Vandebharat: ಮೆಟ್ರೋ, ಸ್ಲೀಪರ್ ಆವೃತ್ತಿಯಲ್ಲಿ ಬರಲಿದೆ ವಂದೇಭಾರತ್ : ವಿವರ ತಿಳಿಯಿರಿ

ದೇಶದ ರೈಲ್ವೆ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿರುವ ವಂದೇಭಾರತ್ ಎಕ್ಸ್‌ಪ್ರೆಸ್‌ ಇದೀಗ ಎರಡು ಹೊಸ ಆವೃತ್ತಿಯಲ್ಲಿ ಬರಲು ಸಜ್ಜಾಗುತ್ತಿದೆ. ಹೌದು, ಸ್ಲೀಪರ್ ಮತ್ತು ಮೆಟ್ರೋ ಆವೃತ್ತಿಯಲ್ಲಿ ವಂದೇಭಾರತ್ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಇಲಾಖೆ ಕೆಲಸ ಮಾಡುತ್ತಿದೆ.

2023-24ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಎರಡು ಆವೃತ್ತಿಯಲ್ಲಿ ವಂದೇ ಭಾರತ್‌ ಅನ್ನು ಪರಿಚಯಿಸಲು ಸತತವಾಗಿ ಕೆಲಸ ಮಾಡಲಾಗುತ್ತಿದೆ. ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ವಂದೇ ಭಾರತ್ ಸ್ಲೀಪರ್ ಆವೃತ್ತಿ ಹಾಗೂ ವಂದೇ ಮೆಟ್ರೋ ಕೋಚ್‌ಗಳ ಉತ್ಪಾದನೆಗೆ ಅವಿರತವಾಗಿ ಶ್ರಮಿಸುತ್ತಿದೆ.

Sleeper and Metro Variants of Vandebharat

ಐಸಿಎಫ್‌ಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ವಂದೇ ಭಾರತ್ ಸ್ಲೀಪರ್ ಆವೃತ್ತಿ ಮತ್ತು ವಂದೇ ಮೆಟ್ರೋ ಕೋಚ್‌ಗಳ ಉತ್ಪಾದನಾ ಪ್ರಕ್ರಿಯೆಯು ಉತ್ತಮ ಹಂತದಲ್ಲಿ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ಐಸಿಎಫ್ ಹೊರತಾಗಿ ರೈಲ್ವೆ ಇಲಾಖೆಯ ಎರಡು ಕಾರ್ಖಾನೆಗಳಲ್ಲಿ ಈ ಸೆಮಿ-ಸ್ಪೀಡ್ ರೈಲುಗಳ ಉತ್ಪಾದನೆ ನಡೆಯುತ್ತಿದೆ. ರಾಯ್ ಬರೇಲಿ ಮೂಲದ ಮಾಡರ್ನ್ ಕೋಚ್ ಫ್ಯಾಕ್ಟರಿ ಮತ್ತು ಲಾತೂರ್ ಮೂಲದ ಮರಾಠವಾಡ ರೈಲ್ ಕೋಚ್ ಫ್ಯಾಕ್ಟರಿ ವಂದೇ ಭಾರತ್‌ನ ಎರಡು ಆವೃತ್ತಿಗಳ ರೈಲುಗಳ ಉತ್ಪಾದನೆ ಮಾಡಲಾಗುತ್ತಿದೆ. 2023ರ ಆಗಸ್ಟ್ 15ರೊಳಗೆ ದೇಶದಲ್ಲಿನ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ವಂದೇಭಾರತ್

ಸದ್ಯ ವಂದೇಭಾರತ್‌ ಚೇರ್ ಕಾರ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ಕಾರ್ ಮತ್ತು ವಂದೇ ಮೆಟ್ರೋ ಆವೃತ್ತಿಗಳು ಸಂಚರಿಸಲಿವೆ.

ವಂದೇ ಭಾರತ್ ಸ್ಲೀಪರ್ ಆವೃತ್ತಿ

550 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಪ್ರಯಾಣಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಲ್ಲಿ ಸ್ಲೀಪರ್ ಕ್ಲಾಸ್ ಕಾರ್ಯನಿರ್ವಹಿಸಲಿದೆ. ಈ ರೈಲು ಸಂಚಾರ ಪ್ರಾರಂಭಿಸಿದ ನಂತರ ಸೂಪರ್‌ಫಾಸ್ಟ್ ರೈಲುಗಳಾದ ರಾಜಧಾನಿಗಳು, ಡುರೊಂಟೊ ಇತ್ಯಾದಿ ರೈಲುಗಳ ಸೇವೆಗೆ ಪರ್ಯಾಯವಾಗಿರುತ್ತದೆ. ಫೆಬ್ರವರಿ 2024 ರ ವೇಳೆಗೆ ಸ್ಲೀಪರ್ ಕಾರ್ ಸ್ವರೂಪ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಂದೇ ಮೆಟ್ರೋ ಮಾದರಿ

100 ಕಿಲೋ ಮೀಟರ್ ಗಿಂದ ಕಡಿಮೆ ಅಂತರದ ಪ್ರಯಾಣಕ್ಕಾಗಿ ವಂದೇ ಮೆಟ್ರೋ ಮಾದರಿಯಲ ರೈಲುಗಳನ್ನು ಉತ್ಪಾದಿಸಲಾಗುತ್ತಿದೆ. ಸದ್ಯ ಅಸ್ತಿತ್ವದಲ್ಲಿರುವ ಉಪನಗರ ಮತ್ತು ಉಪನಗರವಲ್ಲದ ರೈಲುಗಳ ಬದಲಾಗಿ ಈ ವಂದೇ ಮೆಟ್ರೋ ರೈಲುಗಳು ಚಲಿಸಲಿವೆ. ಮಹಾನಗರಗಳ ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಲೋಕಲ್ ರೈಲುಗಳನ್ನು ಇವು ಬದಲಾಯಿಸಲಿವೆ. ರಾಜಧಾನಿಗಳ ಸಮೀಪವಿರುವ ಉಪನಗರಗಳ ವ್ಯಾಪ್ತಿಯಲ್ಲಿ ಕೂಡ ಈ ರೈಲುಗಳು ಸಂಚರಿಸಲಿವೆ.

ಸದ್ಯ ದೇಶಾದ್ಯಂತ 25 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಕಾರ್ಯನಿರ್ವಹಿಸುತ್ತಿವೆ. ನವದೆಹಲಿ-ವಾರಣಾಸಿ, ಮುಂಬೈ-ಗಾಂಧಿನಗರ, ಮುಂಬೈ-ಶಿರಡಿ, ಸಿಕಂದರಾಬಾದ್-ತಿರುಪತಿ, ಮಡಗಾಂವ್- ಬೆಂಗಳೂರು, ಚೆನ್ನೈ-ಮೈಸೂರು, ಧಾರವಾಡ-ಬೆಂಗಳೂರು ಇವುಗಳಲ್ಲಿ ಪ್ರಮುಖ ಮಾರ್ಗಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+