ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ: ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ, ವೀಕ್ಷಣೆಗೆ ಇಲ್ಲಿದೆ ವಿವರ

|
Google Oneindia Kannada News

ದಾವಣಗೆರೆ, ನವೆಂಬರ್‌, 10: ದಾವಣಗೆರೆ ಜಿಲ್ಲೆಯಾಗಿ 25 ವರ್ಷ ಪೂರೈಸಲಿದ್ದು ಹಾಗೂ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಗಾಜಿನಮನೆಯಲ್ಲಿ ಗುರುವಾರ (ನವೆಂಬರ್‌ 10)ರಿಂದ ನವೆಂಬರ್‌ 13ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ದಾವಣಗೆರೆ, ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ಕಾರ್ಯಕ್ರಮ ಆರಂಭಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಹೂವಿನ ಕಲಾಕೃತಿಗಳಲ್ಲಿ ಅಲಂಕರಿಸಲಾಗಿದೆ.

ಬೆಣ್ಣೆನಗರಿ ದಾವಣಗೆರೆ ಹೊಸ ಆಕರ್ಷಣೆ 'ಗ್ಲಾಸ್ ಹೌಸ್': ವಿಶೇಷತೆ, ಹೇಗೆ ತಲುಪಬೇಕು, ಶುಲ್ಕದ ವಿವರಬೆಣ್ಣೆನಗರಿ ದಾವಣಗೆರೆ ಹೊಸ ಆಕರ್ಷಣೆ 'ಗ್ಲಾಸ್ ಹೌಸ್': ವಿಶೇಷತೆ, ಹೇಗೆ ತಲುಪಬೇಕು, ಶುಲ್ಕದ ವಿವರ

ಸಂತೆಬೆನ್ನೂರು ಪುಷ್ಕರಣಿ ಮತ್ತು ವಸಂತ ಮಂಟಪವು 2 ಲಕ್ಷ ಸೇವಂತಿಗೆ ಹೂವು, 50 ಸಾವಿರ ಕೆಂಪು ಗುಲಾಬಿ ಮತ್ತು 20 ಸಾವಿರ ಆರ್ಕಿಡ್ಸ್, ಕಾರ್ನೇಷನ್, ಅಂತುರಿಯಂ, ಲಿಲ್ಲಿಯಮ್ಸ್, ಜಿಪ್ಸೊಫಿಲ ಹೂವುಗಳಿಂದ ಕಂಗೊಳಿಸುತ್ತಿದೆ. ಹಾಗೆಯೇ ಹರಿಹರದಲ್ಲಿರುವ ಹರಿಹರೇಶ್ವರ ಮೂರ್ತಿಯನ್ನು 1.30 ಲಕ್ಷ ಹೂವುಗಳಿಂದ ತಯಾರಿಸಲಾಗಿದೆ.

ಇನ್ನು ಸೆಲ್ಫಿ ಪ್ರಿಯರಿಗಾಗಿ ಐ ಲವ್ ದಾವಣಗೆರೆ ಹೂವಿನ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಹಾಗೆಯೇ 80 ಸಾವಿರ ಹೂವುಗಳಲ್ಲಿ ಡಾ. ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ತಯಾರಿಸಲಾಗಿದೆ. ವರನಟ ಡಾ.ರಾಜ್‌ಕುಮಾರ್ ಅವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಸೇರಿದಂತೆ ಹೀಗೆ ಹಲವು ವಿನ್ಯಾಸಗಳಿವೆ ಎಂದು ವಿವರಿಸಿದರು.

2022ರ ಫಲಪುಷ್ಪ ಪ್ರದರ್ಶನದ ವಿಶೇಷತೆ?

2022ರ ಫಲಪುಷ್ಪ ಪ್ರದರ್ಶನದ ವಿಶೇಷತೆ?

