Ganesha Chaturthi 2024: ಬೆಂಗಳೂರು-ಕಲಬುರಗಿ ವಿಶೇಷ ರೈಲು, ವೇಳಾಪಟ್ಟಿ, ನಿಲ್ದಾಣಗಳು

ಬೆಂಗಳೂರು, ಆಗಸ್ಟ್ 25: ಗಣೇಶ ಚತುರ್ಥಿ 2024ರ ಅಂಗವಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಜನರು ಯೋಜನೆ ರೂಪಿಸುತ್ತಿದ್ದಾರೆ. ಸೆಪ್ಟೆಂಬರ್ 6, 7ರಂದು ಹಬ್ಬ ಇದ್ದು, 8 ಭಾನುವಾರ ಆಗಿರುವುದರಿಂದ ಸಾಲು ಸಾಲು ರಜೆಗಳು ಸಿಗಲಿವೆ. ಆದ್ದರಿಂದ ಬೆಂಗಳೂರು ನಗರದಿಂದ ಹೊರ ಊರಿಗೆ ಪ್ರಯಾಣ ಬೆಳೆಸುವವರು ಬೇಗ ರೈಲು, ಬಸ್‌ಗಳನ್ನು ಬುಕ್ ಮಾಡಬೇಕಿದೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಮತ್ತು ಕಲಬುರಗಿ ನಡುವೆ ಭಾರತೀಯ ರೈಲ್ವೆ ವಿಶೇಷ ರೈಲನ್ನು ಓಡಿಸಲಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬೆಂಗಳೂರು-ಕಲಬುರಗಿ ನಡುವೆ ಸಂಚಾರ ನಡೆಸುವ ಜನರು ವಿಶೇಷ ರೈಲು ಸೇವೆ ಬಳಕೆ ಮಾಡಿಕೊಳ್ಳಬಹುದು.

Ganesha Chaturthi 2024 Special Train Between Bengaluru And Kalaburagi Schedule

ಈ ವಿಶೇಷ ರೈಲು ಬೆಂಗಳೂರು ನಗರದಿಂದ ಸೆಪ್ಟೆಂಬರ್ 5, 6, 7 ಮತ್ತು ಕಲಬುರಗಿಯಿಂದ 6, 7 ಮತ್ತು 8ರಂದು ಒಟ್ಟು 3 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ. ಬೆಂಗಳೂರು ನಗರದಲ್ಲಿ ಈ ರೈಲು ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡಲಿದೆ. ಉಭಯ ನಗರಗಳ ನಡುವೆ ರೈಲು ನಂಬರ್ 06589/ 06590 ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಮಾಹಿತಿ ನೀಡಿದೆ. ಈ ರೈಲುಗಳು ಒಟ್ಟು 18 ಬೋಗಿಯನ್ನು ಒಳಗೊಂಡಿದೆ.

ವೇಳಾಪಟ್ಟಿ, ನಿಲ್ದಾಣಗಳು: ರೈಲು ನಂಬರ್ 06589 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಂಗಳೂರು-ಕಲಬುರಗಿ ನಡುವೆ ಸೆಪ್ಟೆಂಬರ್ 5, 6, 7ರಂದು ಒಟ್ಟು 3 ಟ್ರಿಪ್ ಸಂಚಾರ ನಡೆಸಲಿದೆ. ರೈಲು ನಂಬರ್ 06590 ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಂಗಳೂರು ನಡುವೆ ಸೆಪ್ಟೆಂಬರ್ 6, 7, 8ರಂದು 3 ಟ್ರಿಪ್ ಸಂಚಾರ ನಡೆಸಲಿದೆ.

ಈ ರೈಲು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್ ಮೂಲಕ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.

ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌, ಬೆಂಗಳೂರು ಮತ್ತು ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವಿದೆ. ಆದರೆ ಗಣೇಶ ಚತುರ್ಥಿ ಸಮಯದಲ್ಲಿ ಉಂಟಾಗುವ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಒಟ್ಟು 3 ಟ್ರಿಪ್ ಮಾತ್ರ ಈ ರೈಲು ಸಂಚಾರವನ್ನು ನಡೆಸುತ್ತದೆ.

ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ನಡುವೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳು ಬೇಕು ಎಂಬ ಬೇಡಿಕೆ ಇದೆ. ಸದ್ಯ ಇರುವ ರೈಲುಗಳು ಪ್ರಯಾಣಿಕರಿಂದ ತುಂಬಿ ಹೋಗಿವೆ. ಹಬ್ಬದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೆಎಸ್ಆರ್‌ಟಿಸಿ ಸಹ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ಬಸ್‌ಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+