KKRTC: ಸಂಡೂರು-ಚೆನ್ನೈ ನಾನ್‌ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ, ದರ

ಬಳ್ಳಾರಿ, ಆಗಸ್ಟ್ 27: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಳ್ಳಾರಿ ವಿಭಾಗ ಸಂಡೂರು-ಚೆನ್ನೈ ನಡುವೆ ನಾನ್ ಎಸಿ ಸ್ಲೀಪರ್ ಅಂತರ್‌ರಾಜ್ಯ ಬಸ್ ಸೇವೆಯನ್ನು ಆರಂಭಿಸಿದೆ. ಬಳ್ಳಾರಿ, ಅನಂತಪುರ, ಚಿತ್ತೂರು ಮಾರ್ಗದ ಮೂಲಕ ಬಸ್ ಸಂಚಾರ ನಡೆಸಲಿದ್ದು, ಪ್ರಯಾಣಿಕರು ಐಷಾರಾಮಿ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಂಡೂರು-ಚೆನ್ನೈ ಅಂತರರಾಜ್ಯ ಬಸ್ ವೇಳಾಪಟ್ಟಿ, ದರಗಳನ್ನು ಪ್ರಕಟಿಸಿದೆ. www.ksrtc.in ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಜನರು ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ಮಾಹಿತಿ ತಿಳಿಸಿದೆ.

KKRTC Sanduru Chennai Non Ac Sleeper Bus Schedule And Fare

ಸಂಡೂರು-ಚೆನ್ನೈ ನಡುವಿನ ನಾನ್ ಎಸಿ ಸ್ಲೀಪರ್ ಬಸ್ ದೋಣಿಮಲೈ, ವಿದ್ಯಾನಗರ, ಕುಡಿತಿನಿ, ಬಳ್ಳಾರಿ, ಅನಂತಪುರ, ಚಿತ್ತೂರು, ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಅಂತರ್‌ ರಾಜ್ಯ ಸಾರಿಗೆ ಸೇವೆ 23/8/2024ರಿಂದಲೇ ಆರಂಭವಾಗಿದೆ.

ಬಸ್ ವೇಳಾಪಟ್ಟಿ, ಮಾರ್ಗ, ದರ: ಚೆನ್ನೈ-ಸಂಡೂರು ಮಾರ್ಗದ ಬಸ್ ಚೆನ್ನೈ ಬಿಡುವ ವೇಳೆ ಸಂಜೆ 6.30 ಮತ್ತು ಚೆನ್ನೈ ತಲುಪುವ ವೇಳೆ ಬೆಳಗ್ಗೆ 6.30. ಈ ಬಸ್‌ ಸಂಡೂರು ಸಂಜೆ 5 ಗಂಟೆ, ವಿದ್ಯಾನಗರ ಸಂಜೆ 5.55, ತೋರಣಗಲ್ ಸಂಜೆ 6.15, ಕುಡಿತಿನಿ ಸಂಜೆ 6.45, ಬಳ್ಳಾರಿ ಸಂಜೆ 7.30ಕ್ಕೆ ಬಿಡಲಿದೆ.

ಚೆನ್ನೈ-ಸಂಡೂರು ಬಸ್ ಬಳ್ಳಾರಿಗೆ ಬೆಳಗ್ಗೆ 5.45, ಕುಡಿತಿನಿ 6.25, ತೋರಣಗಲ್ 6.55, ವಿದ್ಯಾನಗರ 7.15, ದೋಣಿಮಲೈ 7.45 ಮತ್ತು ಸಂಡೂರು 8 ಗಂಟೆಗೆ ಆಗಮಿಸಲಿದೆ.

ಈ ಬಸ್‌ಗೆ ಸಂಡೂರಿನಿಂದ 1150 ರೂ., ದೋಣಿಮಲೈನಿಂದ 1145 ರೂ., ವಿದ್ಯಾನಗರದಿಂದ 1095 ರೂ., ತೋರಣಗಲ್‌ 1091 ರೂ., ಕುಡಿತಿನಿ 1086 ರೂ., ಬಳ್ಳಾರಿಯಿಂದ 1070 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಸಂಡೂರು-ಹೈದರಾಬಾದ್ ನಡುವೆ ಎಸಿ ಸ್ಲೀಪರ್ ಬಸ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ಸಂಡೂರು ಘಟಕದಿಂದ ಸಂಡೂರು-ಹೈದರಾಬಾದ್‌ (ವಯಾ ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗದಲ್ಲಿ) ಪ್ರತಿಷ್ಠಿತ ಎಸಿ ಸ್ಲೀಪರ್ ನೂತನ ಬಸ್ ಸೇವೆಯನ್ನು ಆರಂಭಿಸಿದೆ.

ಈ ಬಸ್ ಸಂಡೂರಿನಿಂದ ರಾತ್ರಿ 7ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗವಾಗಿ) ಹೈದರಾಬಾದ್‌ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಪ್ರಯಾಣ ದರ ಸಂಡೂರಿನಿಂದ ರೂ. 1,290 ಹಾಗೂ ಬಳ್ಳಾರಿಯಿಂದ ರೂ.1,120 ನಿಗದಿ ಮಾಡಲಾಗಿದೆ.

ಹೈದರಾಬಾದ್‌ನಿಂದ ಬಸ್ ರಾತ್ರಿ 9.46ಕ್ಕೆ ಹೊರಟು, ಬಳ್ಳಾರಿಗೆ 6.15ಕ್ಕೆ ಆಗಮಿಸಲಿದೆ. (ಪ್ರಯಾಣ ದರ ರೂ.1,120) ಹಾಗೂ ಸಂಡೂರಿಗೆ ಬೆಳಗ್ಗೆ 8ಕ್ಕೆ ಆಗಮಿಸಲಿದೆ. ಪ್ರಯಾಣ ದರ ರೂ.1,290 ಎಂದು ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ಗೆ ಲಾಗ್-ಇನ್ ಆಗಬಹುದು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಲವು ಮಾರ್ಗದಲ್ಲಿ ನಾನ್ ಎಸಿ, ಎಸಿ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ ಆಗಮಿಸುವ ಮತ್ತು ಅಂತರರಾಜ್ಯ ಬಸ್‌ ಸೇವೆಗಳು ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+