• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಡ್ನಿಯ ಏಳು ಬೆಟ್ಟ ಮತ್ತು ಸೇತುವೆ ಹತ್ತಿಳಿದ ಅನುಭವ

By Super
|

ಸಿಡ್ನಿಯಲ್ಲಿರುವ ಸುಮಾರು 23 ಕಿ.ಮೀ. ನಡೆದು ಸಾಗುವ 'ಸೆವೆನ್ ಬ್ರಿಡ್ಜೆಸ್ಸ್ ವಾಕ್' ಕಾರ್ಯಕ್ರಮದಲ್ಲಿ ಪ್ರಸಿದ್ಧ ಸೇತುವೆಗಳಾದ ಸಿಡ್ನಿ ಹಾರ್ಬರ್ ಬ್ರಿಡ್ಜ್, ಪಿರ್ಮಾಂಟ್ ಬ್ರಿಡ್ಜ್, ಆನ್ಜಾಕ್ ಬ್ರಿಡ್ಜ್, ಐರನ್ ಕೌವ್ ಬ್ರಿಡ್ಜ್, ಗ್ಲೇಡ್ಸ್‌ವಿಲ್ ಬ್ರಿಡ್ಜ್, ಟಾರ್ಬಾನ್ ಕ್ರೀಕ್ ಬ್ರಿಡ್ಜ್, ಫಿಗ್ ಟ್ರೀ ಬ್ರಿಡ್ಜ್‌ಗಳನ್ನು ದಾಟಿದ್ದು ಜೀವನದ ಅವಿಸ್ಮರಣೀಯ ಘಟನೆ.

1. ಹಾರ್ಬರ್ ಬ್ರಿಡ್ಜ್ : 'ಕೋಟ್ ಹಾಂಗರ್'ನಂತಿರುವ ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಪ್ರಪಂಚದ ಅತ್ಯಂತ ಸುಂದರ ಸೇತುವೆಗಳಲ್ಲೊಂದು. 1932ರಲ್ಲಿ ಕಟ್ಟಿರುವ ಅತಿ ದೊಡ್ಡದಾದ (ಉದ್ದದಲ್ಲಲ್ಲ) ಈ ಸೇತುವೆ ಕಬ್ಬಿಣದ ಆರ್ಚ್‌ನಿಂದ ಕೂಡಿದ್ದು, 134 ಮೀಟರ್ ಇದ್ದು, ಬಂದರಿನ ಮೇಲೆ ನಿಂತಿದೆ. ನಾವೂ ಬ್ರಿಡ್ಜ್ ಹತ್ತಿ, ಸಿಡ್ನಿಯ ಸೌತ್ ಈಸ್ಟ್ ಸೌಂದರ್ಯವನ್ನೆಲ್ಲಾ ನೊಡಿ ಕಣ್ಣು ತುಂಬಿಸಿಕೊಂಡಿರುವೆವು. ಸಿಡ್ನಿ ಸಿಟಿ ಮತ್ತು ಉತ್ತರಭಾಗದ ಸಿಡ್ನಿಯಿಂದ ಬೇರ್ಪಡಿಸಿರುವ ಸಮುದ್ರವನ್ನು ಸೇರಿಸಿರುವ ಮಹತ್ ಸೇತುವೆ.

2. ಆನ್ಜಾಕ್ ಬ್ರಿಡ್ಜ್: 345 ಮೀಟರ್ ಅಗಲ ಹಾಗೂ 800 ಮೀಟರ್ ಉದ್ದವಿರುವ ಈ ಸೇತುವೆಯನ್ನು ಎರಡು ಗೋಪುರಗಳ ಸಹಾಯದಿಂದ ನಿಲ್ಲಿಸಲಾಗಿದೆ. 128 ಕೇಬಲ್ಲುಗಳ ಸಹಾಯದಿಂದ ನಿರ್ಮಿಸಿರುವ ಈ ಬ್ರಿಡ್ಜ್ 120 ಮೀಟರು ಎತ್ತರವಿದೆ. ಇದು ಪ್ರಪಂಚದಲ್ಲೇ ಅತಿ ಉದ್ದವಾದ ಕೇಬಲ್‌ಗಳಿಂದ ಕೂಡಿದ ಸಸ್ಪೆನ್‌ಶನ್ ಬ್ರಿಡ್ಜ್ ಎಂದು ಖ್ಯಾತವಾಗಿದೆ.

3. ಪಿರ್ಮಾಂಟ್ ಬ್ರಿಡ್ಜ್: ಇದು ಡಾರ್ಲಿಂಗ್ ಹಾರ್ಬರ್ ಮಾರ್ಗದಲ್ಲಿದೆ. ಇಲ್ಲಿಯೂ ಕೂಡ ಸಿಡ್ನಿ ಅಕ್ವೇರಿಯಂ, ವೈಲ್ಡ್ ಲೈಫ್ ವರ್ಲ್ಡ್, ಐಮಾಕ್ಸ್ ಥಿಯೇಟರ್ ಎಲ್ಲಾ ನೋಡಬಹುದು. ನಾವು ನಡೆಯುವಾಗ ಎಲ್ಲಿ ಮಾರ್ಗದರ್ಶನ ಕೊಟ್ಟಿರುತ್ತಾರೋ ಅದನ್ನು ಅನುಸರಿಸಿಯೇ ನಡೆಯಬೇಕು. ಇಲ್ಲದಿದ್ದರೆ ದಾರಿ ತಪ್ಪಿದಂತೆಯೇ.

