IRCTC tour Package: ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗಬೇಕೆ?, ಇಲ್ಲಿದೆ ನೋಡಿ ಪ್ಯಾಕೇಜ್‌ನ ವಿವರ

ಹಿಮಾಚಲ ಪ್ರದೇಶಕ್ಕೆ ಪ್ರವಾಸ ಬೆಳೆಸುವವರಿಗೆ ಐಆರ್‌ಸಿಟಿಸಿ ಉತ್ತಮ ಪ್ರವಾಸ ಪ್ಯಾಕೇಜ್‌ವೊಂದನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ ದರ ಎಷ್ಟು, ಯಾವೆಲ್ಲ ಸೌಲಭ್ಯಗಳಿವೆ ಇರಲಿವೆ ಎಂದು ಇಲ್ಲಿ ತಿಳಿಯಿರಿ.

ನವದೆಹಲಿ, ಮಾರ್ಚ್‌, 01: ಹಿಮಾಚಲ ಪ್ರದೇಶಕ್ಕೆ ಹೋಗುವವರಿಗೆ ಐಆರ್‌ಸಿಟಿಸಿ ಉತ್ತಮ ಪ್ರವಾಸ ಪ್ಯಾಕೇಜ್‌ವೊಂದನ್ನು ಘೋಷಣೆ ಮಾಡಿದೆ. ಈ ಹಿಮಾಚಲ ಪ್ಯಾಕೇಜ್‌ನೊಂದಿಗೆ ನೀವು ಶಿಮ್ಲಾ, ಮನಾಲಿ ಮತ್ತು ಚಂಡೀಗಢಕ್ಕೆ ಭೇಟಿ ನೀಡಬಹುದಾಗಿದೆ. 7 ದಿನಳ ಕಾಲ ನಡೆಯುವ ಪ್ರವಾಸ ಇದಾಗಿದೆ. ಹಾಗಾದರೆ ಈ ಪ್ರವಾಸ ಪ್ಯಾಕೇಜ್‌ನ ದರದ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಪ್ಯಾಕೇಜ್‌ನಲ್ಲಿ ಹಿಮಾಚಲ ಪ್ರದೇಶದ ಕಣಿವೆಗಳು ಮತ್ತು ಅಲ್ಲಿನ ಪರ್ವತಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ಪ್ಯಾಕೇಜ್ ಅನ್ನು ಘೋಷಿಸಲಾಗಿದ್ದು, ಇದರಲ್ಲಿ ಡೀಲಕ್ಸ್ ಹೋಟೆಲ್ ಸೌಕರ್ಯಗಳನ್ನು ಕೂಡ ಕಲ್ಪಿಸಲಾಗಿದೆ. ಬೆಳಗ್ಗೆ ಮತ್ತು ರಾತ್ರಿಯ ಆಹಾರದ ವ್ಯವಸ್ಥೆಯನ್ನ ಸಹ ಮಾಡಲಾಗಿದೆ. ಇದು 6 ರಾತ್ರಿ 7 ಹಗಲುಗಳ ಪ್ರವಾಸ ಇದಾಗಿದ್ದು, ಈ ಪ್ರವಾಸ ಏಪ್ರಿಲ್‌ 18ರಿಂದ ಆರಂಭವಾಗಲಿದೆ.

IRCTC: Special Tour Package to Himachal Pradesh, check price details

ಪ್ಯಕೇಜ್‌ನ ದರದ ಸಂಪೂರ್ಣ ವಿವರ
ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ ವೆಚ್ಚವನ್ನು ಪಾವತಿಸಬೇಕಾಗುದೆ. ಹಾಗೆಯೇ ಮಕ್ಕಳಿಗೆ ಪ್ರತ್ಯೇಕ ಶುಲ್ಕಗಳಿವೆ. ಒಬ್ಬರಿಗೆ 58,550 ರೂ., ಇಬ್ಬರಿಗೆ 44,200 ರೂ., ಮತ್ತು ಮೂವರು ಪ್ರಯಾಣ ಮಾಡಲು ಬಯಸಿದರೆ 42,300 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಗೆಯೇ 5-11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ 36,300 ರೂ. ಮತ್ತು ಹಾಸಿಗೆ ಇಲ್ಲದೆ 35,200 ರೂ., 2-4 ವರ್ಷದ ಮಕ್ಕಳಿಗೆ 27,400 ರೂಪಾಯಿ ಪಾವತಿಸಬೇಕಾಗುತ್ತದೆ.

ಬುಕ್‌ ಮಾಡುವ ವಿಧಾನ
ಐಆರ್‌ಸಿಟಿಸಿಯು ಈ ಟೂರ್ ಪ್ಯಾಕೇಜ್ ಕುರಿತು ಟ್ವೀಟ್ ಮಾಡಿದ್ದು, ಹಿಮಾಚಲ ಪ್ರದೇಶದ ಸುಂದರ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದೆ. ಅಧಿಕೃತ IRCTC ವೆಬ್‌ಸೈಟ್ ಮೂಲಕ ಅಥವಾ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕ ಪ್ಯಾಕೇಜ್‌ಅನ್ನು ಬುಕ್ ಮಾಡಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ IRCTC ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

IRCTC: Special Tour Package to Himachal Pradesh, check price details

ಹಿಮಾಚಲ ಪ್ರದೇಶದ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಅವಕಾಶವಾಗಿದೆ. ಈ ಪ್ಯಾಕೇಜ್‌ ತಂಗುವಿಕೆ ಹೋಟೆಲ್, ಊಟ ಒಳಗೊಂಡಿರುತ್ತದೆ. ಆದ್ದರಿಂದ ಈ ಪ್ಯಾಕೇಜ್‌ನೊಂದಿಗೆ ಹಿಮಾಚಲ ಪ್ರದೇಶದ ಸೌಂದರ್ಯವನ್ನು ಸವಿಯುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಹಾಗಾದರೆ ಮತ್ಯಾಕೆ ತಡ ಟಿಕೆಟ್‌ ಬುಕ್‌ ಮಾಡಿ ಹಿಮಾಚಲಕ್ಕೆ ಪ್ರಯಾಣ ಬೆಳೆಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+