ಬೆಂಗಳೂರಿನಲ್ಲಿ ದುರ್ಗಾ ಪೂಜೆ ನೋಡಬೇಕಾ? ಹಾಗಾದರೆ ಈ ಸ್ಥಳಗಳಿಗೆ ಭೇಟಿ ನೀಡಿ...
ಬೆಂಗಳೂರು ಅಕ್ಟೋಬರ್ 13: ದೇಶದೆಲ್ಲೆಡೆ ಜನರು ನವರಾತ್ರಿ ಹಬ್ಬದ ಆಚರಣೆಗೆ ಸಿದ್ಧರಾಗಿದ್ದಾರೆ. ಭಾನುವಾರದಿಂದ (ಅಕ್ಟೋಬರ್ 15) ನವರಾತ್ರಿ ಪೂಜೆಯ ಮೊದಲನೇ ದಿನ ಆರಂಭವಾಗಲಿದೆ. ಈ ಹಬ್ಬವನ್ನು ದೇಶದ ಹಲವೆಡೆ ಅತ್ಯಂತ ವಿಶೇಷವಾಗಿ ಆಚರಿಸಿದರೂ ಕೋಲ್ಕತ್ತಾದಲ್ಲಿ ಈ ಹಬ್ಬವನ್ನು ಕಣ್ತುಂಬಿಕೊಳ್ಳುವುದು ಅದೃಷ್ಟ.
ದುರ್ಗಾ ಪೂಜೆಯು ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ ಬೆಂಗಳೂರಿನಲ್ಲೂ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಹೌದು.. ಉದ್ಯಾನ ನಗರಿಯಲ್ಲಿ ನವರಾತ್ರಿಯ ಆಚರಣೆಗೆ ಜನ ಸಜ್ಜಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹೂವುಗಳು, ಅಲಂಕಾರಿಕ ವಸ್ತುಗಳು, ಬಗೆ ಬಗೆಯ ದ್ವೀಪಗಳ ಕಂಗೊಳಿಸುತ್ತಿವೆ.

ನವರಾತ್ರಿಯ ದುರ್ಗಾ ಪೂಜೆಯು ಬಂಗಾಳಿ ಸಮುದಾಯದಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ಹಲವೆಡೆ ಬಗೆ ಬಗೆಯ ಪೆಂಡಾಲ್‌ಗಳಲ್ಲಿ ಬೃಹತ್ ದುರ್ಗಾ ದೇವಿ ಮೂರ್ತಿಯನ್ನು ಅಲಂಕರಿಸಿ ಒಂಬತ್ತು ದಿನಗಳವರೆಗೆ ಪೂಜಿಸಲಾಗುತ್ತದೆ. ಇಂತಹ ಸಂಭ್ರಮದಲ್ಲಿ ನೀವು ಕೂಡ ಭಾಗಿಯಾಗಲು ಯೋಚಿಸುತ್ತಿದ್ದರೆ ಬಯಸುವಿರಾ. ಹಾಗಂತ ನೀವು ಕೋಲ್ಕತ್ತಾಗೆ ಹೋಗಬೇಕು ಎಂದಿಲ್ಲ. ಬೆಂಗಳೂರಿನಲ್ಲಿ ದುರ್ಗಾ ಪೂಜೆಯನ್ನು ಕಣ್ತುಂಬಿಕೊಳ್ಳಬಹುದು.