4. ಐರನ್ ಕೌವ್ ಬ್ರಿಡ್ಜ್: ಪ್ಯಾರಮಟ್ಟಾ ನದಿ ಸಮುದ್ರ ಸೇರುವ ಮುನ್ನ ಕಟ್ಟಿರುವ ಕಬ್ಬಿಣದಿಂದಲೇ ನಿರ್ಮಿತವಾಗಿರುವ ಮುಖ್ಯ ಸೇತುವೆ.

5. ಗ್ಲೇಡ್ಸ್‌ವಿಲ್ ಬ್ರಿಡ್ಜ್: ಇದರ ವಿಶೇಷತೆಯೇನೆಂದರೆ ಒಂದೇ ಒಂದು ಉದ್ದವಾದ ಸಿಮೆಂಟ್ ಆರ್ಚ್‌ನಿಂದ ನಿರ್ಮಿತವಾಗಿದೆ. ಸಿಡ್ನಿ ಸಬರ್ಬ್‌ಗಳಾದ ಗ್ಲೇಡ್ಸ್‌ವಿಲ್ ಮತ್ತು ಡ್ರಮ್ಮಾಯಿನ್ ಈ ಸೇತುವೆ ಸೇರಿಸಿದೆ.

Wonderful trekking places in India and Australia6. ಟಾರ್ಬಾನ್ ಕ್ರೀಕ್ ಬ್ರಿಡ್ಜ್: ಈ ಬ್ರಿಡ್ಜ್ ಗ್ಲೇಡ್ಸ್‌ವಿಲ್ ಬ್ರಿಡ್ಜ್ ಮತ್ತು ಫಿಗ್ ಟ್ರೀ ಬ್ರಿಡ್ಜ್ ಮಧ್ಯದಲ್ಲಿದ್ದು, ಹನ್ಟರ್ಸ್ ಹಿಲ್ ಸಬರ್ಬ್‌ನಿಂದ ಹಂಟ್‌ಲೀಸ್ ಪಾಯಿಂಟ್ ಸಬರ್ಬ್‌ವರೆಗೆ ಚಾಚಿಕೊಂಡಿದೆ.

7. ಫಿಗ್ ಟ್ರೀ ಬ್ರಿಡ್ಜ್: ಸಿಡ್ನಿಯ ನಾರ್ಥ್-ವೆಸ್ಟರ್ನ್ ಎಕ್ಸ್‌ಪ್ರೆಸ್ಸ್‌ವೇಗೆ ದಾರಿಯಾಗಿ ಸಿಡ್ನಿ ಸಿಟಿ ಮತ್ತು ನ್ಯೂಕಾಸಲ್ ಫ್ರೀವೇಗೆ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ.

23 ಕಿ.ಮೀ ನಡಿಗೆಯುದ್ದಕ್ಕೂ ಸಿಡ್ನಿಯ ಮುಖ್ಯರಸ್ತೆಗಳು, ಉಪವನಗಳು, ಟನ್ನೆಲ್‌ಗಳನ್ನು ದಾಟಿ ಹೋಗುವುದೇ ಒಂದು ಬಗೆಯ ಆನಂದ ನೀಡುತ್ತದೆ. ಅದರಲ್ಲೂ ಪ್ರಕೃತಿ ಮಡಿಲಲ್ಲಿ ಗುಡ್ಡದ ಮೇಲೆ ಕಟ್ಟಿಕೊಂಡಿರುವ ಮನೆಗಳು ವಿಸ್ಮಯವನ್ನು ಹುಟ್ಟಿಸುತ್ತವೆ. ಬ್ರಿಡ್ಜ್ ನ ಹತ್ತಿರ ನಿರ್ಮಿಸಿದ್ದ ಪ್ರತಿ ಸ್ಟೇಷನ್‌ಗಳಲ್ಲೂ ನಮಗೆ ಕೊಟ್ಟಿದ್ದ ಪಾಸ್‌ಪೊರ್ಟ್ ತೋರಿಸಿ ಸಾಗಬೇಕು. ಒಂದು ಕಡೆ ಮಾತ್ರ ಮುಂದೆ ಹೆಜ್ಜೆ ಇಡಲಾರದಷ್ಟು ಇಳಿಜಾರಿನಿಂದ ಕೂಡಿತ್ತು.

ಪ್ರಕೃತಿ ಸೌಂದರ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳು ಸಾಕಷ್ಟು ಸಾಮ್ಯತೆಗಳಿಂದ ಕೂಡಿವೆ. ಹಳ್ಳ ಕೊಳ್ಳ ನದಿ ಝರಿ ಗುಡ್ಡ ಬೆಟ್ಟಗಳ ಸೌಂದರ್ಯ ಒಂದನ್ನೊಂದು ಮೀರಿಸುವಂತಿವೆ. ಆಸ್ಟ್ರೇಲಿಯಾಕ್ಕೆ ಬಂದವರು ಮಾತ್ರ ಈ ಏಳು ಸೇತುವೆಗಳ ನಡಿಗೆಯನ್ನು ಮಾತ್ರ ತಪ್ಪಿಸಿಕೊಳ್ಳಬಾರದು. ಏಳು ಸಮುದ್ರ ದಾಟಿ, ಏಳು ಗುಡ್ಡಗಳನ್ನು ದಾಟಿ ರಾಜಕುಮಾರಿಯನ್ನು ಪಡೆದಷ್ಟೇ ಸಂತಸವನ್ನು ಈ ನಡಿಗೆ ನೀಡುತ್ತದೆ.

« ಹಿಂದಿನ ಪುಟ

English summary
Seetha Keshava from Sydney, Australia has explained her experience of trekking in 7 hills in different part of India and 7 bridges in Sydney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X