ಹುಬ್ಬಳ್ಳಿ-ಪುಣೆ ನೇರ ವಿಮಾನ ಆರಂಭ, ವೇಳಾಪಟ್ಟಿ

ಹುಬ್ಬಳ್ಳಿ-ಪುಣೆ ನಡುವಿನ ಅಂತರ 425 ಕಿ. ಮೀ. ಉಭಯ ನಗರಗಳ ನಡುವೆ ಇಷ್ಟು ದಿನ ನೇರ ವಿಮಾನ ಸೇವೆ ಇರಲಿಲ್ಲ. ಈಗ ಇಂಡಿಗೋ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.

ಬೆಂಗಳೂರು, ಫೆಬ್ರವರಿ 06; ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಹುಬ್ಬಳ್ಳಿ-ಪುಣೆ ನಡುವೆ ನೇರ ವಿಮಾನ ಸಂಚಾರಕ್ಕೆ ಭಾನುವಾರ ಚಾಲನೆ ಸಿಕ್ಕಿದೆ. ಮೊದಲ ದಿನವೇ ವಿಮಾನ ಸಂಪೂರ್ಣ ಭರ್ತಿಯಾಗಿತ್ತು.

ಪುಣೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. 78 ಪ್ರಯಾಣಿಕರು ಹುಬ್ಬಳ್ಳಿಯಿಂದ ಪುಣೆಗೆ ಪ್ರಯಾಣ ಬೆಳೆಸಿದರು.

ಹುಬ್ಬಳ್ಳಿ-ಪುಣೆ ನಡುವೆ ನೇರ ವಿಮಾನ ಸೇವೆ ಆರಂಭಿಸಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸಚಿವಾಲಯ ಸ್ಪಂದಿಸಿತ್ತು, ನೇರ ವಿಮಾನ ಹಾರಾಟ ಆರಂಭವಾಗಿದೆ.

IndiGo Launch Direct Flight Between Hubballi And Pune Schedule

ವೇಳಾಪಟ್ಟಿ; ಹುಬ್ಬಳ್ಳಿ-ಪುಣೆ ವಿಮಾನ ಶನಿವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ. 78 ಆಸನಗಳಿರುವ ವಿಮಾನ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಟು 7.30ಕ್ಕೆ ಪುಣೆ ತಲುಪಲಿದೆ.

ಪುಣೆಯಿಂದ ರಾತ್ರಿ 8 ಗಂಟೆಗೆ ಹೊರಟು 9 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ. ಹುಬ್ಬಳ್ಳಿ-ಪುಣೆ ನಡುವಿನ ಅಂತರ 425 ಕಿ. ಮೀ. ಉಭಯ ನಗರಗಳ ನಡುವೆ ಇಷ್ಟು ದಿನ ನೇರ ವಿಮಾನ ಸೇವೆ ಇರಲಿಲ್ಲ.

ಪ್ರಹ್ಲಾದ್ ಜೋಶಿ ಸಂತಸ; ಹುಬ್ಬಳ್ಳಿ-ಪುಣೆ ನೇರ ವಿಮಾನ ಸೇವೆ ಆರಂಭವಾಗಿರುವುದಕ್ಕೆ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗುವ ಮೂಲಕ ಈ‌ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದು ಖುಷಿಯ ಸಂಗತಿ. ಇದರಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಪೋಸ್ಟ್‌ ಹಾಕಿದ್ದಾರೆ.

ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ, ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಅನಂತ ಧನ್ಯವಾದಗಳು ಎಂದು ಜೋಶಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+