ಹಾಗಾದರೆ ಬೆಂಗಳೂರಿನಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ನೀವು ಭೇಟಿ ನೀಡಲು ಕೆಲವು ಉತ್ತಮವಾದ ಪ್ಯಾಂಡಲ್‌ಗಳು ಇಲ್ಲಿವೆ. ಇದು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
1. ಬಾರ್ಷಾ ದುರ್ಗಾ ಪೂಜಾ, HSR ಲೇಔಟ್ (BARSHA Durga Puja)
ಬೆಂಗಳೂರಿನಲ್ಲಿ ನವರಾತ್ರಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಸ್ಥಳಗಳಲ್ಲಿ ಸರ್ಜಾಪುರ ರಸ್ತೆಯಲ್ಲಿರುವ HSR ಲೇಔಟ್ ಕೂಡ ಒಂದು. ಇಲ್ಲಿ ದುರ್ಗಾ ದೇವಿಗೆ ಬೆಂಗಳೂರಿನಲ್ಲೇ ಅತಿ ದೊಡ್ಡ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಇಲ್ಲಿ ಬೆಂಗಾಲಿ ಸಮುದಾಯದವರು ಅತ್ಯಂತ ಬೃಹತ್ ಪೆಂಡಾಲ್‌ನಲ್ಲಿ ದುರ್ಗಾ ದೇವಿಯನ್ನು ಪೂಜಿಸುವ ಮೂಲಕ ಒಂಬತ್ತು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ರಾತ್ರಿ ಶಿವ ತಾಂಡವ ನೃತ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ನಕ್ಷತ್ರಗಳು ಮಿನುಗುವಂತೆ ಅದ್ಭುತ ಬೆಳಕಿನ ಕಿರಣಗಳು ಸ್ವರ್ಗದ ಭಾವ ಮೂಡಿಸುತ್ತವೆ. ಚಂದ್ರಯಾನ 3 ಚಂದ್ರನ ಕ್ಷೇತ್ರಕ್ಕೆ ಲಗ್ಗೆ ಇಡುವುದು ಕೂಡ ಅದ್ಬುತ ಇಲ್ಲಿನ ಅದ್ಬುತ ನೋಟಗಳಲ್ಲಿ ಒಂದಾಗಿದೆ. ಬಾರ್ಷಾ ಬೆಂಗಾಲಿ ಅಸೋಸಿಯೇಷನ್ ಅವರು ಪ್ರತೀ ಬಾರಿ ವಿಶೇಷವಾಗಿ ದುರ್ಗಾ ಪೂಜಾ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.
ಸ್ಥಳ: ಬಾರ್ಷಾ ದುರ್ಗಾ ಪೂಜಾ ಮೈದಾನ, ಎಚ್‌ಎಸ್‌ಆರ್ ವಿಸ್ತರಣೆ, ಹರ್ಲೂರ್, ಸರ್ಜಾಪುರ ರಸ್ತೆ
2. ಅತ್ಯಂತ ಹಳೆಯ ದುರ್ಗಾ ಪೂಜೆ, ಹಲಸೂರು (Bangalore's oldest Durga Puja)
ಬೆಂಗಳೂರಿನ ಹಲಸೂರಿನಲ್ಲಿ ಬೆಂಗಾಲಿ ಅಸೋಸಿಯೇಷನ್ ಕಡೆಯಿಂದ ತುಂಬಾ ವರ್ಷಗಳಿಂದಲೂ ದುರ್ಗಾ ಪೂಜೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಸುಮಾರು 73 ವರ್ಷಗಳಿಂದ ದುರ್ಗಾ ಪೂಜೆ ಮಾಡುವ ಸಂಪ್ರದಾಯ ಇಲ್ಲಿದೆ. ಬಂಗಾಳದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ "ಹನ್ನೆರಡು ತಿಂಗಳುಗಳಲ್ಲಿ ಹದಿಮೂರು ಹಬ್ಬಗಳು'' ಎಂಬ ಥೀಮ್‌ನೊಂದಿಗೆ ಈ ಬಾರಿ ಇಲ್ಲಿ ಪೂಜಿಸಲಾಗುತ್ತಿದೆ.
