IRCTC: ರೈಲು ಪ್ರಯಾಣಿಕರಿಗೆ ರಾಗಿ ಉತ್ಪನ್ನದ ಆಹಾರ ನೀಡಲು ನಿರ್ಧಾರ, ವಿವರ ಇಲ್ಲಿದೆ

ನವದೆಹಲಿ, ಏಪ್ರಿಲ್‌, 03: ಭಾರತೀಯ ರೈಲ್ವೆಯು ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲಿಯೇ ಅಭಿವೃದ್ಧಿ ಹೊಂದುತ್ತಲೇ ಇದೆ. ಅಲ್ಲದೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಲವಾರು ಯೋಜನೆಗಳನ್ನು ಸಹ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಪ್ರಯಾಣಿಕರಿಗೆ ರಾಗಿಯಿಂದ ತಯಾರಿಸಿದ ಆರೋಗ್ಯಕರ ಆಹಾರಗಳನ್ನು ಕೊಡಲು ಮುಂದಾಗಿದೆ. ಹಾಗಾದರೆ ಪ್ರಯಾಣಿಕರಿಗೆ ಯಾವೆಲ್ಲ ಆಹಾರಗಳು ದೊರೆಯಲಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಮೆನುವಿನ ವಿವರ ಇಲ್ಲಿದೆ

ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ತನ್ನ ಮೆನುವಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಆರೋಗ್ಯಕರ ಆಹಾರದ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಅವುಗಳಲ್ಲಿ ಕೆಲವು ರಾಗಿಯಿಂದ ಮಾಡಲಾದ ಪದಾರ್ಥಗಳಾಗಿರುತ್ತವೆ. ಐಆರ್‌ಸಿಟಿಸಿಯ ಉನ್ನತ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಪ್ರಕಾರ, ಉತ್ತರ ಪ್ರದೇಶದ ಎಲ್ಲಾ ಆಹಾರ ಮಾರಾಟಗಾರರು ರೈಲು ಪ್ಲಾಟ್‌ಫಾರ್ಮ್‌ಗಳಲ್ಲಿ 78 ಸ್ಥಿರ ಘಟಕಗಳು ಸೇರಿದಂತೆ ರಾಗಿ ಆಧಾರಿತ ಆಹಾರಗಳನ್ನು ಸೇರಿಸಲು ಒತ್ತಾಯಿಸಲಾಗಿದೆ.

IRCTC has decided millet based food give for passengers, Know Menu details

ಅಲ್ಲದೇ ಭಾರತೀಯ ರೈಲ್ವೆಯ ಮೊಬೈಲ್ ಘಟಕಗಳು, ಪ್ಯಾಂಟ್ರಿ ಕಾರುಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿನ ಐಆರ್‌ಸಿಟಿಸಿಯ ರೆಸ್ಟೋರೆಂಟ್‌ಗಳಿಗೆ ಸಹ ಅದೇ ರೀತಿ ನಿರ್ದೇಶನವನ್ನು ನೀಡಲಾಗಿದೆ. ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ. ಆದ್ದರಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ರಾಗಿ ಉತ್ಪನ್ನದ ಆಹಾರಗಳು

ರೈಲು ಪ್ರಯಾಣಿಕರಿಗೆ ರಾಗಿ ಲಡ್ಡು, ಬ್ರೆಡ್ ಮತ್ತು ಬಜ್ರಾ, ಜೋಳ, ರಾಗಿ ಕಚೋರಿ, ರಾಗಿ ಖಿಚಡಿ, ರಾಗಿ ದಾಲಿಯಾ, ರಾಗಿ ಬಿಸ್ಕತ್ತುಗಳು, ರಾಗಿ ಇಡ್ಲಿ, ರಾಗಿ ದೋಸೆಯಂತಹ ಆಹಾರ ಪದಾರ್ಥಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳ ವಿವರ

