ಹುಬ್ಬಳ್ಳಿ-ತಂಜಾವೂರು ಹೊಸ ರೈಲು; ವೇಳಾಪಟ್ಟಿ, ನಿಲ್ದಾಣಗಳು
ಎಸ್‌ಎಸ್‌ಎಸ್ ಹುಬ್ಬಳ್ಳಿ-ತಂಜಾವೂರು ನಡುವೆ ಭಾರತೀಯ ರೈಲ್ವೆ ಹೊಸ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ರೈಲು ಓಡಿಸಲಾಗುತ್ತಿದೆ.
ಬೆಂಗಳೂರು, ಮಾರ್ಚ್ 16; ನೈಋತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜೀ ರೈಲ್ವೆ ನಿಲ್ದಾಣ ಮತ್ತು ತಮಿಳುನಾಡಿನ ತಂಜಾವೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲು ಒಟ್ಟು 5 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳ ಬೇಕು ಹಾಗೂ ಮುಂಚಿತವಾಗಿ ತಮ್ಮ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಲು ನೈಋತ್ಯ ರೈಲ್ವೆ ಮನವಿ ಮಾಡಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ತಂಜಾವೂರು ನಿಲ್ದಾಣಗಳ ನಡುವೆ ಬೇಡಿಕೆಯ ಮೇರೆಗೆ 5 ಟ್ರಿಪ್‌ಗಳ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರು ರೈಲಿನ ಸಮಯ ಹಾಗೂ ನಿಲುಗಡೆ ವಿವರ ತಿಳಿದುಕೊಂಡು ಪ್ರವಾಸದ ಯೋಜನೆ ರೂಪಿಸಬಹುದಾಗಿದೆ.

ಎಸ್ಎಸ್‌ಎಸ್ ಹುಬ್ಬಳ್ಳಿ-ತಂಜವೂರು ನಡುವೆ ರೈಲು ಸಂಖ್ಯೆ 07325 ಮತ್ತು ರೈಲು ಸಂಖ್ಯೆ 07326 ಸಂಚಾರ ನಡೆಸಲಿದೆ. ಎಸ್‌ಎಸ್ಎಸ್ ಹುಬ್ಬಳ್ಳಿ-ತಂಜಾವೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 20, ಏಪ್ರಿಲ್ 3, 10, 17 ಮತ್ತು 24ರಂದು ಸಂಚಾರ ನಡೆಸಲಿದೆ. ತಂಜಾವೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 21, ಏಪ್ರಿಲ್ 4, 11, 18 ಮತ್ತು 25ರಂದು ಸಂಚಾರ ನಡೆಸಲಿದೆ ಎಂದು ವೇಳಾಪಟ್ಟಿ ಹೇಳಿದೆ.
ನೈಋತ್ಯ ರೈಲ್ವೆ ಮಾಹಿತಿಯಂತೆ ಈ ವಿಶೇಷ ರೈಲು 1 ಎಸಿ ಟು ಟೈರ್, 3 ಎಸಿ ತ್ರಿ ಟೈರ್, 9 ಸ್ಲೀಪರ್ ಕ್ಲಾಸ್ ಬೋಗಿಗಳು, 5 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ - ವ್ಯಾನ್‌ಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತವೆ. ಆನ್‌ಲೈನ್ ಮೂಲಕವು ಟಿಕೆಟ್ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ರೈಲಿನ ವೇಳಾಪಟ್ಟಿ; ಎಸ್ಎಸ್‌ಎಸ್ ಹುಬ್ಬಳ್ಳಿ-ತಂಜಾವೂರು ನಡುವೆ ರೈಲು ಸಂಖ್ಯೆ 07325 ಮಾರ್ಚ್ 20, ಏಪ್ರಿಲ್ 3, 10, 17 ಮತ್ತು 24 ರಂದು ಸಂಚಾರ ನಡೆಸಲಿದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8.25 ಗಂಟೆಗೆ ಹೊರಡಲಿದೆ. ಹಾವೇರಿ (9.45/9.47), ರಾಣಿಬೆನ್ನೂರು (10.8/10.10), ಹರಿಹರ (10.34/10.36), ದಾವಣಗೆರೆ (10.51/10.53), ಬೀರೂರು (12.25/12.27), ಅರಸೀಕೆರೆ (1.05/1.10), ತುಮಕೂರು (2.35/2.37), ಚಿಕ್ಕಬಣಾವರ (3.25/3.27), ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (4/4.10), ಕೆ. ಆರ್. ಪುರ (4.20/4.21), ಬಂಗಾರಪೇಟೆ (5.09/5.10), ಸೇಲಂ (9.25/9.30), ಕರೂರ್ ಜಂ. (10.43/10.45), ತಿರುಚ್ಚಿರಾಪಲ್ಲಿ ಪೊರ್ಟ್ (12.30/12.31), ತಿರುಚ್ಚಿರಾಪಲ್ಲಿ ಜಂ. (12.40/1.00PM) ಮತ್ತು ಬೂದಲೂರ (1:30/1:32) ಮಾರ್ಗದ ಮೂಲಕ ಮರುದಿನ ಮಧ್ಯಾಹ್ನ 2:15 ಗಂಟೆಗೆ ತಂಜಾವೂರು ಜಂಕ್ಷನ್ ತಲುಪಲಿದೆ.
ತಂಜಾವೂರು-ಎಸ್ಎಸ್ಎಸ್ ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 07326 ಮಾರ್ಚ್ 21, ಏಪ್ರಿಲ್ 4, 11, 18 ಮತ್ತು 25 ರಂದು ಸಂಚಾರ ನಡೆಸಲಿದೆ. ತಂಜಾವೂರಿನಿಂದ ರಾತ್ರಿ 7.40ಕ್ಕೆ ಹೊರಟು ಬೂದಲೂರ (7.57/7.58), ತಿರುಚ್ಚಿರಾಪಲ್ಲಿ ಜಂ. (8.40/9.10), ತಿರುಚ್ಚಿರಾಪಲ್ಲಿ ಪೋರ್ಟ್(9.20/9.21), ಕರೂರ ಜಂಕ್ಷನ್ (10.25/10.27), ಸೇಲಂ (11.45/11.50), ಬಂಗಾರಪೇಟೆ (2.29/2.30), ಕೃಷ್ಣರಾಜಪುರಂ (3.29/3.30), ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (3.40/3.50), ಚಿಕ್ಕಬಾಣಾವರ (4.28/4.30), ತುಮಕೂರು (5.08/5.10), ಅರಸೀಕೆರೆ (7/7.05), ಬೀರೂರು (7.43/7.45), ದಾವಣಗೆರೆ (9.03/9.05), ಹರಿಹರ (9.20/9.22), ರಾಣಿಬೆನ್ನೂರು (9.42/9.44) ಮತ್ತು ಹಾವೇರಿ (10.13/10.15) ಮಾರ್ಗವಾಗಿ ಮಾರನೇದಿನ ಮಧ್ಯಾಹ್ನ 12.30 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.












Click it and Unblock the Notifications