ಹುಬ್ಬಳ್ಳಿ ವಿಭಾಗ: ಜೂನ್ 11ರಿಂದ ಇಲ್ಲಿವರೆಗೂ KSRTCಯಲ್ಲಿ ಸಂಚರಿಸಿದ ಮಹಿಳೆಯರ ಸಂಖ್ಯೆ ಕೋಟಿಗೂ ಹೆಚ್ಚು, ವಿವರ ಇಲ್ಲಿದೆ
ಹುಬ್ಬಳ್ಳಿ, ಜೂನ್, 29: ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದ ಇಲ್ಲಿಯವರೆಗೂ ಇಬರೋಬ್ಬರಿ 2 ಕೋಟಿಗೂ ಅಧಿಕ ಮಹಿಳೆಯರು ವಾಯುವ್ಯ ಸಾರಿಗೆ (KSRTC)ಬಸ್‌ನಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೂನ್ 11 ರಿಂದ ಆರಂಭವಾದ ಶಕ್ತಿ ಯೋಜನೆಯಡಿ ವಾಯುವ್ಯ ಸಾರಿಗೆ ವಿಭಾಗ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಬರೊಬ್ಬರಿ 2 ಕೋಟಿಗೂ ಅಧಿಕ ಮಹಿಳೆಯರ ಪ್ರಯಾಣ ಮಾಡಿದ್ದಾರೆ. ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ 9 ಸಾರಿಗೆ ವಿಭಾಗದದಲ್ಲಿ, ಜೂನ್ 11ರಿಂದ ನಿನ್ನೆಯವರೆಗೆ ಬರೋಬ್ಬರಿ 2 ಕೋಟಿ 14 ಲಕ್ಷ 75 ಸಾವಿರ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 11ರಿಂದ ನಿನ್ನೆವರೆಗೂ (ಜೂನ್ 28) ಒಟ್ಟು ಟಿಕೆಟ್ ಮೌಲ್ಯ 54 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇನ್ನು ಶಕ್ತಿ ಯೋಜನೆ ಜಾರಿಯಾದ 18 ದಿನಗಳಲ್ಲಿ ವಾಯುವ್ಯ ಸಾರಿಗೆಯಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಪ್ರಯಾಣಿಕರ ಪ್ರಯಾಣ ಮಾಡಿದ್ದಾರೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
KSRTCಯಲ್ಲಿ ಸಂಚರಿಸಿದ ಮಹಿಳೆಯರ ಸಂಖ್ಯೆ
ಹಾಗೆಯೇ ಕರಾವಳಿಯಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಈ ಯೋಜನೆ ಜಾರಿ ಆದಾಗಿನಿಂದ ಮಹಿಳೆಯರು ರೈಲು, ಖಾಸಗಿ ಬಸ್‌ಗಳನ್ನು ಬಿಟ್ಟು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಹೀಗೆ ದಿನ ಕಳೆದಂತೆ ಸರ್ಕಾರಿ ಬಸ್‌ಗಳ ಮೆಟ್ಟಿಲು ಹತ್ತುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಹಾಗೆಯೆ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿಯಲ್ಲಿ ಎರಡು ವಲಯ ಅಂದರೆ ಕುಂದಾಪುರ, ಉಡುಪಿ ವಲಯ ಬರಲಿದೆ. ಈ ಎಲ್ಲಾ ವಲಯಗಳಲ್ಲಿ ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಭರಪೂರ ಪಡೆದುಕೊಳ್ಳುತ್ತಿದ್ದಾರೆ.
1. ಜೂನ್ 11ರಂದು ಮೊದಲ ಅರ್ಧ ದಿನದಲ್ಲಿ ಈ ನಾಲ್ಕು ವಲಯಗಳಲ್ಲಿ 5,454 ಮಂದಿ ಮಹಿಳೆಯರು ಬಸ್ ಪ್ರಯಾಣ ಮಾಡಿದ್ದಾದ್ದು, ಇವರಿಂದ ಕೆಎಸ್‌ಆರ್‌ಟಿಸಿಗೆ ಮೊದಲ ಅರ್ಧ ದಿನದಲ್ಲೇ 1,90,155 ರೂಪಾಯಿ ಆದಾಯ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2. ಜೂನ್ 12ರ ಇಡೀ ದಿನ ಮಂಗಳೂರು ವಿಭಾಗದಲ್ಲಿ 30,404 ಮಂದಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇವರಿಂದ ಕೆಎಸ್ಆರ್‌ಟಿಸಿಗೆ ಬಂದ ಆದಾಯ 12,31,753 ರೂಪಾಯಿ ಆಗಿದೆ.
3. ಜೂನ್ 13ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಈ ದಿನ ಒಟ್ಟು 48,722 ಮಹಿಳೆಯರು ಪ್ರಯಾಣಿಸಿದ್ದು, ಇವರಿಂದ ಕೆಎಸ್‌ಆರ್‌ಟಿಸಿಗೆ 17,79,720ರೂಪಾಯಿ ಆದಾಯ ಬಂದಿದೆ ಎಂದು ತಿಳಿದುಬಂದಿದೆ.
4. ಜೂನ್ 14 ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿದೆ..ಒಟ್ಟು 57,329 ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದು,20,21,008ರೂಪಾಯಿ ಆದಾಯ ಜೂನ್ 14 ರಂದು ಕೆ.ಎಸ್.ಆರ್.ಟಿ.ಸಿ ಪಾಲಾಗಿದೆ..
5. ಜೂನ್ 15 ರಂದು 61,244 ಮಂದಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇದರಿಂದ ಕೆಎಸ್‌ಆರ್‌ಟಿಸಿಗೆ 21,13,824 ರೂಪಾಯಿ ಆದಾಯ ಹರಿದುಬಂದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ
6. ಜೂನ್ 16ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಒಟ್ಟು,63,715 ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇವರಿಂದ 21,94,459 ರೂಪಾಯಿ ಆದಾಯ ಹರಿದುಬಂದಿದೆ.
7. ಇನ್ನು ಜೂನ್ 17ರಂದು ದಾಖಲೆಯ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಒಟ್ಟು 67,298 ಮಂದಿ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದು,ಇದರಿಂದ 24,20,509 ರೂಪಾಯಿ ಆದಾಯ ಸಂಗ್ರಹವಾಗಿದೆ.
8. ಜೂನ್ 18ರಂದು 51,763 ಮಂದಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದು, ಈ ದಿನ ಕೆಎಸ್‌ಆರ್‌ಟಿಸಿ 24,16,191 ರೂಪಾಯಿ ಆದಾಯವನ್ನು ಬಾಚಿಕೊಂಡಿದೆ.












Click it and Unblock the Notifications