ಇನ್ನು ಭಾರತದ ಪಾಕಪದ್ಧತಿ ಮತ್ತು ಊಟದ ರುಚಿಯನ್ನು ಸವಿಯಲು ಪ್ರಪಂಚದಾದ್ಯಂತ ಜನರು ಇಷ್ಟಪಡುತ್ತಾರೆ. ಹಾಗೆಯೇ 2023ನೇ ಸಾಲಿನ ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳು ಪಟ್ಟಿಯಲ್ಲಿ ಮೂರು ಭಾರತೀಯ ರೆಸ್ಟೋರೆಂಟ್‌ಗಳು ಸೇರಿವೆ. ಹಾಗಾದರೆ ಇದರಲ್ಲಿ ಭಾರತದಲ್ಲಿರುವ ಅತ್ಯುತ್ತಮ ರೆಸ್ಟೋರೆಂಟ್‌ಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇತ್ತೀಚಿನ ಟಾಪ್ 50 ಪಟ್ಟಿಯಲ್ಲಿ ಮುಂಬೈನ ಮಾಸ್ಕ್, ನವದೆಹಲಿಯ ಇಂಡಿಯನ್ ಆಕ್ಸೆಂಟ್ ಮತ್ತು ಚೆನ್ನೈನ ಆವರ್ತನಾ ಕ್ರಮವಾಗಿ ಅತ್ಯುತ್ತಮ ಪಟ್ಟಿಯಲ್ಲಿ 16, 19 ಮತ್ತು 30ನೇ ಸ್ಥಾನಗಳನ್ನು ಪಡೆದಿವೆ. ಆವರ್ತನಾ ರೆಸ್ಟೋರೆಂಟ್‌ 30ನೇ ಸ್ಥಾನದಲ್ಲಿದೆ. ಮತ್ತು ಮಾರ್ಚ್ 28ರಂದು ಸಿಂಗಾಪುರದಲ್ಲಿ ನಡೆದ ಸಮಾರಂಭದಲ್ಲಿ ಇದೇ ಹೋಟೆಲ್‌ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಊಟ ಅಲ್ಲಿನ ಜನರನ್ನು ಆಕರ್ಷಿತರನ್ನಾಗಿ ಮಾಡಿದೆ.

ಇನ್ನು ಬ್ಯಾಂಕಾಕ್‌ನ ಲೆ ಡು ಎನ್ನುವ ರೆಸ್ಟೋರೆಂಟ್‌ ಮೊದಲ ಸ್ಥಾನದಲ್ಲಿದೆ. ಮತ್ತು ಥಾಯ್ಲೆಂಡ್‌ನ ರಾಜಧಾನಿ ಜಪಾನ್‌ನ ಸೆಜಾನ್ನೆ ಮತ್ತು ನುಸಾರಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಹಾಗೆಯೇ ಸಿಂಗಾಪುರದ ಅಗ್ರ ಎಂಟು ರೆಸ್ಟೋರೆಂಟ್‌ಗಳೆಂದರೆ ಒಡೆಟ್ಟೆ 6, ಲ್ಯಾಬಿರಿಂತ್ 11, ಮೆಟಾ 17, ಝೆನ್ 21, ಬರ್ಂಟ್ ಎಂಡ್ಸ್ 24, ಯುಫೋರಿಯಾ 25, ಕ್ಲೌಡ್‌ಸ್ಟ್ರೀಟ್ 26, ಲೆಸ್ ಅಮಿಸ್ ಸಂಖ್ಯೆ 27, ಮತ್ತು ಬಾರ್ನ್ 36ನೇ ಸ್ಥಾನದಲ್ಲಿದೆ. ಇನ್ನು ಜಪಾನ್‌ನ 10 ರೆಸ್ಟೋರೆಂಟ್‌ಗಳಲ್ಲಿ 2 ಅಗ್ರಸ್ಥಾನದಲ್ಲಿದೆ, ನಂತರ ಥೈಲ್ಯಾಂಡ್‌ನ ಒಂಬತ್ತು ಅತ್ಯುತ್ತಮ ಸ್ಥಾನಗಳನ್ನು ಪಡೆದುಕೊಂಡಿವೆ.

ಕಳೆದ ವರ್ಷದಿಂದ ಈ ವರ್ಷಕ್ಕೆ 29 ಸ್ಥಾನಗಳಲ್ಲಿ ಸಿಂಗಾಪುರದ ಇದ್ದು, ಇದು ಅತ್ಯಧಿಕವಾಗಿದೆ. ಹಿಂದಿನ ವರ್ಷದಿಂದ ಅಗ್ರ ಶ್ರೇಯಾಂಕದ ಉಪಾಹಾರ ಗೃಹವಾದ ಡೆನ್, 2023 ರಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರೆ, ಹಾಂಗ್ ಕಾಂಗ್‌ ಐದನೇ ಸ್ಥಾನದಿಂದ ಹದಿಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+