ICC World Cup final: ದೇಶದ ಈ ಮಹಾನಗರಗಳಿಂದ ಅಹಮದಾಬಾದ್‌ಗೆ ವಿಶೇಷ ರೈಲುಗಳು- ಟಿಕೆಟ್‌ ದರ, ವೇಳೆ, ಮಾಹಿತಿ, ವಿವರ

ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯವನ್ನು ವೀಕ್ಷಿಸಲು ತೆರಳುವ ಪ್ರಯಾಣಿಕರಿಗಾಗಿ ದೇಶದ ಮಹಾನಗರಗಳಿಂದ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ದೆಹಲಿ ಮತ್ತು ಮುಂಬೈನಿಂದ ವಿಶೇಷ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ.

ರೈಲ್ವೇ ಇಲಾಖೆ ಪ್ರಕಾರ, ದೆಹಲಿಯಿಂದ ಒಂದು ಮತ್ತು ಮುಂಬೈನಿಂದ ಮೂರು ರೈಲುಗಳನ್ನು ಓಡಿಸಲಾಗುತ್ತದೆ. ಇವುಗಳು ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ ಅಹಮದಾಬಾದ್‌ಗೆ ಆಗಮಿಸುತ್ತವೆ.

ಪಂದ್ಯದ ನಂತರ, ರೈಲುಗಳು ಸೋಮವಾರ ಬೆಳಗಿನ ಜಾವ ಸುಮಾರು 2:30 ಕ್ಕೆ ಅಹಮದಾಬಾದ್‌ನಿಂದ ಹೊರಡಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿವೆ.

icc-world-cup-final-special-trains

ರೈಲ್ವೆಯ ಈ ಉಪಕ್ರಮವು ₹ 20,000 ರಿಂದ ₹ 40,000 ವರೆಗಿನ ವಿಪರೀತ ವಿಮಾನ ದರಗಳೊಂದಿಗೆ ಸಂಕಷ್ಟ ಅನುಭವಿಸುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪರಿಹಾರವಾಗಿದೆ. ಕಡಿಮೆ ದರದ ಭರವಸೆ ನೀಡುವ ಮೂಲಕ ಭಾರತೀಯ ರೈಲ್ವೇ ಈ ಉಪಕ್ರಮವನ್ನು ಯೋಜಿಸಿದೆ.

ಸ್ಲೀಪರ್ ಸೀಟ್‌ ₹ 620 ರಿಂದ ಮೊದಲ ಎಸಿ ಸ್ಲೀಪರ್‌ ಸೀಟ್‌ಗೆ ₹ 3,490 ವರೆಗಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. 3AC ಎಕಾನಮಿ ಮತ್ತು 3AC ಸೀಟ್‌ಗಳ ಬೆಲೆ ಕ್ರಮವಾಗಿ ₹1,525 ಮತ್ತು ₹1,665 ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ರೈಲುಗಳ ಕಾಯ್ದಿರಿಸುವಿಕೆಯು ಶನಿವಾರದಂದು ಪ್ರಾರಂಭವಾಗಿದೆ. ಐಆರ್‌ಸಿಟಿಸಿ ವೆಬ್‌ಸೈಟ್ - www.irctc.co.in ಮೂಲಕ ಬುಕ್ ಮಾಡಬಹುದು.

ರೈಲು ಸಂಖ್ಯೆ 01153 ಸಿಎಸ್‌ಎಂಟಿ - ಅಹಮದಾಬಾದ್ ವಿಶೇಷ ಎಕ್ಸ್‌ಪ್ರೆಸ್ ಶನಿವಾರ ರಾತ್ರಿ 10.30 ಕ್ಕೆ ಸಿಎಸ್‌ಎಂಟಿ ನಿಂದ ಹೊರಡುತ್ತದೆ.ಮರುದಿನ ಬೆಳಿಗ್ಗೆ 06.40 ಕ್ಕೆ ಅಹಮದಾಬಾದ್‌ಗೆ ತಲುಪುತ್ತದೆ. ರೈಲು ಸಂಖ್ಯೆ 01154 ಅಹಮದಾಬಾದ್ - ಸಿಎಸ್‌ಎಂಟಿ ವಿಶೇಷ ಎಕ್ಸ್‌ಪ್ರೆಸ್ ಸೋಮವಾರ ಬೆಳಗ್ಗೆ 1:45 ಕ್ಕೆ ಅಹಮದಾಬಾದ್‌ನಿಂದ ಹೊರಡಲಿದ್ದು, ಅದೇ ದಿನ ಬೆಳಗ್ಗೆ 10.35ಕ್ಕೆ ಸಿಎಸ್‌ಎಂಟಿ ತಲುಪಲಿದೆ.

icc-world-cup-final-special-trains

ಮುಂಬೈನಿಂದ ಬರುವ ರೈಲುಗಳು ಸಿಎಂಟಿಸಿ, ದಾದರ್, ಥಾಣೆ, ವಸಾಯಿ ರಸ್ತೆ, ಸೂರತ್, ವಡೋದರಾ ಮೂಲಕ ಅಂತಿಮ ನಿಲುಗಡೆಯಾದ ಅಹಮದಾಬಾದ್‌ನಲ್ಲಿ ನಿಲ್ಲುತ್ತವೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಹಣಾಹಣಿಯು ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿದೆ. ಇದು 2003 ರ ನಂತರ ವಿಶ್ವಕಪ್ ಫೈನಲ್‌ನಲ್ಲಿ ಪುನರಾವರ್ತನೆಯಾಗಿದೆ. 2003 ರಲ್ಲಿ ಆಸ್ಟ್ರೇಲಿಯಾವು ಭಾರತವನ್ನು ಸೋಲಿಸಿ ವಿಶ್ವಕಪ್‌ ಅನ್ನು ಗೆದ್ದುಕೊಂಡಿತು.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 125 ರನ್‌ಗಳಿಂದ ಗೆಲುವು ಸಾಧಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೆ ಇವೆರಡು ಬಲಿಷ್ಠ ತಂಡಗಳು ಸೆಣಸಾಟ ನಡೆಸಲಿವೆ. 100,000 ಕ್ಕೂ ಹೆಚ್ಚು ಅಭಿಮಾನಿಗಳು ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವಿಕ್ಷೀಸಲಿದ್ದಾರೆ.

ಬುಧವಾರ, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಆಲ್‌ರೌಂಡ್ ಪ್ರದರ್ಶನ ನೀಡಿ 70 ರನ್‌ಗಳಿಂದ ಸೋಲಿಸಿತು.

ಲೀಗ್‌ ಹಂತದಲ್ಲಿ ಭಾರತವು ತನ್ನ ಎಲ್ಲಾ ಒಂಬತ್ತು ಪಂದ್ಯಗಳನ್ನು ಗೆದ್ದು ಗರಿಷ್ಠ 18 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+