IRCTC Tour Package:ನೀವು ಈಜಿಪ್ಟ್‌ನ ಪ್ರಕೃತಿ ಸೌಂದರ್ಯವನ್ನು ಸವಿಯಬೇಕೆ?, ಪ್ಯಾಕೇಜ್‌ನ ದರಗಳನ್ನು ಪರಿಶೀಲಿಸಿ
ಐಆರ್‌ಸಿಟಿಸಿಯು ಈಜಿಪ್ಟ್ ಪ್ರವಾಸ ಬೆಳೆಸುವವರಿಗೆ ಉತ್ತಮ ಪ್ಯಾಕೇಜ್‌ವೊಂದನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಗಮನಿಸಿ.
ನವದೆಹಲಿ, ಮಾರ್ಚ್, 09: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಾರಂಭಿಸುತ್ತಲೇ ಇದೆ. ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುವ ಮೂಲಕ ಪ್ರವಾಸೋದ್ಯವನ್ನು ಉತ್ತೇಜಿಸುತ್ತಾ ಬಂದಿದೆ. ಇದೀಗ ಈಜಿಪ್ಟ್ ಪ್ರವಾಸ ಬೆಳೆಸುವವರಿಗೆ ಉತ್ತಮ ಪ್ಯಾಕೇಜ್‌ವೊಂದನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಜಿಪ್ಟ್‌ಗೆ ಭೇಟಿ ನೀಡುವವರಿಗೆ ಇದು ಉತ್ತಮ ಅವಕಾಶವಾಗಿದೆ. ಇದು 10 ರಾತ್ರಿಗಳು ಮತ್ತು 11 ದಿನಗಳ ಪ್ರವಾಸವಾಗಿದೆ. ಮಾರ್ಚ್ 28ರಿಂದ ಈ ಪ್ರವಾಸ ಆರಂಭವಾಗಲಿದೆ. ಕೋಲ್ಕತ್ತಾದಿಂದ-ಮುಂಬೈಗೆ ವಿಮಾನದಲ್ಲಿ ಹೋಗಬಹುದಾಗಿದೆ. ಮತ್ತು ಅಲ್ಲಿಂದ ಪ್ರಯಾಣಿಕರನ್ನು ಈಜಿಪ್ಟ್ ರಾಜಧಾನಿ ಕೈರೋಗೆ ಕರೆದೊಯ್ಯಲಾಗುತ್ತದೆ.
ಮಾರ್ಚ್ 29ರಂದು ಕೈರೋವನ್ನು ತಲುಪಿದ ನಂತರ ಅಲ್ಲಿನ ಮಾರ್ಗದರ್ಶಿ ಪ್ರವಾಸಿಗರನ್ನು ಭೇಟಿಯಾಗಲಿದ್ದಾರೆ. ನಂತರ ಅವರನ್ನು ಹೋಟೆಲ್‌ಗೆ ಕರೆದೊಯ್ಯುತ್ತಾರೆ. ರಾತ್ರಿಯ ಊಟಕ್ಕೆ ಹೋಟೆಲ್‌ಗೆ ಹಿಂದಿರುಗುವ ಮೊದಲು ಪಿರಮಿಡ್‌ಗಳಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ನೋಡಬಹುದಾಗಿದೆ. ಮರುದಿನ ಉಪಹಾರದ ನಂತರ ಪ್ರಯಾಣಿಕರು ಈಜಿಫ್ಟ್‌ನ ಅಲೆಕ್ಸಾಂಡ್ರಿಯಾಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೊಬಗನ್ನು ಸವಿಯಬಹುದಾಗಿದೆ.

ಪ್ರವಾಸಿ ತಾಣಗಳ ವಿವರ ಇಲ್ಲಿದೆ
ಇದರಲ್ಲಿ ಪಿಲ್ಲರ್ಸ್ ಆಫ್ ಪೊಂಪೈ, ಅಲೆಕ್ಸಾಂಡ್ರಿಯಾದ ಲೈಬ್ರರಿ ಮತ್ತು ಅಲ್ ಮೊರ್ಸಿ ಅಬುಲ್ ಅಬ್ಬಾಸ್ ಮಸೀದಿಯನ್ನು ಸಹ ವೀಕ್ಷಣೆ ಮಾಡಬಹುದಾಗಿದೆ. ನಂತರ ಪ್ರವಾಸಿಗರು ಕೈರೋಗೆ ಹಿಂದಿರುಗಿ ಉಪಹಾರವನ್ನು ಸವಿಯಲು ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 31ರಂದು ಉಪಹಾರದ ನಂತರ ಪ್ರವಾಸಿಗರು ಮಾರ್ಗದರ್ಶಿಯೊಂದಿಗೆ ಈಜಿಪ್ಟ್‌ನ ಮ್ಯೂಸಿಯಂ ಮತ್ತು ಖಾನ್ ಎಲ್ ಖಲೀಲಿ ಬಜಾರ್ ಅನ್ನು ನೋಡಬಹುದಾಗಿದೆ.