ಈ ಬಾರಿಯ 2022ರ ಫಲಪುಷ್ಪ ಪ್ರದರ್ಶನದಲ್ಲಿ 46 ಬಗೆಯ 15 ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸಗಳ ಜೋಡಣೆಯನ್ನು ಮಾಡಲಾಗಿದೆ. ಸಾಲ್ವಿಯಾ, ಪೆಟುನಿಯಾ, ಬೆಗೋನಿಯಾ, ಟೋರೆನಿಯಾ, ಜಿನಿಯಾ, ಸೇವಂತಿಗೆ, ಚೆಂಡು ಹೂವು, ಪೆಂಟಾಸ್‍, ಸೆಲೋಸಿಯಾ, ಡೇರೆ ಹೂವು, ಡಯಾಂಥಸ್‍, ಬಾಲ್ಸಮ್‍, ಸ್ಟ್ರೋ ಬಿಲಾಂಥಸ್, ಗೆಜೆನಿಯಾ, ಟೆಕೋಮಾ, ಅಡೇನಿಯಮ್‍, ಸೇಡಮ್‍, ಕೋಲಿಯಸ್‍, ವರ್ಬೆನಾ, ಕೆಂಪು ಕೋಲಿಯಸ್‍, ಪೆಡಿಲಾಂತಸ್‍, ಅಕಲಿಫಾ, ಕ್ರೋ ಟನ್‍, ಡ್ರೆಸಿನಾ ವೇರಿಗೆಟ, ಫೈ ಕಸ್‍, ಸ್ನೇ ಕ್‍ ಪ್ಲಾಂಟ್‍, ಅಗ್ಲೋ ನೆಮಾ, ನೆಫ್ರೋ ಲೆಪಿಸ್ ಫರ್ನ್‍, ಸ್ಕಫ್ಲೇ ರಿಯಾ, ಡ್ರೆಸಿನಾ ರಿಫ್ಲೇಕ್ಸ್, ಕೆಂಪು ಡ್ರೆಸಿನಾ, ಕ್ಯಾಕ್ಟಸ್‍, ಅಗ್ಲೊನಿಮಾ, ರಿಬ್ಬನ್‍ ಗ್ರಾಸ್‍, ಅರೆಕಾ ಪಾಮ್, ಬೌಗೆನ್ವಿಲ್ಲೆ ಕಾಗದ ಹೂವು, ಟೇಬಲ್‍ ಪಾಮ್‍ ಮತ್ತು ಸಾಗೊ ಪಾಮ್‌ಗಳನ್ನು ಬಳಸಿದ್ದು, ಪ್ರವಾಸಿಗರ ಗಮನ ಸೆಳೆಯಲಿವೆ.

ಖಾಸಗಿ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಗಾಜಿನ ಮನೆಯ ಉದ್ಯಾನದಲ್ಲಿ ಇರುವ ಅಪರೂಪದ ಅಲಂಕಾರಿಕ ಮರಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರವಾಸಿಗರಿಗೆ ಕಾರ್ಯಕ್ರಮ ವೀಕ್ಷಿಸಲು ಸೂಕ್ತ ಅವಕಾಶ ಕಲ್ಪಸಲಾಗಿದೆ.
ಮನೆಗೆ ಬಳಸಲಾದ ಗ್ಲಾಸ್‌ ಯಾವುದು?

ಮನೆಗೆ ಬಳಸಲಾದ ಗ್ಲಾಸ್‌ ಯಾವುದು?

ಸುಮಾರು 108 ಮೀಟರ್ ಉದ್ದವಿರುವ ಗಾಜಿನ ಮನೆಯ ಅಗಲ 68 ಮೀಟರ್‌ ಇದ್ದು, 18 ಮೀಟರ್ ಎತ್ತರ ಇದೆ. ಇದನ್ನು ಸೇಂಟ್ ಗೊಬೇನ್ ಗ್ಲಾಸ್‌ಗಳನ್ನು ಬಳಸಿ ವೈವಿಧ್ಯಮಯವಾಗಿ ವಿನ್ಯಾಸ ರೂಪಿಸಲಾಗಿದೆ. ಒಳಗಡೆ ಗ್ರಾನೈಟ್ ನೆಲಹಾಸು ಅಳವಡಿಸಲಾಗಿದೆ. ಸೂರ್ಯನ ತಪ್ಪಿಸುವಂತೆ ಗ್ಲಾಸ್‌ಗಳನ್ನು ಹೊಂದಿಸಲಾಗಿದೆ. ಇದರಿಂದಾಗಿ ಬಿಸಿಲಿನ ತಾಪ ಒಳಗಡೆ ಬರುವುದಿಲ್ಲ. ಬದಲಾಗಿ ಇಲ್ಲಿ ತಂಪೆನೆಯ ವಾತಾವರಣದ ಜೊತೆಗೆ ತಂಗಾಳಿಯ ಅನುಭವ ಆಗುತ್ತದೆ. ಇದು ಇಲ್ಲಿಗೆ ಬರುವವರಿಗೆ ಮತ್ತಷ್ಟು ಸಂತೋಷ ನೀಡುತ್ತದೆ.

