Bengaluru to Dubai Miracle Garden Trip: ಪ್ರಪಂಚದ ಅತಿ ದೊಡ್ಡ ಹೂವಿನ ತೋಟ: ನೀವು ನೋಡಬೇಕಾ? ಹೀಗೆ ಮಾಡಿ..
ಮೂರು ದಿನ ಫ್ರೀ ಇದಿರಾ? ಹಾಗಾದರೆ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ಭೇಟಿ ನೀಡಲೇಬೇಕಾದ ಸ್ಥಳದ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಅದು ಯಾವುದು ಅಂತ ಬೇಗ ಹೇಳಿ ಅಂದ್ರಾ..? ಅದುವೇ ಪ್ರಪಂಚದ ಅತಿ ದೊಡ್ಡ ಹೂವಿನ ತೋಟ.
ಪ್ರಪಂಚದಲ್ಲೇ ಅತೀ ದೊಡ್ಡ ಹೂವಿನ ತೋಟ ದುಬೈನಲ್ಲಿ ಇದೆ. ಇದಕ್ಕೆ ಮಿರಾಕಲ್ ಗಾರ್ಡನ್ (Miracle Garden) ಎಂದು ಹೆಸರು. ದುಬೈನಲ್ಲಿ ಬುರ್ಜ್ ಖಲೀಫಾ ಎಷ್ಟು ಫೇಮಸ್ಸೋ ಅದೇ ತರ ಈ ಮಿರಾಕಲ್ ಗಾರ್ಡ್‌ನ್ ಕೂಡ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ 150 ಮಿಲಿಯನ್‌ಗಿಂತ ಹೆಚ್ಚು ಹೂವುಗಳು. 120ಕ್ಕಿಂತ ಹೆಚ್ಚು ಗಿಡ ಹಾಗೂ ಬಳ್ಳಿಗಳು ಇವೆ. ಇದರ ಒಳಗೆ ಹೋದರೆ ವಾಪಸ್ಸ ಬರಲು ಮನಸ್ಸೇ ಆಗುವುದಿಲ್ಲ.

ಯಾಕೆಂದರೆ ಪ್ರತೀ ವರ್ಷ ಕೂಡ ಹೊಸ ಹೊಸ ಶೈಲಿಯಲ್ಲಿ ಪಿರಾಮಿಡ್ಸ್, ಹೂಗಳಲ್ಲೇ ನವಿಲು, ಡೆಡ್ಡಿಬೇರ್, ಆನೆ, ಬಾರ್ಬಿ ಹೀಗೆ ತರ ತರ ಪ್ಯಾಟರ್ನ್ ಅನ್ನು ಇಲ್ಲಿ ಕ್ರೀಯೇಟ್ ಮಾಡಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡ್ತಾರೆ.
ಅಂದಹಾಗೆ ವರ್ಷದಲ್ಲಿ ಆರು ತಿಂಗಳು ಮಾತ್ರ ಈ ಮಿರಾಕಲ್ ಗಾರ್ಡನ್ ತೆರೆದಿರುತ್ತದೆ. ಅಕ್ಟೋಬರ್‌ನಿಂದ ಮಾರ್ಚ್ ವರೆಗೆ ಮಾತ್ರ ಇದನ್ನು ತೆರೆಯಲಾಗುತ್ತದೆ. ಬೇಸಿಗೆಯಲ್ಲಿ ಇದನ್ನು ಮುಚ್ಚಲಾಗುತ್ತದೆ. ಹೀಗಾಗಿ ಇದನ್ನ ನೋಡಬೇಕು ಅಂದುಕೊಂಡಿದ್ದರೆ ಇದೇ ಸಮಯದಲ್ಲಿ ನೀವು ನಿಮ್ಮ ಪ್ರವಾಸವನ್ನು ಪ್ಲ್ಯಾನ್ ಮಾಡಬೇಕು. ಮುಂಚಿತವಾಗಿ ವಿಮಾನ ಬುಕ್ ಮಾಡಿದರೆ ನಿಮ್ಮ ಪ್ರಯಾಣ ದರ ಕೂಡ ಕಡಿಮೆಯಾಗುತ್ತದೆ. ಅಲ್ಲದೆ ಇದೇ ವೇಳೆ ನೀವು ಬುರ್ಜ್ ಖಲೀಫಾ ಕೂಡ ನೋಡಬಹುದು.

