಜಾಗರೂಕತೆಯ ವಾಹನ ಚಾಲನೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕೆ ಮಾಡಿದ್ದಾರೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಆಟ ನೋಡಿ!
ರಾಜ್ಯ ಪೊಲೀಸರು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎರಡು ಸಂಸ್ಥೆಗಳು ಹಲವು ಬಾರಿ ಸಂಚಾರ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕೂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮುಂದುವರಿದಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ರಾಂಗ್ ಸೈಡ್‌ನಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ. ಸರ್ಕಾರಿ ಬಸ್‌ನ ಈ ಆಟ ಬಸ್ ಪ್ರಯಾಣಿಕರಿಗೆ ಮತ್ತು ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡಿದೆ.
On the 22 nd June Saturday, During a busy day the KSRTC bus was driving in the opposite direction in Bangalore-Mysuru expressway.
— Shreyas Belur (@memesfollower22) June 26, 2024
He is in the fast lane couple of cars had to quickly change lanes Due to this Reckless bus Driver.@blrcitytraffic @NHAI_Official @MandyaPolice pic.twitter.com/dbHZDfVgK2
ಕಳೆದ ಶನಿವಾರದಂದು (ಜೂನ್ 22) ತೆಗೆದು ವಿಡಿಯೋವಿಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಬಸ್ ಜನನಿಬಿಡ ರಸ್ತೆಯ ಮೂಲಕ ರಾಂಗ್ ಸೈಡ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಶ್ರೇಯಸ್ ಬೇಲೂರ್ ಎಂಬ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
"ಜೂನ್ 22 ಶನಿವಾರದಂದು, ಬಿಡುವಿಲ್ಲದ ದಿನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು. ಅವರು ವೇಗದ ಲೇನ್‌ನಲ್ಲಿದ್ದಾರೆ .ಈ ಅಜಾಗರೂಕ ಬಸ್ ಡ್ರೈವರ್‌ನಿಂದಾಗಿ ಒಂದೆರಡು ಕಾರುಗಳು ತ್ವರಿತವಾಗಿ ಲೇನ್‌ಗಳನ್ನು ಬದಲಾಯಿಸಬೇಕಾಯಿತು" ಎಂದು ಟೀಕಿಸಿದ್ದಾರೆ.
ಇದೇ ವೇಳೆ ಕೆಎಸ್‌ಆರ್‌ಟಿಸಿ ವೀಡಿಯೋಗೆ ಪ್ರತಿಕ್ರಿಯಿಸಿದ್ದು, ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. "ತಮ್ಮ ಸಲಹೆಗಾಗಿ ಧನ್ಯವಾದಗಳು, ತಾವು ಕಳುಹಿಸಿರುವ ವೀಡೀಯೋದಲ್ಲಿ ವಾಹನ ಸಂಖ್ಯೆ ಸರಿಯಾಗಿ ಕಾಣುತ್ತಿಲ್ಲ ವಾಹನ ಸಂಖ್ಯೆ ಹಾಗೂ ಘಟನೆ ನಡೆದ ದಿನಾಂಕವನ್ನು ಒದಗಿಸಿದಲ್ಲಿ ಸಂಬಂದಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದೆ.
ಅನೇಕ ಬಳಕೆದಾರರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪದೇ ಪದೇ ಸಮಚಾರ ಉಲ್ಲಂಘನೆಗಳ ಬಗ್ಗೆ ದೂರು ನೀಡಿದ್ದಾರೆ. ಜೊತೆಗೆ ಇವರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಕೇಳಿಕೊಂಡಿದ್ದಾರೆ. "ರಾಂಗ್ ಸೈಡ್ ಡ್ರೈವಿಂಗ್, ಪ್ರಯಾಣಿಕರು ಮತ್ತು ರಸ್ತೆ ಬಳಕೆದಾರರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಚಾಲಕರ ಪರವಾನಗಿಯನ್ನು ರದ್ದುಗೊಳಿಸಬೇಕು" ಎಂದು ಬೇಡಿಕೆ ಇಟ್ಟಿದ್ದಾರೆ.
ಮೇ ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ಅತಿವೇಗ ಮತ್ತು ಅಪಘಾತಗಳನ್ನು ಪತ್ತೆ ಹಚ್ಚಲು 60 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಕ್ಯಾಮೆರಾಗಳು ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳನ್ನು ಗುರುತಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ಟ್ರಾಫಿಕ್ ಚಲನ್‌ಗಳನ್ನು ನೀಡುತ್ತದೆ.












Click it and Unblock the Notifications