ವಿದೇಶಗಳಿಂದ ಗಿಡಗಳ ಆಮದು

ವಿದೇಶಗಳಿಂದ ಗಿಡಗಳ ಆಮದು

ಇನ್ನು ಇಲ್ಲಿ ಇದೀಗ ಉದ್ಯಾನವನವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಸ್ಪೈನ್, ಪಿಲಿಫೈನ್ಸ್, ಥೈಲಾಂಡ್‌ನಿಂದ ಇಲ್ಲಿಗೆ 300 ರಿಂದ 400 ಗಿಡಗಳನ್ನು ತಂದು ನೆಡಲಾಗಿದೆ. ಈ ಮಧ್ಯೆ ಸಂಗೀತ ಕಾರಂಜಿಯೂ ಇಲ್ಲಿದ್ದು, ಪ್ರವಾಸಿಗರಿಗೆ ಮತ್ತಷ್ಟು ರಂಗು ನೀಡುತ್ತಿದೆ.

ಇಲ್ಲಿ ವರ್ಷಕ್ಕೊಮ್ಮೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಹೂವು ಪ್ರಿಯರಿಗೆ, ಪ್ರವಾಸಿಗರಿಗೆ ಈ ತಾಣ ಮುದ ನೀಡುವುದಲ್ಲದೇ, ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಬೇಕು ಎನಿಸುವಷ್ಟರ ಮಟ್ಟಿಗೆ ಗಮನ ಸೆಳೆಯುತ್ತಲೇ ಇದೆ. ಇಲ್ಲಿನ ಗ್ಲಾಸ್ ಹೌಸ್ ಈಗ ಕೇವಲ ದಾವಣಗೆರೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಪ್ರಖ್ಯಾತಿ ಪಡೆದಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಾಜಿನ ಮನೆಯ ವಿಶೇಷತೆ ಏನು?

ಗಾಜಿನ ಮನೆಯ ವಿಶೇಷತೆ ಏನು?

ಪ್ರವಾಸಿರು ಎಂಜಾಯ್ ಮಾಡಲು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು. ಆದರೆ ಇದೀಗ ಅದೆಷ್ಟೋ ಜನರು ಕುಟುಂಬ ಸಮೇತರಾಗಿ ಗ್ಲಾಸ್ ಹೌಸ್‌ಗೆ ಬಂದು ಇಲ್ಲಿನ ಸೌಂದರ್ಯವನ್ನು ಸವಿದು ಹೋಗುತ್ತಿರುವುದು ತುಂಬಾ ವಿಶೇಷವಾಗಿದೆ. ವೀಕೆಂಡ್‌ನಲ್ಲಿ ಸಾವಿರಾರು ಜನ ಇಲ್ಲಿಗೆ ಮಕ್ಕಳೊಂದಿಗೆ ಬಂದು ಎಂಜಾಯ್ ಮಾಡುತ್ತಿದ್ದಾರೆ. ಯುವಕ, ಯುವತಿಯರಂತೂ ಇಲ್ಲಿಗೆ ಬಂದರೆ ತಮ್ಮದೊಂದು ಸೆಲ್ಫಿ ಫೋಟೋ ತೆಗೆದುಕೊಂಡು ಹೋಗದೆ ಹಿಂದಿರುಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಸೌಂದರ್ಯ ಯುವಜನತೆಯನ್ನು ತನ್ನತ್ತ ಸೆಳೆಯುತ್ತಿದೆ.

English summary
Flower show will be held at laregest Glass House in Davanagere from November 10th to 13th know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X