ಡಿ.20ರಿಂದ ಬೆಂಗಳೂರು-ಬೆಳಗಾವಿ ನಡುವೆ ಮತ್ತೊಂದು ವಿಮಾನ, ವೇಳಾಪಟ್ಟಿ

ಬೆಂಗಳೂರು, ನವೆಂಬರ್ 10: ಗಡಿನಾಡು ಬೆಳಗಾವಿಯ ಜನರಿಗೆ ಸಿಹಿಸುದ್ದಿ ಇದೆ. ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಸೇವೆಯನ್ನು ಮತ್ತೆ ಆರಂಭಿಸಲಿದೆ. ಚಳಿಗಾಲದ ವೇಳಾಪಟ್ಟಿ ಘೋಷಣೆ ಮಾಡಿದ್ದ ಇಂಡಿಗೋ ಬೆಳಗಾವಿ-ಬೆಂಗಳೂರು ನಡುವಿನ ಬೆಳಗ್ಗೆಯ ವಿಮಾನ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ವಿಮಾನ ಹಾರಾಟ ಮತ್ತೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೆಂಗಳೂರು- ಬೆಳಗಾವಿ-ಬೆಂಗಳೂರು ವಿಮಾನವನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ವಿಮಾನಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು. ಈಗ ವಿಮಾನ ಸಂಚಾರ ಮತ್ತೆ ಆರಂಭವಾಗಲಿದ್ದು, ದಿನಾಂಕವೂ ನಿಗದಿಯಾಗಿದೆ.

IndiGo To Resume Belagavi Bengaluru Flight From December 20

ಜಗದೀಶ್ ಶೆಟ್ಟರ್ ಪೋಸ್ಟ್: ಈ ಕುರಿತು ಸಂಸದ ಜಗದೀಶ್ ಶೆಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಇಂಡಿಗೋ ಸಂಸ್ಥೆಯು ದಿನಾಂಕ 20-12-2024 ರಿಂದ ಬೆಂಗಳೂರು-ಬೆಳಗಾವಿ-ಬೆಂಗಳೂರು ನಡುವೆ ವಿಮಾನ ಹಾರಾಟವನ್ನು ಪುನಃ ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ' ಎಂದು ಹೇಳಿದ್ದಾರೆ.

'ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದು, ದಿನಾಂಕ 20-12-2024 ರಂದು ಬೆಂಗಳೂರಿನಿಂದ ಬೆಳಗಾವಿಗೆ ಬೆಳಗ್ಗೆ 6:30ಕ್ಕೆ ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ಬೆಳಿಗ್ಗೆ 8:30ಕ್ಕೆ ತನ್ನ ಸಂಚಾರವನ್ನು ಮತ್ತೆ ಪ್ರಾರಂಭಿಸಲಿದೆ' ಎಂದು ತಿಳಿಸಿದ್ದಾರೆ.

'ಕಳೆದ ತಿಂಗಳು ನವದೆಹಲಿಯಲ್ಲಿ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಭೆಯಲ್ಲಿ ಡಿಸೆಂಬರ್ 2024ರ ಮಾಹೆಯಲ್ಲಿ ಈ ವಿಮಾನ ಸೇವೆಯನ್ನು ಪ್ರಾರಂಭಿಸುವುದಾಗಿ ಅವರು ಆಶ್ವಾಸನೆ ನೀಡಿರುವಂತೆ ಸದ್ಯ ಬೆಂಗಳೂರು ಬೆಳಗಾವಿ ಬೆಂಗಳೂರು ಮಧ್ಯ ವಿಮಾನ ಸೇವೆ ಆರಂಭಗೊಂಡಿದೆ' ಎಂದು ಶೆಟ್ಟರ್ ಹೇಳಿದ್ದಾರೆ.

'ಈ ವಿಮಾನ ಸೇವೆ ಇನ್ನೂ ನಿಗದಿತ ದಿನಾಂಕದ ಹಾಗೂ ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ಮೊದಲು ಈ ವಿಮಾನ ಸೇವೆ ಪ್ರಾರಂಭಿಸುವ ಬಗ್ಗೆ ಪ್ರಯತ್ನ ಮಾಡಲಾಗುವುದು. ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕೆ.ಆರ್ ನಾಯ್ಡು ಇವರಿಗೆ ಮತ್ತು ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು' ಎಂದು ಶೆಟ್ಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನವೆಂಬರ್ 12ರಿಂದ ವಿಮಾನ ಸಂಚಾರ: ಕೊಲ್ಹಾಪುರದಲ್ಲಿ ಪ್ರಧಾನ ಕಛೇರಿ ಹೊಂದಿರುವ ಸಂಜಯ್ ಘೋಡಾವತ್ ಗ್ರೂಪ್‌ನ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ನವೆಂಬರ್ 12ರಿಂದ ಬೆಳಗಾವಿ-ಬೆಂಗಳೂರು ನಡುವೆ ವಾರಕ್ಕೊಮ್ಮೆ (ಮಂಗಳವಾರ) ಬೆಳಗಿನ ವಿಮಾನ ಸಂಚಾರ ಆರಂಭಿಸಲಿದೆ.

ಈ ಮಾರ್ಗದಲ್ಲಿ ಸ್ಟಾರ್‌ ಏರ್ 50 ಆಸನಗಳ ವಿಮಾನ ಓಡಿಸಲಿದೆ. ಎಸ್‌5-9931 ಸಂಖ್ಯೆಯ ವಿಮಾನ ಬೆಳಗಾವಿಯಿಂದ 7.40ಕ್ಕೆ ಹೊರಟು, 8.50ಕ್ಕೆ ಬೆಂಗಳೂರು ತಲುಪಲಿದೆ. ಎಸ್‌5-9338 ವಿಮಾನ ಬೆಂಗಳೂರು ನಗರದಿಂದ 12.35ಕ್ಕೆ ಹೊರಟು, 1.45ಕ್ಕೆ ಬೆಳಗಾವಿಯನ್ನು ತಲುಪಪಿದೆ.

ಇಂಡಿಗೋ ಅಕ್ಟೋಬರ್ 27ರಿಂದ ಬೆಳಗಾವಿ-ಬೆಂಗಳೂರು ನಡುವಿನ ವಿಮಾನವನ್ನು ರದ್ದುಗೊಳಿಸಿತ್ತು. ಸುಮಾರು 2 ವರ್ಷಗಳಿಂದ ಈ ವಿಮಾನ ಸಂಚಾರವನ್ನು ನಡೆಸುತ್ತಿತ್ತು. ವಿಮಾನದ ಶೇ 85ರಷ್ಟು ಸೀಟುಗಳು ಭರ್ತಿ ಆಗುತ್ತಿದ್ದವು. ಆದರೆ ಚಳಿಗಾಲದ ವೇಳಾಪಟ್ಟಿ ಅನ್ವಯ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗುತ್ತಿದೆ ಎಂದು ಇಂಡಿಗೋ ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+