ಸಂಡೂರು-ಹೈದರಾಬಾದ್ ಎಸಿ ಸ್ಲೀಪರ್‌ ಬಸ್; ವೇಳಾಪಟ್ಟಿ, ದರ

ಬಳ್ಳಾರಿ, ಅಕ್ಟೋಬರ್ 04; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗದ ಸಂಡೂರು ಘಟಕ ನೂತನ ಬಸ್‌ ಸೇವೆ ಆರಂಭಿಸಿದೆ. ಬಳ್ಳಾರಿಯ ಸಂಡೂರಿನಿಂದ ಹೈದರಾಬಾದ್‌ಗೆ ಎಸಿ ಸ್ಲೀಪರ್‌ ಬಸ್‌ಗಳು ಸಂಚಾರ ನಡೆಸಲಿವೆ.

ಸಂಡೂರು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಡೂರು- ಹೈದರಾಬಾದ್ ವಯಾ ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗದಲ್ಲಿ ಸಂಚಾರ ನಡೆಸಲಿದೆ.

KKRTC Sandur Hyderabad AC Sleeper Bus Service Fare And Schedule

ಈ ಬಸ್ ಸೇವೆ ಅಕ್ಟೋಬರ್ 4ರಿಂದ ಸಂಚಾರ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭಿಸಲಾಗಿದೆ. www.ksrtc.in ವೆಬ್‌ಸೈಟ್‌ಗೆ ಲಾಗ್ ಇನ್ ಆಗುವ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ದರ, ವೇಳಾಪಟ್ಟಿ: ಸಂಡೂರಿನಿಂದ ರಾತ್ರಿ 7ಕ್ಕೆ ಹೊರಡುವ ಎಸಿ ಸ್ಲೀಪರ್‌ ಬಸ್ ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಲಿದೆ. (ಆಲೂರು, ಕರ್ನೂಲ್ ಮಾರ್ಗವಾಗಿ) ಹೈದ್ರಬಾದ್‍ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಈ ಬಸ್‌ನಲ್ಲಿ ಪ್ರಯಾಣ ದರವು ಸಂಡೂರಿನಿಂದ ರೂ. 1,290 ಹಾಗೂ ಬಳ್ಳಾರಿಯಿಂದ ರೂ. 1,120 ಇರಲಿದೆ.

ಈ ಬಸ್ ಹೈದರಾಬಾದ್‌ನಿಂದ ರಾತ್ರಿ 9.46ಕ್ಕೆ ಹೊರಟು, ಬಳ್ಳಾರಿಗೆ 6.15ಕ್ಕೆ ಆಗಮಿಸಲಿದೆ. ಪ್ರಯಾಣ ದರ ರೂ.1,120. ಆಗಿದೆ. ಈ ಬಸ್ ಸಂಡೂರಿಗೆ ಬೆಳಗ್ಗೆ 8ಕ್ಕೆ ಆಗಮಿಸಲಿದೆ. (ಪ್ರಯಾಣ ದರ ರೂ. 1,290) ನಿಗದಿ ಮಾಡಲಾಗಿದೆ.

ಪ್ರಯಾಣಿಕರು ಐಷಾರಾಮಿ ಎಸಿ ಸ್ಲೀಪರ್ ನೂತನ ಬಸ್ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಹೊಸ ಹೊಸ ಬಸ್‌ಗಳು; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಳೆದ ತಿಂಗಳು ಸಹ ಹೊಸ ಬಸ್‌ ಸೇವೆಗಳನ್ನು ಆರಂಭಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಂಸ್ಥೆಯ 'ಅಮೋಘವರ್ಷ' ಹೆಸರಿನ ಐಷಾರಾಮಿ ಹವಾನಿಯಂತ್ರಣ ಸಹಿತ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳಿಗೆ ಚಾಲನೆ ನೀಡಿದ್ದರು.

ಕೆಕೆಆರ್‌ಟಿಸಿ ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ 'ಕವಿರಾಜ ಮಾರ್ಗ' ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಬಸ್‌ ಸೇವೆಯನ್ನು ಆರಂಭಿಸಿದೆ. 'ಅಮೋಘವರ್ಷ' ಬ್ರಾಂಡ್‌ನಲ್ಲಿ 36 (ನಾನ್ ಎಸಿ) ಸ್ಲೀಪರ್ ಹಾಗೂ 4 (ಎಸಿ) ಸ್ಲೀಪರ್ ಬಸ್‍ ಸೇವೆ ಆರಂಭಿಸಲಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಕೆಕೆಆರ್‌ಟಿಸಿ 'ಕಲ್ಯಾಣ ರಥ' ಹೆಸರಿನ ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಬೆಂಗಳೂರು-ಸಿಂಧನೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಈ ಐಷಾರಾಮಿ ಬಸ್‌ಗಳು ಸಂಚಾರ ನಡೆಸುತ್ತಿವೆ.

'ಕಲ್ಯಾಣ ರಥ' ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳನ್ನು ಹೊಂದಿದೆ. 350 ಬಿ.ಎಸ್-6 ಇಂಜಿನ್ ಇದ್ದು, ಬಸ್ಸಿಗೆ ವಿಶಿಷ್ಟ ಸಸ್ಪೆಕ್ಷನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ ಮುಂತಾದ ಐಷಾರಾಮಿ ಸೌಲಭ್ಯಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+