ಸ್ಥಳ: 1/ಎ, ಅಸ್ಸಯ್ಯಿ ರಸ್ತೆ, ಶಿವನ್ ಚೆತ್ತಿ ಗಾರ್ಡನ್ ಪೋಸ್ಟ್, ಶಿವನ್‌ಚೆತ್ತಿ ಗಾರ್ಡನ್ಸ್, ಬೆಂಗಳೂರು
Location: https://goo.gl/maps/1PZKaPeoiZHG3xEy7
3. ಆರ್‌ಟಿ ನಗರ ದುರ್ಗಾ ಪೂಜೆ, ಅರಮನೆ ಮೈದಾನ (RT Nagar Durga Puja)
ಆರ್‌ಟಿ ನಗರ ಅರಮನೆ ಮೈದಾನದಲ್ಲಿ ದುರ್ಗಾ ಪೂಜೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿ ದಾಂಡಿಯಾ(ಕೋಲಾಟ) ಕೂಡ ಆಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಜೋಲರ್ ಗಾನ್, ದೋಹರ್ ಮತ್ತು ಅನನ್ಯಾ ಚಕ್ರವರ್ತಿ ಪ್ರದರ್ಶನ ನೀಡಲಿದ್ದಾರೆ.

ಸ್ಥಳ: ಪ್ರಿನ್ಸೆಸ್ ಗ್ರೀನ್, ಗೇಟ್ 9, ಬಳ್ಳಾರಿ ರಸ್ತೆ
https://goo.gl/maps/KJzriCi24TKZMKD66
4. ಓಯಿಕೋಟನ್ ಹೆಬ್ಬಾಳ ದುರ್ಗೋತ್ಸವ, ಹೆಬ್ಬಾಳ (Oikotan Hebbal Durgotsav)
ಹೆಬ್ಬಾಳದಲ್ಲಿ ದುರ್ಗೋತ್ಸವ ನಡೆಯಲಿದೆ. ಓಯಿಕೋಟಾನ್ ಹೆಬ್ಬಾಳ್ ದುರ್ಗೋತ್ಸವ 2023 ಈ ವರ್ಷ ವಿಶಿಷ್ಟವಾದ ಥೀಮ್ ಅನ್ನು ಪ್ರಸ್ತುತಪಡಿಸುತ್ತಿದೆ. ಅದುವೇ "ವಿಶ್ವ ಶಾಂತಿ". ಈ ಕಾರ್ಯಕ್ರಮದ ಮೂಲಕ ಪ್ರೀತಿ, ಸ್ವಾತಂತ್ರ್ಯ, ಸಂತೋಷ, ನಂಬಿಕೆ ಏಕತೆ ಮತ್ತು ಸಾಮರಸ್ಯಯನ್ನು ಸಾರಲಾಗುತ್ತದೆ.
Location: https://maps.app.goo.gl/bKCWHMCGq5m7xrqv7
5. ಬೇಗೂರು ದುರ್ಗಾ ಪೂಜೆ
ಬೇಗೂರ್ ಬೆಂಗಾಲಿ ಸೋಶಿಯೋ ಕಲ್ಚರಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ದುರ್ಗಾ ಪೂಜೆ ನಡೆಯಲಿದೆ. ಇಲ್ಲಿ ಬೆಂಗಾಲಿ ಸಮುದಾಯದ ಮಹಿಳೆಯರ ಸಾಧನೆಯನ್ನು ಪ್ರದರ್ಶಿಸಲಾಗುತ್ತದೆ. ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಈ ಉತ್ಸವದಲ್ಲಿ 'ಮಹಿಳಾ ಸಬಲೀಕರಣ'ದ ಸಾರವನ್ನು ಸಾರಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಮತ್ತು ಮೊನಾಲಿ ಠಾಕೂರ್ ಪ್ರದರ್ಶನ ನೀಡುತ್ತಿದ್ದಾರೆ.
ಸ್ಥಳ: ಡಿಎಲ್‌ಎಫ್ ರೋಡ್, ಆಫ್ ಬನ್ನೇರ್‌ಘಟ್ಟ ಮುಖ್ಯರಸ್ತೆ, ಅಕ್ಷಯ್ ನಗರ, ಬೇಗೂರು ಹೊಬ್ಳಿ, ಬೆಂಗಳೂರು.
Location: https://maps.app.goo.gl/LCRnjeywMM3RWD2J7












Click it and Unblock the Notifications