ಇದು 72,000 ಚದರ ಮೀಟರ್ಗಳಷ್ಟು ವಿಸ್ತಾರವಾದ ಉದ್ಯಾನವನವಾಗಿದೆ. ದುಬೈ ಲ್ಯಾಂಡ್ ಜಿಲ್ಲೆಯಲ್ಲಿರುವ ಈ ಗ್ರ್ಯಾಂಡ್ ಪಾರ್ಕ್ ಅನ್ನು ವೃತ್ತಾಕಾರದ ಯೋಜನೆಯಲ್ಲಿ ಮಾಡಲಾಗಿದೆ. ಹೀಗಾಗಿ ಪ್ರತಿ ತಿರುವಿನಲ್ಲಿಯೂ ಹಚ್ಚ ಹಸಿರಿನ ನೋಟಗಳು ಮತ್ತು ಹೂಗಳನ್ನು ಕಾಣಬಹುದು.
2013ರಲ್ಲಿ ಪ್ರೇಮಿಗಳ ದಿನದಂದು (ಫೆಬ್ರವರಿ 14) ಈ ಮಿರಾಕಲ್ ಗಾರ್ಡನ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಆಗ ಇದಕ್ಕೆ 92 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇದು ವರ್ಡ್ಸ್ ಲಾರ್ಜೆಸ್ಟ್ ಫ್ಲವರ್ ಗಾರ್ಡನ್ (World's Largest Flower Garden) ಎಂದು ಫೇಮಸ್ ಆಗಿದೆ. ಮಿರಾಕಲ್ ಗಾರ್ಡನ್‌ಗೆ ಈಗಾಗಲೇ ಮೂರು ಗಿನ್ನಿಸ್ ಅವಾರ್ಡ್ ಬಂದಿವೆ. ಇದರ ಎಂಟ್ರಿ ಫೀಸ್ 55 ದಿರಿಮ್ಸ್ ಇದೆ. ಅಂದರೆ ಭಾರತದ ರೂಪಾಯಿ ಪ್ರಕಾರ 1300 ರೂಪಾಯಿ.
ತೋಟದ ನಿರ್ವಹಣೆ ಹೇಗೆ?
ದಿನಕ್ಕೆ ಸರಾಸರಿ 757,082 ಲೀಟರ್ ನೀರು ಈ ತೋಟಕ್ಕೆ ಅವಶ್ಯಕತೆ ಇದೆ. ಹನಿ ನೀರಾವರಿ ವಿಧಾನದ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರು-ಬಳಕೆ ಮಾಡುವ ಮೂಲಕ ಹೂವುಗಳನ್ನು ನಿರ್ವಹಿಸಲಾಗುತ್ತದೆ.

ದುಬೈ ಮಿರಾಕಲ್ ಗಾರ್ಡನ್‌ನ ಅಧಿಕಾರಿಗಳ ಪ್ರಕಾರ, ದುಬೈ ಪುರಸಭೆಯು ನಗರದ ಕೊಳಚೆ ನೀರನ್ನು ರೀಸೈಕಲ್ ಮಾಡಿ ಅದನ್ನು ನೇರವಾಗಿ ಉದ್ಯಾನಕ್ಕೆ ಕಳುಹಿಸುತ್ತದೆ. ಉದ್ಯಾನವು ಮತ್ತೆ ನೀರನ್ನು ಪುನಃ ಶೋಧಿಸಿ ಉದ್ಯಾನದಲ್ಲಿ ಅದರ ಬಳಕೆಗಾಗಿ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತದೆ. ಉದ್ಯಾನವನ್ನು ರಾತ್ರಿ ಮುಚ್ಚಿದ ನಂತರ ಮಾತ್ರ ನೀರು ಹಾಕಲಾಗುತ್ತದೆ.
ದುಬೈ ಬಟರ್‌ಫ್ಲೈ ಗಾರ್ಡನ್
ದುಬೈ ಮಿರಾಕಲ್ ಗಾರ್ಡನ್ ನಲ್ಲಿ 2015 ರಲ್ಲಿ ಬಟರ್‌ಫ್ಲೈ ಗಾರ್ಡನ್ ಅನ್ನು ತೆರೆಯಲಾಗಿದೆ. ಇದು ವಿಶ್ವದ ಅತಿದೊಡ್ಡ ಮತ್ತು ಪ್ರದೇಶದ ಮೊದಲ ಒಳಾಂಗಣ ಚಿಟ್ಟೆ ಉದ್ಯಾನವನವಾನವಾಗಿದೆ. ಇಲ್ಲಿ 26 ಜಾತಿಗಳ 15,000 ಚಿಟ್ಟೆಗಳು ಇವೆ.
ಮಿರಾಕಲ್ ಗಾರ್ಡನ್ ತಲುಪುವುದು ಹೇಗೆ?
ದುಬೈಗೆ ದೆಹಲಿ, ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣ ಮಾಡಬೇಕು. ಬೆಂಗಳೂರಿನಿಂದ ದುಬೈಗೆ 4ಗಂಟೆ 15 ನಿಮಿಷ ಪ್ರಯಾಣದ ಸಮಯ ತೆಗೆದುಕೊಳ್ಳುತ್ತದೆ.
ದುಬೈಗೆ ಹೋದರೆ ವಿಮಾನ ನಿಲ್ದಾಣದಿಂದ ಮಿರಾಕಲ್ ಗಾರ್ಡನ್ ಬಸ್, ಖಾಸಗಿ ವಾಹನ ಅಥವಾ ಮೆಟ್ರೋ ಮೂಲಕವೂ ತೆರಳಬಹುದು. ದುಬೈನ ಬಸ್ ನೆಟ್‌ವರ್ಕ್ ದಿನಕ್ಕೆ 21 ಗಂಟೆಗಳ ಕಾಲ, 4 AM ನಿಂದ 1 AM ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸೇವೆಯನ್ನು ಸುಲಭವಾಗಿ ಪಡೆಯಬಹುದು.












Click it and Unblock the Notifications