ಈ ಪ್ಯಾಕೇಜ್‌ನಲ್ಲಿ ಊಟದ ವ್ಯವಸ್ಥೆ ಇರಲಿದೆ
ಹಾಗೆಯೇ ಖುಫು, ಖಫ್ರೆ ಮತ್ತು ಮೆನ್ಕೌರ್ ಪಿರಮಿಡ್‌ಗಳನ್ನು ಕೂಡ ವೀಕ್ಷಣೆ ಮಾಡಬಹುದಾಗಿದೆ. ನಂತರ ಸಂಜೆ ಆಸ್ವಾನ್‌ಗೆ ರೈಲಿನ ಮುಖಾಂತರ ಪ್ರವಾಸ ಕೈಗೊಳ್ಳಬಹುದಾಗಿದೆ. ರಾತ್ರಿ ರೈಲು ಪ್ರಯಾಣದ ನಂತರ, ಪ್ರವಾಸಿಗರನ್ನು ಏಪ್ರಿಲ್ 1 ರಂದು ಅಸ್ವಾನ್‌ಗೆ ಕರೆತರಲಾಗುತ್ತದೆ. ಅಲ್ಲಿ ಅವರು ಫಿಲೇ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ಮೂರು ದಿನಗಳ ಕಾಲ ನೈಲ್ ನದಿಯಲ್ಲಿ ವಿಹಾರ ಮಾಡಬಹುದಾಗಿದೆ. ಇಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.

ಯಾರಿಗೆ ಎಷ್ಟು ವೆಚ್ಚ ತಗಲುತ್ತದೆ?
ಇನ್ನು ಏಪ್ರಿಲ್ 2 ರಿಂದ 5ರವರೆಗೆ ಪ್ರವಾಸಿಗರು ಈಜಿಪ್ಟ್‌ನ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ನಂತರ ಏಪ್ರಿಲ್ 6 ರಂದು ವಿಮಾನ ನಿಲ್ದಾಣದಿಂದ ಹಿಂತಿರುಗಲಾಗುತ್ತದೆ. ಹಾಗಾದರೆ ಯಾರಿಗೆ ಎಷ್ಟು ವೆಚ್ಚ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಒಬ್ಬರಿಗೆ 2,01,100 ರೂಪಾಯಿ ವೆಚ್ಚ ಆಗಲಿದ್ದು, ಇಬ್ಬರು ಪ್ರಯಾಣ ಮಾಡಲು ಬಯಸಿದರೆ 1,75,000 ರೂಪಾಯಿ ಪಾವತಿಸಬೇಕಾಗುತ್ತದೆ.
ಮೂವರಿಗೆ 1,72,600 ರೂಪಾಯಿ ವೆಚ್ಚವಾಗುತ್ತದೆ. ಹಾಗೆಯೇ ಮಕ್ಕಳಿಗೆ 1,34,000 ರೂಪಾಯಿ ಪಾವತಿಸಬೇಕಾಗುತ್ತದೆ.

ಪ್ಯಾಕೇಜ್ ಬುಕ್ಕಿಂಗ್ ಮಾಡುವ ವಿಧಾನಗಳು
ಈ ಪ್ರವಾಸ ಪ್ಯಾಕೇಜ್ ಅನ್ನು ಬುಕಿಂಗ್ ಮಾಡುವ ಮುನ್ನ ಎರಡು ಡೋಸ್ ವ್ಯಾಕ್ಸಿನೇಷನ್ ಆಗಿರುವ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ. ಎಲ್ಲಾ COVID-19 ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಐಆರ್‌ಸಿಟಿಸಿ ಸೂಚನೆ ನೀಡಿದೆ. ಈ ಪ್ಯಾಕೇಜ್ ಅನ್ನು ಬುಕ್ ಮಾಡಲು ಬಯಸುವವರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ 8595904074, 8595904072, 8595938067, 8595904079ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.












Click it and Unblock the Notifications